ಜೆ.ಎಸ್‌.ಎಸ್‌. ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

International Women's Day Celebration at JSS

ಜೆ.ಎಸ್‌.ಎಸ್‌. ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಧಾರವಾಡ 13 : ಇಲ್ಲಿಯ ಜೆ.ಎಸ್‌.ಎಸ್‌. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಭಾರತೀಯ ಮಹಿಳೆಯರು ಅನ್ಯ ದೇಶದ ಮಹಿಳೆಯರಿಗೆ ಆದರ್ಶ ಪ್ರಾಯರಾಗಿದ್ದಾರೆ. ನಮ್ಮೆಲ್ಲರನ್ನು ಹೊತ್ತ ಭೂಮಿ ಹೆಣ್ಣು, ನಮ್ಮನ್ನು ಹೆತ್ತ ತಾಯಿ ಹೆಣ್ಣು, ಮನವನ್ನು ಗೆದ್ದ ಮಡದಿ, ಮನೆಯನ್ನು ಬೆಳಗುವ ಮಗಳು ಹೆಣ್ಣು, ಮಗಳಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ, ತಾಯಾಗಿ, ಅತ್ತೆಯಾಗಿ, ಅಜ್ಜಿಯಾಗಿ ಎಲ್ಲಾ ಹಂತಗಳಲ್ಲಿಯೂ ತನ್ನ ಪಾತ್ರವನ್ನು ಜವಾಬ್ದಾರಿಯಿಂದ ಅಚ್ಚುಕಟ್ಟಾಗಿ ನಿರ್ವಹಿಸುವವಳು ಹೆಣ್ಣು. ಇಂತಹ ಸ್ತ್ರೀಯರನ್ನು ಎಲ್ಲಿ ಪೂಜ್ಯ ಭಾವನೆಯಿಂದ ಗೌರವಿಸುತ್ತಾರೋ ಅಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ. ವಿದ್ಯೆಗೆ ಸರಸ್ವತಿ, ಸಹನೆಗೆ ಶಾರದೆ, ಸಂಪತ್ತಿಗೆ ಮಹಾಲಕ್ಷ್ಮೀ, ಶಕ್ತಿಗೆ ಪಾರ್ವತಿ, ಹಸಿದ ಒಡಲಿಗೆ ಅನ್ನಪೂರ್ಣೆಯಾಗಿ ದುಷ್ಟರ ಸಂಹಾರಕ್ಕೆ ಮಹಾಕಾಳಿಯು ಆಗುವ ಸಾಮರ್ಥ್ಯ ಪ್ರತಿಯೊಬ್ಬ ಮಹಿಳೆಯಲ್ಲಿಯೂ ಇದೆ ಎಂದು ಗೌರವ ಉಪಸ್ಥಿತಿಯಲ್ಲಿದ್ದ ಶ್ರೀಮತಿ. ವಾಣಿಶ್ರೀ ಪ್ರಸಾದ ಜೈನ ಅವರು ಸ್ತ್ರೀಯರ ಕುರಿತು ಇರುವ ಸುವಿಚಾರಗಳನ್ನು ಅಭಿವ್ಯಕ್ತಗೊಳಿಸಿದರು.ಕೌಟುಂಬಿಕ ದೌರ್ಜನ್ಯ, ಶೋಷಣೆ, ಬಾಲ್ಯ ವಿವಾಹ, ವಿಧವಾ ಪುನರ್ ವಿವಾಹ, ಸತಿಸಹಗಮನ ಪದ್ಧತಿಗಳು ಈ ಹಿಂದೆ ಮಹಿಳೆಯರ ಮೇಲೆ ನಡೆಯುತ್ತಿದ್ದವು. ಆದರೆ ಇಂತಹ ದೌರ್ಜನ್ಯವನ್ನು ಹೋಗಲಾಡಿಸಲು ಸಾವಿತ್ರಿಬಾಯಿ ಪುಲೆ, ಅಹಲ್ಯಬಾಯಿ ಹೊಳಕರ, ಸರೋಜಿನಿ ನಾಯ್ಡು, ಅನಿಬೆಸೆಂಟರ್, ಮೇರಿಕ್ಯೂರಿ, ಮೇಡಂ ಕಾಮಾ, ಕಿತ್ತೂರ ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕಾ, ಬೆಳವಡಿ ಮಲ್ಲಮ್ಮಾ, ಕಲ್ಪನಾ ಚಾವ್ಲಾ, ಪಿ.