ಲೋಕದರ್ಶನ ವರದಿ
ಬೆಳಗಾವಿ 09: ಕೆಎಲ್ಇ ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರ, ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಹಾಗೂ ಲೈನ್ಸ ಕ್ಲಬ್ ಆಫ್ ಬೆಳಗಾವಿ ಕೆಎಲ್ಇ ಕ್ಯಾಂಪಸ್ ಇವರ ಸಹಯೋಗದಲ್ಲಿ ಕಣಬರಗಿಯ ಸಾಗರ ನಗರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಪ್ರಯುಕ್ತ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕೆಎಲ್ಇ ಡಾ ಪ್ರಭಾಕರ ಕೋರೆ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾಗಿರುವ ಡಾ ಎಮ್ ಬಿ ಬೆಲ್ಲದ, ಲೈನ್ಸ ಕ್ಲಬ್ ಆಫ್ ಬೆಳಗಾವಿ ಕೆಎಲ್ಇ ಕ್ಯಾಂಪಸ್ನ ಅಧ್ಯಕ್ಷರಾಗಿರುವ ಡಾ ಉಮೇಶ ಹರಕುಣಿ, ಕ್ಲಬ್ನ ಉಪಾಧ್ಯಕ್ಷರಾದ ಅನೀಲ ಹಾರುಗೊಪ್ಪ, ಸಕರ್ಾರಿ ವೈದ್ಯಾಧಿಕಾರಿಗಳಾದ ಡಾ ಜಯಾನಂದ ಧನವಂತ, ಡಾ. ಅನುಪಮಾ ತುಕ್ಕಾರ, ಡಾ ತನ್ಮಯ ಗುಪ್ತಾ, ಡಾ ಪದ್ಮಿನಿ ಇವರುಗಳು ರೋಗಿಗಳ ತಪಾಸಣೆ ಕೈಗೊಂಡರು
ಈ ಸಂದರ್ಭದಲ್ಲಿ ಮಾತನಾಡಿದ ಡಾ ಬೆಲ್ಲದ ಆರೋಗ್ಯ ಜಾಗೃತಿಯ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ಹೆರಿಗೆ ಸಮಯದಲ್ಲಿ ತಾಯಿ ಮಗುವಿನ ಮರಣ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕದ ವಿಷಯ ಮಹಿಳೆ ಪರಿವಾರದೊಂದಿಗೆ ತನ್ನ ಆರೋಗ್ಯದ ಬಗ್ಗೆ ಕೂಡ ಗಮನ ಹರಿಸುವಂತೆ ಕರೆ ಕೊಟ್ಟರು.
ಈ ಶಿಬಿರದಲ್ಲಿ ಎರಡನೂರಕ್ಕೂ ಹೆಚ್ಚುಮಕ್ಕಳು ಮಹಿಳೆಯರು ಮತ್ತು ವೃದ್ದರು ಬಾಗವಹಿಸಿ ಶಿಬಿರದ ಉಪಯೋಗ ಪಡೆದುಕೊಂಡರು ಶಿಬಿರಾಥರ್ಿಗಳಿಗೆ ಉಚಿತವಾಗಿ ಅವಶ್ಯಕ ಮಾತ್ರೆಗಳು ಮತ್ತು ಔಷದಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವೇಣುದ್ವನಿ ಕಾರ್ಯಕ್ರಮ ನಿವರ್ಾಹಕಿ ಸುನಿತಾ ದೇಸಾಯಿ ಮತ್ತುಡಾ ಸದಾನಂದ ನಂದಿಹಳ್ಳಿ ಉಪಸ್ಥಿತರಿದ್ದರು.