ಕಾಗವಾಡ 01: ಸ್ಥಳೀಯ ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಅಂತರ-ರಾಜ್ಯ ಕಾಮಸರ್್ ಫೆಸ್ಟ್ 2019 ಸ್ಪಧರ್ೆಯಲ್ಲಿ 30 ಮಹಾವಿದ್ಯಾಲಯಗಳ 400 ವಿದ್ಯಾಥರ್ಿಗಳು ಸ್ಪಧರ್ಿಸಿದರು. ಇದರಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆದು, ಬೆಳಗಾವಿಯ ಗೋಗಟೆ ವಾಣಿಜ್ಯ ಮಹಾವಿದ್ಯಾಲಯ ಸಮಗ್ರ ಚಾಂಪಿಯನ್ ಗಳಿಸಿಕೊಂಡಿದೆ.
ಶಿವಾನಂದ ಮಹಾವಿದ್ಯಾಲಯದಲ್ಲಿ ಒಂದು ದಿನದ ಅಂತರ್-ರಾಜ್ಯ ಕಾಮಸರ್್ ಫೆಸ್ಟ್ 2019 ಸ್ಪಧರ್ೆ ಜರುಗಿದವು. ಸ್ಪಧರ್ೆಯಲ್ಲಿ ಗರಿಷ್ಠ ಸಂಖ್ಯೆಯ ಸ್ಪಧರ್ಾಳುಗಳು ಭಾಗವಹಿಸಿದ್ದ ಚಿಕ್ಕೋಡಿ ಕೆ.ಎಲ್.ಇ ಸಂಸ್ಥೆಯ ಬಿ.ಕೆ.ಬಿ.ಬಿ.ಎ ಕಾಲೇಜು ವಿಶೇಷ ಪ್ರಶಸ್ತಿ ಪಡೆಯಿತು.
ಇದರೊಂದಿಗೆ ಕ್ವಿಜ್ನಲ್ಲಿ ಬೆಳಗಾವಿಯ ಬಿ.ಎಸ್.ಟಿ.ಎಂಕಾಲೇಜು ಪ್ರಥಮ ಮತ್ತು ರಾಯಬಾಗ್ನ ಸಕರ್ಾರಿ ಕಾಲೇಜು ದ್ವಿತೀಯ, ಬಿಜಿನೆಸ್ ಪ್ಲಾನ್ದಲ್ಲಿ ಬೆಳಗಾವಿಯ ಆರ್.ಪಿ.ಡಿ ಬಿ.ಬಿ.ಎ ಕಾಲೇಜು ಪ್ರಥಮ ಮತ್ತು ಗೋಗಟೆ ಬಿ.ಬಿ.ಎ. ಕಾಲೇಜು ದ್ವಿತೀಯ, ಮಾಕರ್ೆಟಿಂಗ್ದಲ್ಲಿ ಬೆಳಗಾವಿಯ ಗೋಗಟೆ ಕಾಮಸರ್್ ಕಾಲೇಜು ಪ್ರಥಮ ಮತ್ತು ಗೋಗಟೆ ಬಿ.ಬಿ.ಎ ದ್ವಿತೀಯ, ಟ್ರೆಜರ್ ಹಂಟ್ದಲ್ಲಿ ಶಿರಗುಪ್ಪಿಯ ಕೆ.ಎಲ್.ಇ ಕಾಮಸರ್್ ಕಾಲೇಜು ಪ್ರಥಮ ಮತ್ತು ಚಿಕ್ಕೋಡಿ ಬಿ.ಕೆ. ಕಾಲೇಜು ದ್ವಿತೀಯ, ಪೇಪರ್ ಪ್ರಜೆಂಟೇಶನ್ನದಲ್ಲಿ ಗೋಗಟೆ ಕಾಮಸರ್್ ಕಾಲೇಜು ಪ್ರಥಮ ಮತ್ತು ಗೋಗಟೆ ಬಿ.ಬಿ.ಎ ದ್ವಿತೀಯ ಸ್ಥಾನ ಪಡೆದುಕೊಂಡರು.
