ಜಿಲ್ಲಾ ಪಂಚಾಯತ ಅಧ್ಯಕ್ಷ ಆಶಾ ಐಹೊಳೆಗೆ ಅವಮಾನ


ಬೆಳಗಾವಿ : ಜಿಲ್ಲಾ ಪಂಚಾತ ಅಧ್ಯಕ್ಷೆ ಆಶಾ ಐಹೊಳೆ ಅವರಿಗೆ ಇಂದು ನಡೆದ ಸ್ಮಾಟರ್್ ಸಿಟಿಯ ಇಂಟಿಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ ಉದ್ಘಾಟನೆಯ ಸಂದರ್ಭದಲ್ಲಿ ಕುಳಿತುಕೊಳ್ಳಲು ಆಸನ ನೀಡದೆ ಹಾಗೂ ಒಳಪ್ರವೇಶಕ್ಕೆ ಗುರುತಿನ ಪತ್ರ ಕೇಳಿದ ಹಿನ್ನೆಲೆಯಲ್ಲಿ ಆಶಾ ಐಹೊಳೆ ಅವರು ಅವಮಾನದಿಂದ ಕಾರ್ಯಕ್ರಮದಿಂದ ಹೊರ ನಡೆದ ಘಟನೆ ಜರುಗಿತು.

ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿ ಸ್ಥಾಪಿಸಲಾಗಿರುವ ರಾಜ್ಯದ ಮೊದಲ ಸ್ಮಾಟರ್್ ಸಿಟಿಯ ಇಂಟಿಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ದ ಉದ್ಘಾಟನೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಅಧ್ಯಕ್ಷೆ ಐಹೊಳೆಯವರನ್ನು ಕೂಡಾ ಅಧಿಕೃತವಾಗಿ ಅವ್ಹಾನಿಸಲಾಗಿತ್ತು. ಆದರೆ ಸೆಂಟರ್ನ ಲೋಕಾರ್ಪಣೆ ಬಳಿಕ ಅಲ್ಲಿ ಕುಳಿತುಕೊಳ್ಳಲು ಆಶಾ ಐಹೊಳೆ ಅವರಿಗೆ ಕುಚರ್ಿಯನ್ನು ನೀಡದೆ ಅವರನ್ನು ಅವಮಾನಿಸಲಾಗಿದೆ. 

ಇದರಿಂದ ಕುಪಿತಗೊಂಡ ಆಶಾ ಐಹೊಳೆ ಅವರು ಕಾರ್ಯಕ್ರಮದಿಂದ ಹೊರ ನಡೆದು ಹೊರಗೆ ಬಂದಿದ್ದಾರೆ. 

ಅಧಿಕೃತ ಆಹ್ವಾನದ ಮೇರೆಗೆಯೇ ಕಾರ್ಯಕ್ರಮಕ್ಕೆ ತೆರಳಿದ್ದ ಜಿಲ್ಲಾ ಪಂಚಾಯತಿ ಅಧ್ಯಕ್ಷೆಯನ್ನು ನಿರ್ಲಕ್ಷಿಸುವ ಮೂಲಕ, ಅವರಿಗೆ ಕುಚರ್ಿಯನ್ನು ನೀಡದೆ ಅವಮಾನಿಸಲಾಗಿದೆ ಎನ್ನಲಾಗಿದೆ. ಅಲ್ಲದೆ ಅವರು ಸ್ಮಾಟರ್್ ಸಿಟಿಯ ಇಂಟಿಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ ಕಾರ್ಯಕ್ರಮಕ್ಕಾಗಿ ಅವರು ಸೆಂಟರ್ ಒಳಗೆ ತೆರಳುತ್ತಿದ್ದಂತೆ ಅವರನ್ನು ಪೊಲೀಸರು ತಡೆದು ಗುರುತಿನ ಪತ್ರ ತೋರಿಸುವಂತೆ ತಡೆದಿದ್ದರು ಎನ್ನಲಾಗಿದೆ. ಇವೆಲ್ಲ ಅವಮಾನಗಳಿಂದ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಅವರು, ಕಾರ್ಯಕ್ರಮವನ್ನು ಬಿಟ್ಟು ತಮ್ಮ ವಾಹನವನ್ನು ಹತ್ತಿ ತೆರಳಿದ್ದಾರೆ.