ಲೋಕದರ್ಶನ ವರದಿ
ರಾಯಬಾಗ 18: ಸದಾ ಕಾಲ ಬರಗಾಲಕ್ಕೆ ತುತ್ತಾಗುವ ತಾಲೂಕಿನ ಭೆಂಡವಾಡ ಜಿ.ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು ಒದಗಿಸಲು ಮೇಲ್ಮಟ್ಟದ ಜಲ ಸಂಗ್ರಹಾಲಯ ನಿರ್ಮಾಣ, ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಲಾಗುತ್ತಿದೆ ಎಂದು ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ ಹೇಳಿದರು.
ಮಂಗಳವಾರ ತಾಲೂಕಿನ ಭೆಂಡವಾಡ ಗ್ರಾಮದ ಪಶು ಆಸ್ಪತ್ರೆ ಹತ್ತಿರ ಎನ್ಆರ್ಡಿಡಬ್ಲ್ಯುಪಿ ಯೋಜನೆಯಡಿ 12 ಲಕ್ಷರೂ.ವೆಚ್ಚದಲ್ಲಿ 50 ಸಾವಿರ ಲೀಟರ್ ಸಾಮಥ್ರ್ಯದ ಮೇಲ್ಮಟ್ಟದ ಜಲಸಂಗ್ರಹಾಲಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಸ್ಥರು ನೀರನ್ನು ಮೀತವಾಗಿ ಬಳಸಿಕೊಂಡು, ನೀರಿನ ಸದ್ಭಳಕೆ ಮಾಡಿಕೊಳ್ಳಬೇಕೆಂದರು. ಈ ಬಾರಿ ಮಳೆ ಚೆನ್ನಾಗಿ ಆಗಿರುವುದರಿಂದ ಅಷ್ಟಾಗಿ ನೀರಿನ ಕೊರತೆ ಉಂಟಾಗದು, ಆದರೆ ಬರುವ ಬೆಸಿಗೆ ದಿನಗಳಲ್ಲಿ ನೀರಿನ ಕೊರತೆ ಆಗದಂತೆ ಅಧಿಕಾರಿಗಳು ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದರು. ಜಿ.ಪಂ.ಆರ್ಡಿಡಬ್ಲ್ಯು ಇಲಾಖೆ ಎಇಇ ಪದ್ಮಶ್ರೀ ಪಾಟೀಲ, ಸುರೇಶ ಚೌಗಲಾ, ಸದಾಶಿವ ಬಂಡಿ, ಡಾ.ಅಪ್ಪಯ್ಯ ನಾಯಿಕ, ರೇವಣು ಶಿವಾಪೂರೆ, ಸದಾಶಿವ ಕದಂ, ಗಿರೀಜಾ ಹಂಜಿ, ಪುಂಡಲೀಕ ಮಂಟೂರ, ಸದಾಶಿವ ಹುಂಜ್ಯಾಗೋಳ, ಸದಾಶಿವ ಶಿವಾಪೂರೆ, ಎಮ್.ವಿ.ರಾಠೋಡ ಹಾಗೂ ಗ್ರಾ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.