ಕ್ರಿಯೇಟಿವ್ ರೈಟಿಂಗ್ದಲ್ಲಿ ರಾಯಬಾಗ್ ಸಕರ್ಾರಿ ಕಾಲೇಜು ಪ್ರಥಮ ಮತ್ತು ಉಗಾರ ಪಿ.ಎ.ಎಸ್. ಕಾಲೇಜು ದ್ವಿತೀಯ, ರಂಗೋಲಿಯಲ್ಲಿ ಬೆಳಗಾವಿಯ ಆರ್.ಪಿ.ಡಿ ಪ್ರಥಮ ಮತ್ತು ಉಗಾರನ ಪಿ.ಇ.ಎಸ್. ದ್ವಿತೀಯ, ಕೋಲಾಜ್ದಲ್ಲಿ ಸಂಕೇಶ್ವರದ ಎಸ್.ಡಿ.ವ್ಹಿ.ಎಸ್. ಪ್ರಥಮ ಮತ್ತು ಗೋಗಟೆ ಬಿ.ಬಿ.ಎ ದ್ವಿತೀಯ, ಸೋಲೋ ಡಾನ್ಸ್ದಲ್ಲಿ ಆರ್.ಪಿ.ಡಿ ಪ್ರಥಮ ಮತ್ತು ಉಗಾರಿನ ಪಿ.ಇ.ಎಸ್. ದ್ವಿತೀಯ, ಮತ್ತು ಗ್ರುಪ್ಡಾನ್ಸ್ದಲ್ಲಿ ಎಸ್.ಪಿ.ಎಂ. ಕಾಲೇಜು ರಾಯಬಾಗ ಮತ್ತು ಗೋಗಟೆ ಕಾಲೇಜು ಪ್ರಥಮ ಮತ್ತು ರಾಯಬಾಗ್ ಸಕರ್ಾರಿ ಕಾಲೇಜು ಮತ್ತು ಉಗಾರ ಪಿ.ಇ.ಎಸ್. ಕಾಲೇಜು ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಿ.ಜಿ.ಕರಲಟ್ಟಿ ಮಾತನಾಡುವಾಗ, ಮಹಾವಿದ್ಯಾಲಯದ ವಾಣಿಜ್ಯ ಸಂಘವು ಆಯೋಜಿಸಿದ ಒಂದು ದಿನದ ಅಂತರ್-ರಾಜ್ಯ ಕಾಮಸರ್್ ಫೆಸ್ಟ್ 2019ವು ಅತ್ಯಂತ ಯಶಸ್ವಿಯಾಗಿ ಜರುಗಿ ಒಂದು ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಗಿದೆ ಎಂದರು.
ಅತಿಥಿಗಳಾಗಿದ್ದ ಪ್ರೊ.ಎಸ್.ಎಸ್. ಬಾಗನೆ, ಪ್ರೊ.ಟಿ.ಆರ್. ದರೇಕರ ಮತ್ತು ಪ್ರೊ. ಬಿ.ಎ. ಪಾಟೀಲ ಮಾತನಾಡಿ ವಿದ್ಯಾಥರ್ಿಗಳಲ್ಲಿ ಎಂತಹ ಸಂಘಟನಾ ಶಕ್ತಿ, ಕೌಶಲಗಳು ಮತ್ತು ಮುಂದಾಳತ್ವ ಗುಣಗಳಿವೆಯೆಂಬುದಕ್ಕೆ ಇಂದಿನ 14 ತಾಸುಗಳ ಯಶಸ್ವಿ ಕಾರ್ಯಕ್ರಮವೇ ಸಾಬೀತುಗೊಳಿಸಿದೆಯೆಂದು ಹೇಳಿದರು.
ಸಂಯೋಜಕರಾದ ಡಾ.ಎಸ್.ಓ. ಹಲಸಗಿಯವರು ತಮ್ಮ ವಿಭಾಗದ ಪ್ರೊ. ಅಶ್ವಿನಿ ಸವದತ್ತಿ, ವ್ಹಿ.ಬಿ. ಬುಲರ್ೆ ಮತ್ತು ಎಂ.ಎಸ್. ಕುಂಬಾರರು ಸತತವಾಗಿ ಒಂದು ತಿಂಗಳವರೆಗೆ ರೂಪಿಸಿದ ಈ ಕಾರ್ಯಕ್ರಮ ಯಶಸ್ವಿಯಾಗಿ ಕಾರ್ಯಗತಗೊಂಡಿದೆಯೆಂದು ಹೇಳುತ್ತಾ ಹತ್ತಾರು ವಿಭಾಗಗಳಲ್ಲಿ ವಿಜೇತರಾದ ಕಾಲೇಜುಗಳ ವರದಿಯನ್ನು ಪ್ರಚುರ ಪಡಿಸಿದರು.