ತಾಳಿಕೋಟೆ 20: ಶ್ರದ್ಧೆಯಿಂದ ಓದುವ ವಿದ್ಯಾರ್ಥಿಗಳಿಗೆ ಅವಶ್ಯಕ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ವೀರಶೈವ ವಿದ್ಯಾವರ್ಧಕ ಸಂಘ ಸದಾ ಸಿದ್ಧವಿದೆ , ವಿದ್ಯಾರ್ಥಿಗಳು ಆದರ ಸದುಪಯೋಗ ಪಡೆದು ಸರಿಯಾಗಿ ಅಭ್ಯಾಸ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು. ಸಂಸ್ಥೆಗೆ ಮತ್ತು ಪಾಲಕರಿಗೆ ಹೆಮ್ಮೆ ತರುವಂತಹ ಕೆಲಸ ಮಾಡಬೇಕು ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಂ.ಎಸ್ ಸರಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಎಸ್ ಕೆ ಪ ಪೂ ಕಾಲೇಜಿನ ಪ್ರೌಢ ವಿಭಾಗದ ಪಾಲಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಹೇಳಿದರು. ಸಾನಿಧ್ಯ ವಹಿಸಿದ್ದ ಎಸ್ ಕೆ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯ ಚೇರ್ಮನ್ನರಾದ ಮುರುಗೇಶ ವಿರಕ್ತಮಠ ಮಾತನಾಡಿ ಎಸ್ ಕೆ ಸಂಸ್ಥೆ ಆಡಳಿತ ಮಂಡಳಿ ಮತ್ತು ಶಿಕ್ಷಕರು ವಿದ್ಯಾರ್ಥಿಗಳ ನಿರಂತರ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದೇವೆ.ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಪೂರ್ಣ ಸಹಕಾರ ನೀಡುತ್ತಿದ್ದು ಪಾಲಕರು ಕೂಡ ಮಕ್ಕಳಿಗೆ ಅಭ್ಯಾಸ ಮಾಡಲು ಸಹಕರಿಸಿ ಎಂದು ತಿಳಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಡಾ. ಅನಿಲಕುಮಾರ ಇರಾಜ ಪಾಲಕರು ಮನೆಯಲ್ಲಿ ವಿದ್ಯಾರ್ಥಿಗಳ ಓದಿಗೆ ಪೂರಕ ವಾತಾವರಣ ಒದಗಿಸಬೇಕು. ಮಕ್ಕಳಿಗೆ ಮೊಬೈಲ್ ಕೊಡಬೇಡಿ, ಅವರನ್ನು ಮೊಬೈಲ್ ನಿಂದ ದೂರ ಇಡಿ. ಮನೆಯಲ್ಲಿ ತಾಯಂದಿರು ಹೆಚ್ಚು ಟಿವಿ ನೋಡಬೇಡಿ. ಅದು ಮಕ್ಕಳ ಓದಿನ ಏಕಾಗ್ರತೆಗೆ ತೊಂದರೆಯಾಗುತ್ತದೆ. ಅವರ ಊರಿಗೆ ಸಹಕರಿಸಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಜಗದೀಶ್ ಕಟ್ಟಿಮನಿ, ಎಸ್ ಎಸ್ ನೆಲ್ಲಗಿ ಮಾತನಾಡಿದರು. ವೇದಿಕೆಯಲ್ಲಿ ಪ್ರೌಢಶಾಲಾ ಚೇರ್ಮನ ಎಂಸಿ ಕತ್ತಿ, ಪದವಿಪೂರ್ವ ವಿಭಾಗದ ಚೇರ್ಮನ್ ಎಂ. ಆರ್ ಕತ್ತಿ, ಉಪನ್ಯಾಸಕ ಎಸ್‌ಎಸ್ ನೆಲಗಿ, ಪಾಲಕರ ಪ್ರತಿನಿಧಿಯಾಗಿ ನಾಗೂರ್ ಗ್ರಾಮದ ಶ್ರೀ ಉಳ್ಳಾಗಡ್ಡಿ, ವಿದ್ಯಾರ್ಥಿಗಳ ಪ್ರತಿನಿಧಿ ಸಂಗೀತ ಮೀನಗಾರ, ವೇದಿಕೆಯಲ್ಲಿದ್ದರು 10ನೇ ವರ್ಗದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಹಾಗೂ 160 ಜನ ಪಾಲಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕಿ ಜ್ಯೋತಿ ಮಸೂತಿಮಠ ಸ್ವಾಗತಿಸಿದರು, ಆರ್ ಜಿ ರಾಥೋಡ್ ಕಾರ್ಯಕ್ರಮ ನಿರ್ವಹಿಸಿದರು, ಶಿಕ್ಷಕ ಎ ಎಚ್ ಹೂಗಾರ ವಂದನಾರೆ್ಣ ಸಲ್ಲಿಸಿದರು.