ಟಿ. ಉಷಾ, ಸೈನಾ ನೇಹ್ವಾಲ್, ಮನು ಬಾಕರ್, ಕಮಲಾ ಸಿದ್ಧಿ ಮುಂತಾದವರ ಶ್ರಮ ಹೋರಾಟದ ಪ್ರತಿಫಲ ಇಂದು ಲಿಂಗ-ಭೇದವಿಲ್ಲದ ಶಿಕ್ಷಣಗಳು ದೊರೆಯತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದ್ದು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸುತ್ತಾ ಮುನ್ನಡೆಯುತ್ತಿದ್ದಾರೆ. ಆದರೆ ಅನೇಕ ಮಹಿಳೆಯರು ಇಂದು ಎದುರಿಸುತ್ತಿರುವ ಹೊಸ ಸಮಸ್ಯೆ ಖಿನ್ನತೆ, ಖಿನ್ನತೆಗೆ ಕಾರಣವಿಲ್ಲ ಎಲ್ಲ ಕೆಲಸ ಕಾರ್ಯಗಳಲ್ಲಿಯು ಒಲ್ಲದ ಮನಸ್ಸು ದೈಹಿಕ ಚಟುವಟಿಕೆಗಳಿಲ್ಲದೇ ಸ್ಥೂಲಕಾಯರಾಗಿ ಅನೇಕ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮೊಬೈಲ್, ಇನ್ಸಾ-್ಟಗ್ರಾಮ್, ಪಬ್ಬಜಿ, ಬ್ಲೂವೆಲ್ ಚಾಲೆಂಜ್ ಇಂತಹ ದುರ್ಬಳಕೆಯಿಂದ ನವೀನ ಆವಿಷ್ಕಾರಗಳ ಹೊಸ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಡಾ. ಸ್ವಪ್ನಾ ಪಾಂಡುರಂಗಿ ಅವರು ತಮ್ಮ ಅತಿಥಿಪರ ನುಡಿಗಳನ್ನಾಡುತ್ತಾ ಜ್ವಲಂತ ಸಮಸ್ಯೆಗಳನ್ನು ವಿವರಿಸಿದರು. ಹೆಣ್ಣು ಮಕ್ಕಳಿಗೆ ಶಿಕ್ಷಣದೊಂದಿಗೆ ಸ್ವರಕ್ಷಣೆಯ ಜಾಗೃತಿ ಮೂಡಿಸಿ ಸಮಾಜದಲ್ಲಿ ಸದೃಢರಾಗುವಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡರೆ ಸುರಕ್ಷಿತ ರಾಷ್ಟ್ರ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲವೆಂದರು. ಆವಂತಿಕಾ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಮಹಿಳಾ ಸಿಬ್ಬಂದಿಯವರಾದ ಡಾ. ಕವಿತಾ ಭಜಂತ್ರಿ, ಡಾ. ವೀಣಾ ಭಟ್ಟ, ಡಾ. ಅನಿತಾ ಪುರಾಣಿಕ, ಡಾ. ಲತಾ ಕುಲಕರ್ಣಿ ಇವರುಗಳಿಗೆ ಗೌರವ ಡಾಕ್ಟರೇಟ್ ಪದವಿಗಾಗಿ ಹಾಗೂ ಶ್ರೀಮತಿ. ಸುರೇಖಾ ಹುಬ್ಬಳ್ಳಿ,  ಚೇತನಾ ಕೋರಿಶೆಟ್ಟರ, ಕುಮಾರಿ. ವಾಣಿಶ್ರೀ, ಕು. ರಚನಾ ಗಾಂವಕರ ಇವರು ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದರಿಂದ ಇವರುಗಳನ್ನು ಸನ್ಮಾನಿಸಲಾಯಿತು. ಮಹಿಳಾ ಸಬಲೀಕರಣ ಘಟಕದ ಕಾರ್ಯದರ್ಶಿ ಶಿಲ್ಪಾ ಆಡೂರ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ರತ್ನಾ ಐರಸಂಗ ಅತಿಥಿಗಳನ್ನು ಪರಿಚಯಿಸಿದರು.  ಸುಮಂಗಲಾದೇವಿ ಪುಷ​‍್ಾರೆ್ಪಣಯನ್ನು ನೆರವೆರಿಸಿದರು. ಕು. ಈಶ್ವರಿ ಪ್ರಾರ್ಥಿಸಿದರು.  ವೀಣಾ ಭಟ್ಟ ವಂದಿಸಿದರು. ಕು. ಸಾಯಿಸೀರ್ಜಾ ನಿರೂಪಿಸಿದರು. ಮಹಾವಿದ್ಯಾಲಯದ ಸಮಸ್ತ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.