ಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೇಮಠದಲ್ಲಿ 26 ರಂದು ಜಗತ್ತಿನ ಅತಿದೊಡ್ಡ ಸ್ಪಟಿಕ ಶಿವಲಿಂಗ ಸ್ಥಾಪನೆ

Installation of World's Largest Crystal Shiv Linga at Lingadahalli Rambhapuri Branch Hiremath on 26

ರಾಣೇಬೆನ್ನೂರು 23 :  ತಾಲೂಕಿನ  ಸ್ವಯಂಭೋ ಕೈಲಾಸ ಬೃಹತ್ ಸ್ಪಟಿಕ ಶಿವಲಿಂಗಂ ಕ್ಷೇತ್ರ ಲಿಂಗದಹಳ್ಳಿ ಸಂಸ್ಥಾನ ಹಿರೇಮಠದಲ್ಲಿ  ನಾಳೆ 26, 2025 ರಂದು ಬುಧವಾರ ಮುಂಜಾನೆ 10:30ಕ್ಜೆ ಮಹಾಶಿವರಾತ್ರಿ ನಿಮಿತ್ತ, ಜಗತ್ತಿನ ಏಕೈಕ ಬೃಹತ್ "ಸ್ಪಟಿಕ ಶಿವಲಿಂಗ" ಇದರ ಪ್ರಾಣ ಪ್ರತಿಷ್ಠಾಪನೆ ಧಾರ್ಮಿಕ ಸಮಾರಂಭವು ಜರುಗಲಿದೆ ಎಂದು ಹಿರೇಮಠ  ಲಿಂಗದಹಳ್ಳಿಯ ಡಾ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಅಂದು ಮುಂಜಾನೆ ಎಲ್ಲ ರೀತಿಯ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿರಾಧ್ಯ ಶಿವಾಚಾರ್ಯ ಭಗವದ್ಪಾದಂಗಳವರು ತಮ್ಮ ಅಮೃತ ಹಸ್ತದಿಂದ ಐದು ಅಡಿ ಎತ್ತರದ "ಸ್ಪಟಿಕಲಿಂಗು" ಇದರ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ, ನಂತರ ನಡೆಯುವ ಮಹಾ ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸುವರು.  

ಹೊನ್ನಾಳಿ ಡಾ. ಚನ್ನಮಲ್ಲಿಕಾರ್ಜುನ, ತೊಗರ್ಸಿ, ಮಹಾಂತ ದೇಶಿ ಕೇಂದ್ರ, ಚನ್ನವೀರ ದೇಶಿ ಕೇಂದ್ರ, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ, ದಿಂಡದ ಹಳ್ಳಿ ಪಶುಪತಿ ಶಿವಾನಂದ, ಮಣಕೊರ ಮಲ್ಲಿಕಾರ್ಜುನ ಶಿವಾಚಾರ್ಯರು  ಸೇರಿದಂತೆ ನಾಡಿನ ಹರ ಗುರುಚರ ಮೂರ್ತಿಗಳು ತಮ್ಮ ಉಪದೇಶಾಮೃತ ನೀಡುವರು.  

ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ, ಸಂಸ್ಕೃತಿ -ಧರ್ಮ ಪರಂಪರೆ ಕುರಿತು ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರು ಉಪನ್ಯಾಸ ನೀಡುವರು.  

ಗೋಷ್ಠಿ :-2 ರಲ್ಲಿ ನಾಡಿನ ರೈತರ ನಕ್ಷತ್ರಗಳ ಸಮಾವೇಶದಲ್ಲಿ ಶ್ರೀಶೈಲ ಜಗದ್ಗುರು ಮಹಾ ಸನ್ನಿಧಿಯವರು ದಿವ್ಯ ಸಾನಿಧ್ಯದಲ್ಲಿ, ನಿವೃತ್ತ  ನ್ಯಾಯಾಧೀಶ ಶಂಕ್ರಯ್ಯ ವಸ್ತ್ರದಮಠ, ವಿ.ಎಲ್‌. ಗುಂಜಕರ, ಪಿ.ಜಿ. ಅಮ್ಮಿನಭಾವಿ, ಕೆ. ಲಕ್ಷ್ಮಣ, ಅಜಿತ್ ನಾಯ್ಕ, ಬಸವರಾಜ ಅರಬಗೊಂಡ, ರವೀಂದ್ರಗೌಡ ಪಾಟೀಲ್,  

 ಮಂಜುನಾಥ್, ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನಪ್ಪ ಬಳ್ಳಾರಿ, ಪ್ರಭು ತಳವಾರ, ಸಿ.ಸಿ.ಪಾಟೀಲ, ಹನುಮಂತಪ್ಪ ದಿವಗಿಹಳ್ಳಿ, ಆರ್‌. ಎಚ್‌. ಪಾಟೀಲ, ಹನುಮಂತಪ್ಪ ಕಬ್ಬಾರ, ರಾಜಶೇಖರ್ ದೂದಿಹಳ್ಳಿ ವಿಜಯಕುಮಾರ್ ಎನ್‌.ಎಂ, ಪಂಚಪ್ಪ ಮಾಗನೂರ, ಈರಣ್ಣ ಹಲಗೇರಿ ಕಮಲಮ್ಮ ಎಮ್ಮೇರ ಮತ್ತಿತರರು ಪಾಲ್ಗೊಳ್ಳುವರು. ಅಲ್ಲದೆ ನಗರ ಮತ್ತು ತಾಲೂಕಿನ ರಾಜಕೀಯ ನಾಯಕರು, ಗಣ್ಯರು ವರ್ತಕರು, ಸಮಾಜಸೇವಕರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  

ಶಿವರಾತ್ರಿ ನಿಮಿತ್ತ ಪುಣ್ಯಕ್ಷೇತ್ರದಲ್ಲಿ ಶಿವಪೂಜಾ, ಸ್ಪಟಿಕ ಲಿಂಗಕ್ಕೆ ಮತ್ತು ಪಚ್ಚೆ ಶಿವಲಿಂಗಗಳಿಗೆ ರುದ್ರಾಭಿಷೇಕ, ಲಕ್ಷ ಬಿಲ್ವಾರ್ಚನೆ, ಪುಷ್ಪಾರ್ಚನೆ ಮತ್ತು ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ ಎಂದು ಶ್ರೀ ವೀರಭದ್ರ ಶಿವಾಚಾರ್ಯರು ತಿಳಿಸಿದ್ದಾರೆ.