ಧಾರವಾಡ 03: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ(ರಿ) ಧಾರವಾಡ ತಾಲೂಕು, ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆ ಧಾರವಾಡ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಬೂದನಗುಡ್ಡ ಬಸವೇಶ್ವರ ಫ್ರೌಢ ಶಾಲೆ ದುಮ್ಮವಾಡದಲ್ಲಿ ದಿ. 02ರಂದು ಸ್ವಾಸ್ಥ ಸಂಕಲ್ಪ ಕಾರ್ಯಕ್ರಮವನ್ನು ನೇರವೇರಿಸಲಾಯಿತು. ಉದ್ಘಾಟನೆಯನ್ನು ಗ್ರಾಮಪಂಚಾಯತ ಅಧ್ಯಕ್ಷೆ ಸಂಕವ್ವಧನಪಾಲ್ ಬೆಟದೂರ ಇವರು ನೆರವೇರಿಸಿದರು. ಯೋಜನಾಧಿಕಾರಿಯಾದ ಉಲ್ಲಾಸ್ ಮೇಸ್ತ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಬಗ್ಗೆ ತಿಳಿಸಿ ವಿದ್ಯಾಥರ್ಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಪ್ರತಿಜ್ಞೆ ಬೋಧಿಸಲಾಯಿತು. ಸಂಪನ್ಮೂಲವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಜಯರಾಂಗದರವರು ವಿದ್ಯಾಥರ್ಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಆರ್.ಕೆ ನಡಗೇರಿ ವಹಿಸಿದ್ದರು.
ಒಕ್ಕೂಟದ ಅಧ್ಯಕ್ಷ ಕಲ್ಪನಾ ಬಳಿಗೇರ, ವಲಯ ಮೇಲ್ವಿಚಾರಕರದ ಬಸವಣೇಪ್ಪ, ಒಕ್ಕೂಟ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳಿಗೆ ನಶೆ ಎಂಬ ನರಕ ಎಂಬ ಕಿರುಚಿತ್ರ ಪ್ರದಶರ್ಿಸಲಾಯಿತು.