ತಾಲೂಕು ಕ್ರೀಡಾಂಗಣದಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಿ : ಚಿಕ್ಕಣ್ಣನವರ
ಬ್ಯಾಡಗಿ 09: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಕ್ರೀಡಾಂಗಣದ ರಂಗಮಂದಿರದ ಒಳಗಡೆ ಹಾಗೂ ಹೊರಗಡೆ ಸಿ ಸಿ ಕ್ಯಾಮೆರಾ ಅಳವಡಿಸಿ ಎಂದು ಭ್ರಷ್ಟಾಚಾರ ವೀರೂಧಿ ಜನ ಆಂದೋಲನದ ನ್ಯಾಸ ಕಮೀಟಿಯ ರಾಜ್ಯ ಸಂಚಾಲಕ ಹಾಗೂ ನಿವೃತ್ತ ಯೋಧ ಎಂ ಡಿ ಚಿಕ್ಕಣ್ಣನವರ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಪಟ್ಟಣದ ಮಧ್ಯಭಾಗದಲ್ಲಿರುವ ಶ್ರೀ ಜಯದೇವ ಜಗದ್ಗುರು ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ದಿನಾಲು ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ನಗರದ ಬಹುತೇಕ ಸಾರ್ವಜನಿಕರು ಭಾಗವಹಿಸುತ್ತಾರೆ. ಹಾಗೂ ಸದರಿ ಕ್ರೀಡಾಂಗಣದಲ್ಲಿ ಸರ್ಕಾರ ಮಟ್ಟದ ಹಾಗು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅನೇಕ ಕ್ರೀಡಾಕೂಟ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ ಸಾರ್ವಜನಿಕರ ದೃಷ್ಟಿಯಿಂದ ಮುಂದೆ ಯಾವುದೇ ತರಹದ ಘಟನೆಗಳು ಸಂಭವಿಸದಂತೆ ರಂಗಮಂದಿರದ ಒಳಗಡೆ ಹಾಗೂ ಹೊರಗಡೆ ಮುಂಜಾಗ್ರತ ಕ್ರಮವಾಗಿ ಶಿಘ್ರವೇ ಕ್ರೀಡಾಂಗಣಕ್ಕೆ ಸಿಸಿ ಕ್ಯಾಮೆರಾ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಬೇಕು ಎಂದು ಹಾವೇರಿ ಕ್ರೀಡಾ ಇಲಾಖೆ ಹಾಗೂ ಯುವ ಸಬಲೀಕರಣ ಇವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಮನವಿ ಮಾಡಿದ್ದಾರೆ.