ಅಂತರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ: ಫಕ್ರುದ್ದೀನ್ ತಳಕಲ್ ಕಲೆಗೆ ಅಭಿನಂದನಾ ಪತ್ರ

ಲೋಕದರ್ಶನ ವರದಿ

ಕೊಪ್ಪಳ ಫೆ.19: ಪಕ್ಕದ ಮಹಾರಾಷ್ಟ್ರ ರಾಜ್ಯದ ಪುಣೆ ಮಹಾನಗರದ ಬಾಲಗಂಧರ್ವ ಆಟರ್್ ಗ್ಯಾಲರಿ ಆವರಣದಲ್ಲಿ ಇತ್ತೀಚಿಗೆ ಜರುಗಿದ ಅಂತರಾಷ್ಟ್ರೀಯ ಮಟ್ಟದ ಚಿತ್ರಕಲಾ ಪ್ರದರ್ಶನ ಜರುಗಿತು. ಇದರಲ್ಲಿ ನಮ್ಮ ಕೊಪ್ಪಳ ಜಿಲ್ಲೆಯ ತಳಕಲ್ ಗ್ರಾಮದ ಚಿತ್ರಕಲಾವಿದ ವಿ.ಫಕ್ರುದ್ದೀನ್ ಅವರು ಭಾಗವಹಿಸಿ ತಮ್ಮ ಕಲಾಪ್ರದರ್ಶನವನ್ನು ಮಾಡಿ ದೇಶ-ವಿದೇಶಿಗರ ಮೆಚ್ಚುಗೆಗೆ ಪಾತ್ರರಾಗಿ ಕಾರ್ಯಕ್ರಮದ ಸಂಘಟಕರಿಂದ ಅಭಿನಂದನಾ ಪತ್ರಗಳಿಸಿ ಜಿಲ್ಲೆಗೆ ಕೀತರ್ಿ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. 

 ಅಂತರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ನಮ್ಮ ಭಾರತ ದೇಶ ಸೇರಿದಂತೆ ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಯೂರೋಫ್, ಮಾಲಾವಿ ಸೇರಿದಂತೆ ಅನೇಕ ದೇಶಗಳ ಮೂಲೆ-ಮೂಲೆಗಳಿಂದ ಮತ್ತು ನಮ್ಮ ಭಾರತ ದೇಶದ ವಿವಿಧ ರಾಜ್ಯಗಳಿಂದ ಚಿತ್ರಕಲಾವಿದರು ಭಾಗವಹಿಸಿದ್ದು, ನಮ್ಮ ಕನರ್ಾಟಕ ರಾಜ್ಯದಿಂದ ಸಹ ಸುಮಾರು ನಾಲ್ಕು ಜನ ಚಿತ್ರಕಲಾವಿದರು ಭಾಗವಹಿಸಿ ತಮ್ಮ ಕಲೆಯನ್ನು ಪ್ರದಶರ್ಿಸಿದರು. ಇದರಲ್ಲಿ ನಮ್ಮ ಕೊಪ್ಪಳ ಜಿಲ್ಲೆಯಿಂದ ಕ್ಲಾಸಿಕ್ ಪೆಂಟರ್ ಎಂದೇ ಖ್ಯಾತಿಪಡೆದಿರುವ ತಳಕಲ್ನ ನಿವಾಸಿ ವೀರಾಪುರ ಫಕ್ರುದ್ದೀನ್ ಅವರು ತಮ್ಮ ಉತ್ತಮ ಚಿತ್ರಕಲೆ ಪ್ರದಶರ್ಿಸಿ ಅಪಾರ ಮೆಚ್ಚುಗೆ ಮತ್ತು ಪ್ರಶಂಸೆಗೆ ಪಾತ್ರರಾಗಿ ಪ್ರಶಂಸನೀಯ ಅಭಿನಂದನಾ ಪತ್ರ ಪಡೆದುಕೊಂಡಿದ್ದಾರೆ.

ಅಂತರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿ ಜಿಲ್ಲೆಯ ಕೀತರ್ಿ ಹೆಚ್ಚಿಸಿದ ತಳಕಲ್ನ ವೀರಾಪುರ ಫಕ್ರುದ್ದೀನ್ ಅವರ ಕಲೆಗೆ ಸಂದಿರುವ ಅಭಿನಂದನಾ ಪತ್ರಕ್ಕೆ ಇಲ್ಲಿನ ವಿವಿಧ ಸಂಘಟನೆಗಳು, ಚಿತ್ರಕಲಾವಿದರು, ವ್ಯಂಗ್ಯ ಚಿತ್ರಕಲಾವಿದರು, ಸಾಹಿತಿ ಪತ್ರಕರ್ತರು ಸೇರಿದಂತೆ ಸಮಾಜ ಬಾಂಧವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.