ಲೋಕದರ್ಶನ ವರದಿ
ಮುನವಳ್ಳಿ : ನ. 15 ರಂದು ಸಂಜೆ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಮಾಜಸೇವಾ ಸಂಸ್ಥೆ ಜೈಂಟ್ಸ ಗ್ರುಪ್ ವತಿಯಿಂದ ಸ್ಥಳೀಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಅಂತರಶಾಲಾ ಸಮೂಹ ನೃತ್ಯ ಸ್ಪಧರ್ೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಗೋಕಾಕದ ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ ಹಾಗೂ ಪ್ರತಿಭಾನ್ವಿತ ಬಾಲಗಾಯಕಿ ಧಾರವಾಡದ ಸಾಕ್ಷಿ ಕಲ್ಲೂರ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದ ಸಾಹಿತಿ ಹಾಗೂ ಯಲ್ಲಮ್ಮಗುಡ್ಡದ ಶ್ರೀ ಯಲ್ಲಮ್ಮದೇವಿ ದೇವಸ್ಥಾನದ ಕಾರ್ಯನಿವರ್ಾಹಕ ಅಧಿಕಾರಿ ರವಿ ಕೋಟಾರಗಸ್ತಿ ಸ್ವಯಂ ಸಮಾಜ ಸೇವಾ ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ಮಾಡುವುದರ ಜೊತೆಗೆ ಸಾಧಕರಿಗೆ ಸನ್ಮಾನ ಹಾಗೂ ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸಲು ಕಾರ್ಯಕ್ರಮಗಳನ್ನು ಏರ್ಪಡಿಸುವುದು ಶ್ಲಾಘನೀಯ. ಪಾಲಕರು ಮಕ್ಕಳೊಂದಿಗೆ ತಮ್ಮ ಸಮಯವನ್ನು ಕಳೆಯಬೇಕು. ತಂದೆ ತಾಯಿಯರು ಇದ್ದಂತೆ ಮಕ್ಕಳು ಬೆಳೆಯುತ್ತಾರೆ. ಮಕ್ಕಳು ಉತ್ತಮ ಸಂಸ್ಕಾರ ಹೊಂದಬೇಕಾದರೆ ಕುಟುಂಬದಲ್ಲಿ ಪ್ರಾಮಾಣಿಕತೆ ಹಾಗೂ ಸೇವಾಮನೋಭಾವನೆಯಂಥ ಗುಣಗಳು ಇರಬೇಕು ಎಂದರು.
ಜೈಂಟ್ಸ ಉಪಾಧ್ಯಕ್ಷ ಉಮೇಶ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿ ಜೈಂಟ್ಸ ಗ್ರೂಪ್ ಪ್ರತಿತಿಂಗಳು ವಿವಿಧ ಕ್ಷೇತ್ರಗಳಲ್ಲಿ ಜನತೆಗೆ ಅನುಕೂಲವಾಗುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ತನ್ನದೇ ಆದ ಅಳಿಲು ಸೇವೆ ಸಲ್ಲಿಸುತ್ತ ಬರುತ್ತಿದೆ ಸಮಾಜಸೇವೆಯಲ್ಲಿ ಸಿಗುವ ಅನಂದ ಇನ್ನೊಂದರಲ್ಲಿ ಸಿಗುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರೊ. ಎಂ.ಎಚ್.ಪಾಟೀಲ, ಡಾ. ರವಿ ಹನಸಿ, ರೈತ ಪಂಚಪ್ಪ ಮಗೆಪ್ಪಗೋಳ, ಸಮಾಜಸೇವಕ ಮನೋಹರ ರಾವೂಳ, ಕ್ರೀಡಾ ಪ್ರತಿಭೆ ಕುಮಾರಿ ಲಕ್ಷ್ಮೀ ಬನ್ನೂರ ಇವರನ್ನು ಜೈಂಟ್ಸ ವತಿಯಿಂದ ಸತ್ಕರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈಂಟ್ಸ ಗ್ರುಪ್ ಅಧ್ಯಕ್ಷ ಡಾ. ಎಂ.ಬಿ.ಅಷ್ಟಗಿಮಠ ವಹಿಸಿದ್ದರು. ಜೈಂಟ್ಸ ರಾಜ್ಯಾಧ್ಯಕ್ಷ ಮೋಹನ ಸವರ್ಿ, ಅಪ್ಪು ಅಮಠೆ, ರಮೇಶ ಗಂಗಣ್ಣವರ, ವಿರಾಜ ಕೊಳಕಿ, ಸಹೇಲಿ ಗ್ರೂಪ್ ಅಧ್ಯಕ್ಷೆ ಗೌರಿ ಜಾವೂರ, ಸಂಜೀವಕುಮಾರ ತುಳಜಣ್ಣವರ, ಶಿವಾಜಿ ಮಾನೆ, ಅಶೋಕ ರೇಣಕೆ, ಶಿವಕುಮಾರ ಕರೀಕಟ್ಟಿ, ಮಹಾಂತೇಶ ಬೆಲ್ಲದ, ಬಸವರಾಜ ಅಂಗಡಿ, ಉದಯ ಶೆಟ್ಟಿ, ಅರುಣಗೌಡ ಪಾಟೀಲ, ಮಹೇಶ ಹೆಗಡೆ. ಸೇರಿದಂತೆ ಜೈಂಟ್ಸ ಗ್ರೂಪ್, ಸಹೇಲಿ ಗ್ರೂಪ್ ಸದಸ್ಯರು ಇದ್ದರು. ಭವಾನಿ ಖೊಂದುನಾಯ್ಕ ಸ್ವಾಗತಿಸಿದರು. ಬಿ.ಬಿ.ಹುಲಿಗೊಪ್ಪ ನಿರೂಪಿಸಿದರು. ವೀರಣ್ಣ ಕೊಳಕಿ ವಂದಿಸಿದರು.