ಬೈಲಹೊಂಗಲ: ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಪರಿಶೀಲನೆ

ಲೋಕದರ್ಶನ ವರದಿ

ಬೈಲಹೊಂಗಲ 19:  ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಕೂಡಲೇ ನಿಮರ್ಿಸಿಕೊಳ್ಳಿ ಮುಂದಿನ ಕಂತುಗಳನ್ನು ಬಿಡುಗಡೆ ಮಾಡಲು ಕ್ರಮ ಜರುಗಿಸಲಾಗುವದು ಎಂದು ನೀರಾವರಿ ಇಲಾಖೆ ಪ್ರಧಾನ ಕಾರ್ಯದಶರ್ಿ, ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ರಾಕೇಶ ಕುಮಾರ ಹೇಳಿದರು.

   ಅವರು ಪಟ್ಟಣ ಹಾಗೂ ತಾಲೂಕಿನ ಸಂಪಗಾಂವ ಮತ್ತು ಇತರ ಪ್ರದೇಶಗಳಲ್ಲಿ ಹಾನಿಗೊಳಗಾದ ಮನೆಗಳ ನಿಮರ್ಾಣದ ಹಂತಗಳನ್ನು ಪರಿಶೀಲಿಸಿ ಮಾತನಾಡಿ, ಈಗಾಗಲೇ ಮೊದಲ ಕಂತು ಬಿಡುಗಡೆ ಮಾಡಲಾಗಿದ್ದು ಸಂತ್ರಸ್ಥರು ಮನೆಗಳನ್ನು ನಿಮರ್ಿಸಲು ಮುಂದಾಗಬೇಕು ಎಂದರು. 

        ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಉಪವಿಭಾಗಾಧಿಕಾರಿ ಎಸ್. ಅಭಿಜಿನ, ಬೆಳಗಾವಿ ಉಪವಿಭಾಗಾಧಿಕಾರಿ ಅಶೋಕ ತೇಲಿ, ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ, ತಾಪಂ ಇಓ ಸಮೀರ ಮುಲ್ಲಾ, ಪಿಡಿಓ ಗೋಪಿ ಉಪ್ಪಿನ, ಗ್ರಾಪಂ ಅಧ್ಯಕ್ಷ ಬಸವರಾಜ ನೇಸರಗಿ, ಬಸವರಾಜ ಪುಟ್ಟಿ, ಶಿವಪುತ್ರ ಜುಟ್ಟನವರ, ಪಂಚಾಯತ್ ರಾಜ್  ಇಂಜನಿಯರಿಂಗ ವಿಭಾಗದ ಎಸ್.ಕೆ.ಮೂಗಸಜ್ಜಿ, ತಾಪಂ ಸದಸ್ಯರು, ಇಂಜನೀತರ್ ಕೆ.ಎಚ್. ವಂಟಗುಡಿ, ಕೃಷಿ ಸಹಾಯಕ ನಿದರ್ೇಶಕಿ ಪ್ರತಿಭಾ ಹೂಗಾರ ಇದ್ದರು.