ಲೋಕದರ್ಶನ ವರದಿ
ಕಾಗವಾಡ: ಅಂತರ-ರಾಷ್ಟ್ರೀಯ ಮಧುಮೇಹ ದಿನದ ಪ್ರಯುಕ್ತ ಉಗಾರ ಲಾಯನ್ಸ್ ಕ್ಲಬ್ ಮತ್ತು ಡಿಸ್ಕವರಿ ಮ್ಯಾನ್ಕೈಂಡ್ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಸಕ್ಕರೆ ಹಾಗೂ ಹೃದಯ ಕಾಯಿಲೆ ತಪಾಸಣೆ ಶಿಬಿರ ಯಶಸ್ವಿಗೊಳಿಸಿದರು.
ಇದರ ಸುಮಾರು 300 ಶಿಬಿರಾಥರ್ಿಗಳು ಲಾಭ ತೆಗೆದುಕೊಂಡರು. ರವಿವಾರ ರಂದು ಉಗಾರದ ಬಾಲಮಂದಿರ ಸ್ಥಳದಲ್ಲಿ ಲಾಯನ್ಸ್ ಕ್ಲಬ್ ಆಧ್ಯಕ್ಷ ಶ್ರೀಕಾಂತ ಭಟ್ಟ ಇವರು ದೀಪ ಬೆಳಗಿಸಿ, ಶಿಬಿರಕ್ಕೆ ಚಾಲನೆ ನೀಡಿದರು.
ಶಿಬಿರದಲ್ಲಿ ಉಗಾರ, ಕುಡಚಿ, ಶೇಡಬಾಳ, ಕುಸನಾಳ, ಮೊಳವಾಡ, ಕಾಗವಾಡ, ಮಂಗಸೂಳಿ, ಸೇರಿದಂತೆ ಅನೇಕ ಗ್ರಾಮಗಳಿಂದ ಶಿಬಿರಾಥರ್ಿಗಳು ಆಗಮಿಸಿ, ಲಾಭ ಪಡೆದುಕೊಂಡರು.
ಶಿಬಿರದಲ್ಲಿ ತಜ್ಞವೈದ್ಯರಾದ ಉಗಾರದ ಡಾ. ಬಿ.ಎ.ಪಾಟೀಲ, ಡಾ. ಎಸ್.ಎ.ಭರಮದೆ, ಡಾ. ಬಿ.ಡಿ.ಉಗಾರೆ, ಕುಡಚಿಯ ಡಾ. ಬಿ.ಎ.ಪಾಟೀಲ, ಡಾ. ಎನ್.ಎಚ್.ಸಾಬಡೆ, ಡಾ. ವ್ಹಿ.ಎಸ್.ದೇಶಪಾಂಡೆ, ಶಿರಗುಪ್ಪಿಯ ಡಾ. ಎಂ.ಎನ್.ಭೋಮಾಜ್, ಡಾ. ಗಿರೀಶ ಕೊಥಳಿ, ಡಾ. ಪ್ರವೀಣ ಗಣೇಶವಾಡಿ, ಎಂ.ವ್ಹಿ.ಕಟಿಗೇರಿ, ಡಾ. ಮನೋಜ್ ಮಿಣಚೆ ಇವರು ಉಚಿತ ತಪಾಸಣೆ ಮಾಡಿ, ಕಾರ್ಯನಿರ್ವಹಿಸಿದರು.
ಶಿಬಿರ ಯಶಸ್ವಿಗೊಳಿಸಲು ಲಾಯನ್ಸ್ ಕ್ಲಬ್ ಆಧ್ಯಕ್ಷ ಶ್ರೀಕಾಂತ ಭಟ್ಟ, ಮಾಜಿ ಆಧ್ಯಕ್ಷ ಸುಭಾಷ ಹೆಬಳಿ, ಆರ್.ಜಿ.ಕಿಲ್ಲೇದಾರ, ಖಜಾಂಚಿ ನ್ಯಾಯವಾದಿ ಸಿ.ಆರ್.ಕುರಿ, ಎಲ್ಲ ಸದಸ್ಯರು ಸಹಕರಿಸಿದರು.