ಹುಬ್ಬಳ್ಳಿ 25: ಶಾಂತಿನಿಕೇತನ ವಾಣಿಜ್ಯ ಪದವಿ ಪೂರ್ವ ಹಾಗೂ ಬಿ .ಕಾಂ ಪದವಿ ಮಹಾವಿದ್ಯಾಲಯದಲ್ಲಿ ಅಂತರ ಕಾಲೇಜು ನೃತ್ಯ ಪ್ರದರ್ಶನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ರಾಜು ತಾಳಿಕೋಟಿ ಹಾಸ್ಯ-ನಟ ಹಾಗೂ ನಿರ್ದೇಶಕರು ರಂಗಾಯಣ ಧಾರವಾಡ ಇವರು ವಹಿಸಿಕೊಂಡಿದ್ದು, ಅವರು ನೃತ್ಯ, ಕಲೆ, ನಾಟಕದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳು ನಾಟ್ಯ ಕಲೆಗಳ ಜೊತೆಗೆ ತಮ್ಮ ಉಜ್ವಲ ಭವಿಷ್ಯಕ್ಕಾಗಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ತಮ್ಮ ತಂದೆ ತಾಯಿಗಳ ಆಕಾಂಕ್ಷೆಗಳನ್ನು ಪೂರೈಸಬೇಕೆಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಭವರಲಾಲ್ ಸಿ ಜೈನ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಲೆ ಮತ್ತು ಸಂಸ್ಕೃತಿಯ ಮಹತ್ವ ಹೇಳಿದರು. ಕಾರ್ಯಕ್ರಮವನ್ನು ಅತ್ಯಂತ ಉತ್ಸಾಹ ಮತ್ತು ಮನರಂಜನೆಯನ್ನು ಆಚರಿಸಲಾಯಿತು, ಇದು ಕಾಲೇಜಿನಲ್ಲಿ ಅದ್ಧೂರಿಯಾಗಿ ಯಶಸ್ವಿಯಾಯಿತು. ಮುಖ್ಯ ಅತಿಥಿ. ರಾಜು ತಾಳಿಕೋಟಿ, ಸಂಸ್ಥೆಯ ಅಧ್ಯಕ್ಷರಾದ ಭವರಲಾಲ್ ಸಿ ಜೈನ್, ಶಾಂತಿನಿಕೇತನ ಪಿಯು ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರು ಪ್ರೊ.ವೆಂಕಣ್ಣ ಹುಗ್ಗಿ, ಕಾಲೇಜಿನ ಎಚ್‌ಓಡಿ ನ್ಯಾನ್ಸಿ, ಕಾರ್ಯಕ್ರಮ ಸಂಯೋಜಕರು ಪ್ರೊ.ಶಿವಯೋಗಿ ಕೆರೂಡಿ, ಆಡಳಿತಾಧಿಕಾರಿ ಬಸವರಾಜ ಶೆಟ್ಟರ್, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಅಮೇನಾ ಕಳಸ ,ಉಪ ಕಾರ್ಯದರ್ಶಿ ಸಾರ್ಥಕ್ ಕದಂ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಉತ್ಸುಕತೆಯಿಂದ ನೃತ್ಯದಲ್ಲಿ ಕಾಣಿಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಅಂತರ ಕಾಲೇಜು ನೃತ್ಯ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ವಿಜೇತರಿಗೆ ಬಹುಮಾನ ನೀಡಲಾಯಿತು.