ಅಂತರರಾಷ್ಟ್ರೀಯ ವಾಣಿಜ್ಯ ಮೇಳ : ಉತ್ಪಾದನೋತ್ತರ ಕೃಷಿ- ರೈತರ ಸಬಲೀಕರಣ ಮೇಳ
International Trade Fair: Post-Production Agriculture - Farmers Empowerment Fair
ಗದಗ 07: ತ್ರಿಪುರವಾಸಿನಿ, ಅರಮನೆ ಮೈದಾನ, ಬೆಂಗಳೂರು ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026 ರಲ್ಲಿ ಫೆಬ್ರುವರಿ 06 ರಂದು ಕೃಷಿ ಪಂಡಿತ ಪ್ರಶಸ್ತಿ ಹಾಗೂ ಕೃಷಿ ಪ್ರಶಸ್ತಿ ವಿಜೇತರನ್ನು ಮಾನ್ಯ ಮುಖ್ಯ ಮಂತ್ರಿಗಳು,ಸಿದ್ದರಮಯ್ಯನವರು ಸನ್ಮಾನಿಸಿದರು. ಗದಗ ಜಿಲ್ಲೆಯ ಶ್ರೀಮತಿ ಮಂಗಳಾ ನೀಲಗುಂದ, ಸಾ:: ಮುಳಗುಂದ, ತಾ::ಗದಗ ಇವರು ಕೃಷಿ ಪಂಡಿತ ಪ್ರಶಸ್ತಿಯನ್ನು ಸ್ವೀಕರಿಸಿದರು.
ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ಬೀಜಾಮೃತ, ಜೀವಾಮೃತ, ನೀಮಾಸ್ತ್ರ, ದಶಪರ್ಣಿ, ಬ್ರಹ್ಮಾಸ್ತ್ರ ಇತ್ಯಾದಿ ನೈಸರ್ಗಿಕ ಉತ್ಪನ್ನಗಳ ಗದಗ ಜಿಲ್ಲೆಯ ಮಳಿಗೆಯಲ್ಲಿ, ನೈಸರ್ಗಿಕ ಉತ್ಪನ್ನಗಳ ಉಪಯೋಗ, ಮಾಡುವ ಹಾಗೂ ಬಳಸುವ ವಿಧಾನಗಳನ್ನು ನೈಸರ್ಗಿಕ ಕೃಷಿಕರು ಹಾಗೂ ಜೈವಿಕ ಪರಿಕರ ಸಂಪನ್ಮೂಲ ಕೇಂದ್ರ(ಃಖಅ) ಬಸವರಾಜ ನಾವಿ ರೈತರಿಗೆ ವಿವರಿಸಿದರು. ಸಾವಿರಾರು ರೈತರು ಮಳಿಗೆಗೆ ಭೇಟಿಕೊಟ್ಟು ಮಾಹಿತಿ ಪಡೆದರು.
ಮರೆತು ಹೋದ ಖಾದ್ಯಗಳ ಸ್ಪರ್ಧೆಯ ವಿಜೇತರಾದ ಶಿಲ್ಪಾ ಅಂಗಡಿ, ಸಾ::ಹುಲಕೋಟಿ, ತಾ:: ಗದಗ ಇವರು ಗುಳ್ಳಡಿಕಿ ಲಾಡುಗಳನ್ನು ಪ್ರದರ್ಶನಕ್ಕೆ ಇರಿಸಿದ್ದರು. ಈಗಿನ ಜನಾಂಗವು ಪಿಜ್ಜಾ, ಬರ್ಗರ್, ಕುರ್ಕುರೆಯಂತಹ ಅನಾರೋಗ್ಯಕರ ಆಹಾರಗಳನ್ನು ತ್ಯಜಿಸಿ ನಮ್ಮ ಪೂರ್ವಜರ ಕಾಲದಿಂದ ಬಂದಂತಹ, ಈಗ ಮರೆತುಹೋದ ಖಾದ್ಯಗಳನ್ನು ಮನೆಯಲ್ಲಿಯೇ ಮಾಡಿ ತಿನ್ನುವುದರ ಲಾಭಗಳನ್ನು ಅವರು ವಿವರಿಸಿದರು. ಮಳಿಗೆಗೆ ಭೇಟಿ ನೀಡಿ ಸಾವಿರಾರು ಜನರು ಖಾದ್ಯದ ಮಾಹಿತಿಯನ್ನು ಪಡೆದರು. ಈ ಮಳಿಗೆಗಳಿಗೆ ಮಾನ್ಯ ಕೃಷಿ ಸಚಿವರು ಭೇಟಿ ನೀಡಿ ಗುಳ್ಳಡಿಕಿ ಲಾಡುವನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 