ಕಲೆ ಕರಗತಕ್ಕೆ ಆಸಕ್ತಿ, ಸತತ ಪರಿಶ್ರಮ ಅವಶ್ಯ: ಲಿಂಬಿಕಾಯಿ

ಹುಬ್ಬಳ್ಳಿ: ಯಾವುದೇ ಕಲೆ ಒಲೆಯಬೇಕಾದರೆ ಆಸಕ್ತಿ ಹಾಗೂ ಸತತ ಪರಿಶ್ರಮ ಅತಿ ಅವಶ್ಯವಾಗಿ ಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಹೇಳಿದರು.

ಅವರು ಶಿವರುದ್ರ ಟ್ರಸ್ಟ, ಬಸವ ಪರಿಸರ ಸಂರಕ್ಷಣಾ ಸಮಿತಿ, ರೋಟರಿ ಕ್ಲಬ್ ಹುಬ್ಬಳ್ಳಿ-ಉತ್ತರ ವಲಯ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಗ್ಯಾಲಕ್ಷಿ ಸಭಾ ಭವನದಲ್ಲಿ ಅಯೋಜಿಸಿದ್ದ ಚಿತ್ರಕಲಾ ಸ್ಪಧರ್ೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ವ್ಯಕ್ತಿತ್ವ ವಿಕಸನ ಆಗಲು ಚಿತ್ರಕಲೆ ಬಹಳ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಕ್ಕಳಲ್ಲಿರುವ ಸೂಪ್ತವಾದ ಪ್ರತಿಭೆಯನ್ನು ಶಿಕ್ಷಕರು, ಪಾಲಕರು ಗುರುತಿಸಿ ಪೂರಕವಾದ ವಾತಾವರಣ ನಿಮರ್ಾಣ ಮಾಡಬೇಕು. ಮಕ್ಕಳು ಚಿತ್ರಕಲೆ, ಸಂಗೀತ, ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡುವ ಕೆಲಸ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಎಂದರು.

ಗುತ್ತಿಗೆದಾರ ಪ್ರಕಾಶ ಜೋಶಿ ಅವರನ್ನು ಸನ್ಮಾನಿಸಲಾಯಿತು. ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಅವರು ನಿರೂಪಿಸಿದರು. ಚಿತ್ರಕಲಾವಿಧರಾದ ಎಂ.ಜೆ.ಬಂಗ್ಲೆವಾಲೆ, ರಮೇಶ ಚಂಡೆಪ್ಪನವರ ಅವರು ನಿಣರ್ಾಯಕರಾಗಿದ್ದರು. 

ಮಾನಸಿಕ ತಜ್ಞ ವೈದ್ಯ ಡಾ. ಶಿವಾನಂದ ಬಿ. ಹಿರೇಮಠ, ಗ್ಯಾಲಕ್ಷಿ ಸಭಾಭವನದ ಮಾಲೀಕ ಸಂತೋಷ ಕಾಟವೆ, ಶಿವರುದ್ರ ಟ್ರಸ್ಟನ ಕಾರ್ಯದಶರ್ಿ ಡಾ.ವಿ.ಬಿ.ನಿಟಾಲಿ, ರೋಟರಿ ಕ್ಲಬ್ ಹುಬ್ಬಳ್ಳಿ-ಉತ್ತರ ವಲಯದ ಅಧ್ಯಕ್ಷ ಗಿರೀಶ ನಲವಡಿ, ಕಾರ್ಯದಶರ್ಿ ಗಿರೀಶ ಪಾಟೀಲ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಪ್ರೊ ಎಸ್.ಎಂ.ಸಾತ್ಮಾರ, ಮೃತ್ಯುಂಜಯ ಮಟ್ಟಿ, ಎಂ.ಟಿ.ರಾಥೋಡ, ರಾಜೇಶ ತೋಳಣ್ಣವರ, ರಮೇಶ ಯಾದವಾಡ, ಅಭಿಷೇಕ ತಿಪಶೆಟ್ಟಿ, ಹರೀಶ ಹಡಗಲಿ, ನಿಂಗಪ್ಪ, ಡಾ. ಬಸವಕುಮಾರ ತಲವಾಯಿ, ವಿಮಲ ಅಂಗಡಕಿ, ಮಕ್ಕಳು, ಶಿಕ್ಷಕರು, ಪಾಲಕರು ಮುಂತಾದವರು ಇದ್ದರು.

ವಿಜೇತರು: ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ: ಲಕ್ಷ್ಮೀ, ದ್ವಿತೀಯ: ಭೂಮಿಕಾ ವಿ.ಬಿರಾದಾರ, ತೃತೀಯ: ಉಮ್ಮುಲ ಫಜಲ್, ಫೌಢ ಶಾಲೆಯ ವಿಭಾಗದಲ್ಲಿ ಪ್ರಥಮ: ಮೈತ್ರಿ ಎಸ್. ಉದ್ದಿ, ದ್ವಿತೀಯ: ಶುಭಂ ಎಸ್. ಕಾಟವೆ, ತೃತೀಯ: ಹನುಮಂತಗೌಡ ಎಂ. ಪಾಟೀಲ ಅವರು ಪಡೆದರು. ನಗದು ಬಹುಮಾನ ನೀಡಿ ಗೌರವಿಸಲಾಯಿತು.