ಸರಕಾರಿ ಶಾಲೆಗಳಲ್ಲಿ ಸ್ಮಾಟರ್್ ರೂಂಗೆ ಹಳೆಯ ವಿದ್ಯಾಥರ್ಿಗಳ ಮನವೊಲಿಸಿ: ಐಹೊಳೆ ಕರೆ

ಕಟಕಬಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಆಶಾ ಐಹೊಳ


 ರಾಯಬಾಗ 01: ಖಾಸಗಿ ಶಾಲೆಗಳಲ್ಲಿರುವಂತೆ ಸರಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳುಳ್ಳ ಒಂದು ಕೊಠಡಿ (ಸ್ಮಾಟರ್್ ರೂಂ) ನಿಮರ್ಿಸಲು ಕೊಡುವಂತೆ ಜನಪ್ರತಿನಿಧಿಗಳ ಆಯಾ ಶಾಲೆಗಳಲ್ಲಿ ಕಲಿತು ಉನ್ನತ ಹುದ್ದೆಯಲ್ಲಿ ಅಲಂಕರಿಸಿದ ಹಳೆ ವಿದ್ಯಾಥರ್ಿಗಳನ್ನು ಕರೆಯಿಸಿ ಒಂದು ಸಮಾರಂಭ ಮಾಡಿ ಅವರ ಮನವೊಲಿಸಬೇಕೆಂದು ಬೆಳಗಾವಿ ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ ಹೇಳಿದರು.

ಮಂಗಳವಾರ ಸಾಯಂಕಾಲ ತಾಲೂಕಿನ ಕಟಕಬಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ಸಂಜೀವಿನಿ ಮತ್ತು ಆಶಾ ಕಿರಣ ಖಾಸಗಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು, ಸ್ಥಳೀಯ ಜನಪ್ರತಿನಿಧಿಗಳ ಮತ್ತು ಆಯಾ ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾಥರ್ಿಗಳಿಗೆ ಕರೆಯಿಸಿ, ಅವರಿಂದ ಸಹಾಯ ಪಡೆದು ದೇಣಿಗೆ ರೂಪದಲ್ಲಿ ಅತ್ಯಾಧುನಿಕ ಸೌಕರ್ಯಗಳ ಒಳಗೊಂಡ ಒಂದು ಸ್ಮಾಟರ್್ ರೂಂ ನಿಮರ್ಿಸಿಕೊಂಡು ತಿಳಿಸಬೇಕೆಂದರು. ಈಗಾಗಲೇ ಈ ರೀತಿಯಲ್ಲಿ ನನ್ನ ಕ್ಷೇತ್ರದಲ್ಲಿ ಮಾಡಿರವುದಾಗಿ ಹೇಳಿದ ಅವರು, ಶಿಕ್ಷಣ ಇಲಾಖೆ ಸಹಕಾರದಿಂದ ಜಿಲ್ಲೆಯಲ್ಲಿ ಎಲ್ಲ ಸರಕಾರಿ ಶಾಲೆಗಳಿಗಳಿ ಭೇಟಿ ನೀಡಿ ಮನವರಿಕೆ ಮಾಡಿಕೊಡಲಾಗುತ್ತಿದೆ. ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ಇದಕ್ಕೆ ಶಾಲಾ ಸಂಜೀವಿನಿ ಎಂಬ ಹೆಸರಿಡಲಾಗಿದೆ ಎಂದು ತಿಳಿಸಿದರು.

ಬಿಇಒ ಸಿ.ಆರ್.ಒಣಿ ಮಾತನಾಡಿ, ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ ಅವರು ತಮ್ಮ ಸ್ವಇಚ್ಛೆಯಿಂದ ತಮ್ಮ ಸ್ವಂತ ಖಚರ್ಿನಲ್ಲಿ ಜಿಲ್ಲೆಯ ಆಯ್ದ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಅತ್ಯಂತ ಕಡುಬಡವ ಓರ್ವ ವಿದ್ಯಾಥರ್ಿಯನ್ನು ದತ್ತು ಪಡೆದು ಆ ವಿದ್ಯಾಥರ್ಿ ಹೆಸರಿನಲ್ಲಿ 5 ಸಾವಿರ ಹಣವನ್ನು ಠೇವಣಿ ಇಟ್ಟು, 10 ವರ್ಷಗಳ ನಂತರ ಆ ಹಣದಿಂದ ಉನ್ನತ ಶಿಕ್ಷಣ ಪಡೆಯಲು ಇಲ್ಲವಾದರೆ ಯಾವುದಾದರೂ ವ್ಯವಹಾರ ಕೈಗೊಳ್ಳಲು ಉಪಯೋಗಿಸಿಕೊಳ್ಳಲು ಅನುಕೂಲವಾಗಲು ಆಶಾ ಕಿರಣ ಎಂಬ ಖಾಸಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅವರ ಈ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ಇದನ್ನು ಸ್ಥಳೀಯ ಜನಪ್ರತಿನಿಧಿಗಳು ಸಹ ತಮ್ಮ ವ್ಯಾಪ್ತಿಯಲ್ಲಿ ಜಾರಿಗೆ ತರಬೇಕೆಂದು ಹೇಳಿದರು. 

ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ತಾ.ಪಂ.ಇಒ ಸುದೀಪ ಚೌಗಲಾ, ಶಿಕ್ಷಣ ಸಮನ್ವಾಧಿಕಾರಿ ಬಿ.ಎಮ್.ಮಾಳಿ, ಮುಖ್ಯೋಪಾಧ್ಯಾಯ ಎಸ್.ಬಿ.ಉಗಾರೆ, ಗ್ರಾ.ಪಂ.ಸದಸ್ಯ  ಸಿಆರ್ಪಿ ಎಸ್.ಎಲ್.ಮಸರಗೊಪ್ಪ, ಎಸ್ಡಿಎಮ್ಸಿ ಅಧ್ಯಕ್ಷ ಬಸಪ್ಪ ಪಾಟೀಲ, ಗ್ರಾ.ಪಂ.ಸದಸ್ಯ ವಿಠಲ ಬಿದರಿ, ಪಿಡಿಒ ಎಮ್.ಎಚ್.ನಡುವಿನಮನಿ, ಎಸ್.ಎಲ್.ತರಾಳ, ಶಶಿಕಲಾ, ಲಲಿತಾ ತಳದಮನಿ ಹಾಗೂ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಇದ್ದರು.