ಇನ್ಸ್ಟಾಗ್ರಾಮ್ ಖಾತೆ ತೆರೆದ 'ಚಿನ್ನಾರಿ ಮುತ್ತ'

ಬೆಂಗಳೂರು, ಸೆ 27 : ಕೆಲವು ತಿಂಗಳ ಹಿಂದೆ ಮುಹೂರ್ತ ಆಚರಿಸಿಕೊಂಡಿದ್ದ ವಿಜಯ ರಾಘವೇಂದ್ರ ಅಭಿನನಯದ 'ಮಾಲ್ಗುಡಿ ಡೇಸ್.  ಚಿತ್ರತಂಡ ಸದ್ದಿಲ್ಲದೆ  ಚಿತ್ರೀಕರಣವನ್ನು ಮುಗಿಸಿದೆ ಜೊತೆಗೆ ಮಾತಿನ ಜೋಡಣೆಯನ್ನೂ ಮುಗಿಸಿ ಆದಷ್ಟು ಬೇಗ ತೆರೆಗೆ ಬರಲು ಯೋಜನೆ ರೂಪಿಸಿದೆ 

ಏತನ್ಮಧ್ಯೆ ಮಾಲ್ಗುಡಿ ಡೇಸ್ ಚಿತ್ರಿಕರಣವನ್ನು ಮುಗಿಸಿ ಜಿ ಕನ್ನಡದ ಡ್ಯಾನ್ಸ್ ಕನರ್ಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ವಿಜಯ ರಾಘವೇಂದ್ರರವರು ಇದೀಗ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಖಾತೆ ತೆರೆದಿದ್ದಾರೆ 

ಅಧಿಕೃತವಾಗಿ ಇನ್ಸ್ಟಾಗ್ರಾಮ್ ಖಾತೆ ಅನ್ನು ನಾನೇ ನಿರ್ವಹಿಸುತ್ತಿದ್ದು ಇದರಿಂದ ಅಭಿಮಾನಿಗಳ ಜೊತೆ ನೇರ ಸಂಪರ್ಕ ಸಾಧ್ಯವಾಗುತ್ತದೆ  ಅಲ್ಲದೆ ಇತ್ತಿಚಿನ ದಿನಗಳಲ್ಲಿ ಕಲಾವಿದರಾಗಿ ನಮ್ಮೆಲ್ಲ ದಿನ ನಿತ್ಯದ ಆಗು ಹೋಗುಗಳ ವಿಚಾರ ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ ಹಾಗಾಗಿ ಟಿಣಚಿರಡಿಚಿಟ ಗೆ ಬಂದೆ "ಎಂದಿದ್ದಾರೆ ಚಿನ್ನಾರಿ ಮುತ್ತ  

ಇನ್ನು ಮಾಲ್ಗುಡಿ ಡೇಸ್ ಸಿನಿಮಾದ ಮೇಲಿನ ಕುತೂಹಲ ಹೆಚ್ಚಾಗಿದ್ದು ವಿಜಯ ರಾಘವೇಂದ್ರರವರ ಜೀವನದಲ್ಲಿ ಒಂದು ಮೈಲಿಗಲ್ಲು ಆಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ  

ವಿಜಯ ರಾಘವೇಂದ್ರ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದು ಅವರಿಗೆ ಜೋಡಿಯಾಗಿ ಗ್ರೀಷ್ಮ ಶ್ರೀಧರ್ ಅಭಿಯಿಸಿದ್ದಾರೆ.  ತಾರಾಗಣದಲ್ಲಿ ಪ್ರಮುಖ ಕಲಾವಿದರು ಇದ್ದು ,ಚಿತ್ರದ ಬಹುತೇಕ ಎಲ್ಲ ಕಾರ್ಯಗಳು ಮುಕ್ತಾಯವಾಗಿದೆ ಸದ್ಯದಲ್ಲೆ ಬಿಡುಗಡೆಯ ಕಡೆ ಗಮನ ಹರಿಸಲಾಗುತ್ತದೆ "ಎಂದು ನಿಮರ್ಾಪಕ ರತ್ನಾಕರ್ ಕಾಮತ್ ಹೇಳಿಕೊಂಡಿದ್ದಾರೆ 

ಫೆಬ್ರವರಿಯಲ್ಲಿ ಚಿತ್ರೀಕರಣ ಆರಂಬಿಸಿದ ತಂಡ ಒಟ್ಟು 60  ದಿನಗಳ ಕಾಲ ಮೂರು ಹಂತದ ಚಿತ್ರಿಕರಣವನ್ನು ಮುಗಿಸಿದೆ  ಮೈಸೂರು, ಬೆಂಗಳೂರು,ಪಾಂಡಿಚೇರಿ, ಕಳಸ ,ಶಿವಮೊಗ್ಗ, ಕೊಪ್ಪ ,ಚಿಕ್ಕಮಗಳೂರು, ಮಂಗಳೂರು, ಮಂತಾದ ಮಲೆನಾಡಿನ ಸುತ್ತ ಮುತ್ತಲಿನ ಸುಂದರ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ 

'ಅಪ್ಪೆ ಟೀಚರ್' ಎಂಬ ಬ್ಲಾಕ್ ಬಾಸ್ಟರ್ ಸಿನಿಮಾ ನಿದರ್ೆಶಿಸಿದ್ದ ಕಿಶೋರ್ ಮೂಡಬಿದ್ರೆ 'ಮಾಲ್ಗುಡಿ ಡೇಸ್' ಸಾರಥ್ಯ ವಹಿಸಿದ್ದಾರೆ.