ಅಮೆರಿಕಾ ನಡೆಯನ್ನು ಖಂಡಿಸಿರುವ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ

ದಿ ಹೇಗ್, ಜೂನ್ ೧೩,ಅಫ್ಘಾನಿಸ್ತಾನದಲ್ಲಿ  ಅಮೆರಿಕಾ  ಪಡೆಗಳ  ಸಂಭವನೀಯ ಯುದ್ಧ ಅಪರಾಧಗಳ ತನಿಖೆಯಲ್ಲಿ ತೊಡಗಿರುವ ತನ್ನ ಅಧಿಕಾರಿಗಳ ವಿರುದ್ಧ   ಅಮೆರಿಕಾ  ಅಧಿಕೃತ ನಿರ್ಬಂಧ ವಿಧಿಸಿರುವುದಕ್ಕೆ  ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಖಂಡಿಸಿದೆ.ಅಮೆರಿಕಾ  ಕೈಗೊಂಡಿರುವ   ಕ್ರಮ    ಕಾನೂನು ಆಳ್ವಿಕೆ  ಹಾಗೂ ನ್ಯಾಯಾಲಯದ ನ್ಯಾಯಾಂಗ ಪ್ರಕ್ರಿಯೆಯಲ್ಲಿ  ನಡೆಸಿರುವ  ಹಸ್ತಕ್ಷೇಪವಾಗಿದ್ದು,  ಇದು  ಸ್ವೀಕಾರಾರ್ಹವಲ್ಲದ   ನಡವಳಿಕೆ  ಎಂದು ಐಸಿಸಿ ಗುರುವಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.ಇದಕ್ಕೂ ಮುನ್ನ   ಗುರುವಾರ, ಶ್ವೇತಭವನ  ಹೇಳಿಕೆ  ನೀಡಿ  ಅಮೆರಿಕಾ ಅಧ್ಯಕ್ಷ   ಡೊನಾಲ್ಡ್ ಟ್ರಂಪ್, ಅಮೆರಿಕಾ  ಸಿಬ್ಬಂದಿಯ ವಿರುದ್ದ    ತನಿಖೆ  ಅಥವಾ ವಿಚಾರಣೆಗೆ ಒಳಪಡಿಸುವ ಐಸಿಸಿ ಅಧಿಕಾರಿಗಳ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು  ಹೊರಡಿಸಿದ್ದರು.  ಅಮೆರಿಕಾದ  ಸಮ್ಮತಿಯಿಲ್ಲದೆ   ಅಮೆರಿಕಾ  ಸಿಬ್ಬಂದಿಯ   ತನಿಖೆ  ಅಥವಾ ವಿಚಾರಣೆಗೆ ಒಳಪಡಿಸುವ ಯಾವುದೇ ಪ್ರಯತ್ನವನ್ನು  ವಿರೋಧಿಸಲಾಗುವುದು ಎಂದು ತಿಳಿಸಿತ್ತು.  ತನಿಖೆಯಲ್ಲಿ  ನಿರತವಾಗಿದ್ದ   ಐಸಿಸಿ  ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ವೀಸಾ ನಿರ್ಬಂಧಗಳನ್ನು ವಿಧಿಸಲಾಗಿತ್ತು.ಅಮೆರಿಕಾದ  ನಿರ್ಬಂಧಗಳು,  ದೌರ್ಜನ್ಯ,  ಅಪರಾಧಗಳಿಗೆ ಬಲಿಯಾದವರ ಹಿತಾಸಕ್ತಿಗಳ ವಿರುದ್ಧದ ಕ್ರಮಗಳನ್ನು  ಪ್ರತಿನಿಧಿಸುತ್ತವೆ,  ಅನೇಕ  ಸಂತ್ರಸ್ಥರು  ನ್ಯಾಯ ಪಡೆಯುವ  ಕೊನೆಯ  ಆಶಯವನ್ನು  ಹೊಂದಿದ್ದಾರೆ ಎಂದು ೧೨೩ ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಐಸಿಸಿ  ಹೇಳಿದೆ.  ತನ್ನ ಸಿಬ್ಬಂದಿಯ ಪರವಾಗಿ  ಐಸಿಸಿ ದೃಢ  ವಾಗಿ ನಿಲ್ಲುತ್ತದೆ ಹಾಗೂ  ತನ್ನ  ಕರ್ತವ್ಯಗಳನ್ನು ಸ್ವತಂತ್ರ ಮತ್ತು ನಿಷ್ಪಕ್ಷಪಾತವಾಗಿ  ನಿರ್ವಹಿಸುವ  ಬದ್ದತೆಯನ್ನು ವ್ಯಕ್ತಪಡಿಸಿದೆ.