ಲೋಕದರ್ಶನ ವರದಿ
ಶಿಗ್ಗಾವಿ01: ಹಲವಾರು ಹಬ್ಬ ಹರಿದಿನಗಳಿಗೆ, ಹುಟ್ಟು ಹಬ್ಬಕ್ಕೆ ದುಂದು ವೆಚ್ಚ ಮಾಡುವ ಬದಲು ಅದೇ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ಬಳಸಿದರೆ ಮನಸ್ಸಿನ ಆನಂದದ ಜೊತೆಗೆ ದೇಶಕ್ಕೆ ಭದ್ರ ಬುನಾದಿ ಯಾಗಲಿದೆ ಎಂದು ಕನರ್ಾಟಕ ಪ್ರದೇಶ ಜನತಾದಳ ಜಾತ್ಯತೀತ ಪಕ್ಷದ ಕಾಮರ್ಿಕ ವಿಭಾಗದ ಸಂಘಟನಾ ಕಾರ್ಯದಶರ್ಿ ಹಾಗೂ ಹಾವೇರಿ, ಗದಗ ಜಿಲ್ಲಾ ಉಸ್ತುವಾರಿ ಇಸ್ಮಾಯಿಲ್ ಮತ್ತೂಬಾಯಿ ಹೇಳಿದರು.
ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆ ನಂ 2ರಲ್ಲಿ ಹಾಗೂ ವಿವಿದ ಶಾಲೆಗಳಲ್ಲಿ ಇಸ್ಮಾಯಿಲ್ ಮತ್ತೂಬಾಯಿ ಅವರ ಹುಟ್ಟು ಹಬ್ಬದ ನಿಮಿತ್ಯ ಇಸ್ಮಾಯಿಲ್ ಮತ್ತೂಬಾಯಿ ಅವರ ಸ್ನೇಹಿತರು ಶಾಲಾ ವಿದ್ಯಾಥರ್ಿಗಳಿಗೆ ಪುಸ್ತಕ ಮತ್ತು ಪೆನ್ನು ವಿತರಣೆ ಮಾಡಿ ಮಾತನಾಡಿ ಕನರ್ಾಟಕ ಪ್ರದೇಶ ಜನತಾದಳ ಜಾತ್ಯತೀತ ಪಕ್ಷ ಬಡವರ ಹಿತೈಸಿಯಾಗಿದ್ದು ಆ ಪಕ್ಷದ ಸದಸ್ಯರಾಗಿ ಪಕ್ಷದ ತತ್ವ ಸಿದ್ದಾಂತದಂತೆ ನಾವೂ ಕೂಡಾ ಬಡವರ, ಬಡ ವಿದ್ಯಾಥಿಗಳ ಏಳಿಗೆಗಾಗಿ ಶ್ರಮಿಸುವದಾಗಿ ಹೇಳಿದರು.
ಮೊಹಮ್ಮದಹನಿಪ ಅಂಬೂರ, ಅಜೀಮಖಾನ್ ನಾಗಡ, ಸಿರಾಜ ಕಳಸಗೇರಿ, ಜಮೀರುದ್ದಿನ ಇಬ್ರಾಮಖಾನ, ಹಜರುದ್ದಿನ ತೊಕಲ್ಲಿ, ಗುಲಾಮ ನಾಸಿಪುಡಿ, ಸೇರಿದಂತೆ ಶಿಕ್ಷಕರು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.