ಶಾಲೆ ಬಿಸಿಯೂಟ ಅಡುಗೆ ಮಾಡುವ ಸಿಬ್ಬಂದಿಗೆ ಸೂಚನೆ
Instructions to school meal cooking staff
ಸಂಬರಗಿ, 16 : ಮದಭಾವಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಊಟ ಕೇಂದ್ರಕ್ಕೆ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಕೋರೆ ಹಾಗೂ ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ರಮೇಶ ಕಾಂಬಳೆ ಇವರು ಭೇಟಿ ನೀಡಿ ಅಡುಗೆ ಮಾಡುವ ಸಿಬ್ಬಂಧಿಗೆ ಸೂಚನೆ ನೀಡಿದರು.
ಈ ವೇಳೆ ಮಹಾದೇವ ಕೋರೆ ಮಾತನಾಡಿ ಸರ್ಕಾರದಿಂದ ಬರುವ ಮಧ್ಯಾಹ್ನ ಆಹಾರ ಯೋಜನೆ ಸರಿಯಾಗಿ ಮಕ್ಕಳಿಗೆ ತಲುಪುವ ವ್ಯವಸ್ಥೆ ಮಾಡಬೇಕು. ಏನಾದರೂ ದೋಷ ಕಂಡು ಬಂದರೆ ಅವರ ವಿರುದ್ಧ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಮಕ್ಕಳಿಗೆ ಬೆಳಗ್ಗಿನ ಜಾವಾ ಹಾಲು, ಮೊಟ್ಟೆ, ಬಾಳೆಹಣ್ಣು ಇವುಗಳನ್ನು ಸರಿಯಾಗಿ ನೀಡಬೇಕೆಂದು ಅವರಿಗೆ ಸೂಚನೆ ನೀಡಿದರು. ಬಿಸಿಊಟ ಕುರಿತು ಶಾಲೆಯ ಪ್ರಾಧಾನ ಗುರುಗಳು ತುಕಾರಾಮ ಒಡೆಯರ ಇವರಿಂದ ಮಾಹಿತಿ ಪಡೆದುಕೊಂಡರು.
ಶಾಲೆಯಲ್ಲಿ ಅಡುಗೆ ಕೋಣೆ ಅವಶ್ಯಕತೆ ಇದ್ದು, ತಾವು ಗಮನ ಹರಿಸಿ ಶಾಲೆಗೆ ಅಡುಗೆ ಕೋಣೆ ಕಟ್ಟಡ ನಿರ್ಮಾಣ ಮಾಡಬೇಕೆಂದು ಶಾಲೆಯ ಪ್ರಧಾನ ಗುರುಗಳಿಂದ ವಿನಂತಿಸಲಾಯಿತು.
ಈ ವೇಳೆ ಗ್ರಾಮ ಪಂಚಾಯತ ಸದಸ್ಯರಾದ ಗೋಪಾಲ ಅವಳೆ, ಬಾಳು ಮಗದುಮ್, ಸಂತೋಷ ಕಲ್ಲೋತ್ತಿ ಇನ್ನೀತರು ಉಪಸ್ಥಿತ ಇದ್ದರು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 