ಕಿತ್ತೂರ ರಾಣಿ ಚೆನ್ನಮ್ಮನ ಕಂಚಿನ ಮೂರ್ತಿ ಪ್ರತಿಷ್ಠಾನೆ

ಕಿತ್ತೂರ ರಾಣಿ ಚೆನ್ನಮ್ಮನ ಕಂಚಿನ ಮೂರ್ತಿ ಪ್ರತಿಷ್ಠಾನೆ Installation of bronze statue of Queen Chennamma of Kittur

ಮಹಾಲಿಂಗಪುರ 28: ಸಮೀಪದ ಮದಭಾಂವಿ ಗ್ರಾಮದಲ್ಲಿ ಅ.4ರಂದು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಅತ್ಯಂತ ವೈಭವದಿಂದ ಕಿತ್ತೂರ ರಾಣಿ ಚೆನ್ನಮ್ಮನ ಅತಿ ದೊಡ್ಡ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪನೆ ಹಾಗೂ ಚೆನ್ನಮ್ಮ ಜಯಂತಿಯನ್ನು ಆಚರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಮದ ಜನರ ಬಹುದಿನದ ಕನಸು. ಹಿರಿಯರು ಸಮಾಜದ ಯುವಕರು ವಿವಿಧ ಸಮಾಜ ಬಾಂಧವರು ಸ್ವತಂತ್ರಕ್ಕಾಗಿ ಹೋರಾಡಿದ ವೀರ ಮಹಿಳೆಯ 201ನೇಯ ವಿಜಯೋತ್ಸವವನ್ನು ಈ ಸಂದರ್ಭದಲ್ಲಿ ಆಚರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. 

ದಿವ್ಯ ಸಾನಿಧ್ಯ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಲಿಂಗಾಯತ ಪಂಚಮಸಾಲಿ ಪೀಠ ಕೂಡಲಸಂಗಮ, ಸಾನಿಧ್ಯವನ್ನು ಪುರಿ ಜಗದ್ಗುರು ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು, ಭಗೀರಥ ಪೀಠ ಹೊಸದುರ್ಗ, ಪ.ಪೂ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾಸ್ವಾಮಿಗಳು ಸಿದ್ದಶ್ರೀ ಸಿದ್ದಾಶ್ರಮ ಕೌಲಗುಡ್ಡ, ಶ್ರೀ ನಾಗಯ್ಯ ಮಠಪತಿ, ಅರ್ಚಕರು ಶ್ರೀ ಸದಾಶಿವ ದೇವಸ್ಥಾನ ಮದಭಾಂವಿ, ಘನ ಅಧ್ಯಕ್ಷತೆಯನ್ನು ಬಸವನಗೌಡ ಆರ್‌.ಪಾಟೀಲ(ಯತ್ನಾಳ), ಶಾಸಕರು ವಿಜಯಪುರ, ಅಧ್ಯಕ್ಷತೆ ಶ್ರೀಶೈಲ ದಲಾಲ,ಉದ್ಘಾಟಕರಾಗಿ ಸಿದ್ದು ಕ. ಸವದಿ ಶಾಸಕರು ತೇರದಾಳ ಮತಕ್ಷೇತ್ರ, ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಕರ್ನಾಟಕ ಸರ್ಕಾರ, ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯರು, ಹನುಮಂತ ಆರ್ ನಿರಾಣಿ ವಿಧಾನ ಪರಿಷತ್ ಸದಸ್ಯರು, ಜ್ಯೋತಿ ಬೆಳಗಿಸುವವರು ಆರ್‌. ಬಿ ತಿಮ್ಮಾಪುರ ಅಬಕಾರಿ ಸಚಿವರು ಕರ್ನಾಟಕ ಸರ್ಕಾರ, ಪಿ ಸಿ ಗದ್ದಿಗೌಡರ ಲೋಕಸಭಾ ಸದಸ್ಯರು ಬಾಗಲಕೋಟ, ಉಮಾಶ್ರೀ ವಿಧಾನ ಪರಿಷತ ಸದಸ್ಯರು, ಪಿ ಎಚ್ ಪೂಜಾರ ವಿಧಾನ ಪರಿಷತ ಸದಸ್ಯರು, ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಸದಸ್ಯರು, ಧರೆಪ್ಪ ಸಾಂಗ್ಲೀಕರ ಜಿಲ್ಲಾ ಅಧ್ಯಕ್ಷ ಪಂಚಮಸಾಲಿ ಸಮಾಜ ಬಾಗಲಕೋಟ. ಧ್ವಜಾರೋಹಣವನ್ನು ಬಾಲಚಂದ್ರ ಜಾರಕಿಹೊಳಿ ಶಾಸಕ ಅರಬಾಂವಿ ಮತಕ್ಷೇತ್ರ,ಜಗದೀಶ ಗುಡಗುಂಟಿಮಠ ಶಾಸಕರು ಜಮಖಂಡಿ ಮತಕ್ಷೇತ್ರ, ಸಿದ್ದು ಕೊಣ್ಣೂರ ಸಂಚಾಲಕ ಕಿಸಾನ ಕಾಂಗ್ರೆಸ್ ಘಟಕ, ಮಹಾಂತೇಶ ಹಿಟ್ಟಿನಮಠ ಮಾಜಿ ಸದಸ್ಯ ಜಿಲ್ಲಾ ಪಂಚಾಯತ ಬಾಗಲಕೋಟ, ಅರ್ಜುನ ಹಲಗಿಗೌಡರ ವಕೀಲರು,ಮಹಾಂತೇಶ ಉರಬಿನ್ನವರ ಪ್ರಥಮ ದರ್ಜೆ ಗುತ್ತಿಗೆದಾರರು, ನೆರವೇರಸಲಿದ್ದು. ಮುಖ್ಯ ಅತಿಥಿಗಳಾಗಿ ಸದಾಶಿವ ಪಟ್ಟಣಶೆಟ್ಟಿ, ಡಾ ಏ ಆರ್ ಬೆಳಗಲಿ, ಮಹಾದೇವ ಮಾರಪೂರ, ಸಿದ್ದುಗೌಡ ಪಾಟೀಲ, ಲಕ್ಕಪ್ಪ ಪಾಟೀಲ, ಬಸವರಾಜ ನಾಗನೂರ, ಚೆನ್ನಪ್ಪ ಪಟ್ಟಣಶೆಟ್ಟಿ, ವಿನೋದ ಉಳ್ಳಾಗಡಿ, ಶ್ರೀಶೈಲ ಅರಭಾಂವಿ, ಸುಭಾಸ ಪಾಟೀಲ ಅಧ್ಯಕ್ಷರ ಪಂಚಮಸಾಲಿ ಸಮಾಜ ಬೆಳಗಾವಿ,ಆಗಮಿಸಲಿದ್ದಾರೆಂದು ರಾಣಿ ಚೆನ್ನಮ್ಮ ಕಮೀಟಿ ಉಪಾಧ್ಯಕ್ಷ ಶ್ರೀಶೈಲ ಒಂಟಿ, ಶಿವಪ್ಪ ಉರಬಿನ್ನವರ, ಪರಸಪ್ಪ ಉರಬಿನ್ನವರ, ಮಲ್ಲಪ್ಪ ಉರಬಿನ್ನವರ, ಅಜೀತ ಹಾದಿಮನಿ ಸದಸ್ಯರು, ಸಮಾಜದ ಮುಖಂಡರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.