ಶಾಸಕರಿಂದ ಮೂಲಭೂತ ಸೌಕರ್ಯಗಳ ಪರಿಶೀಲನೆ

ಲೋಕದರ್ಶನ ವರದಿ

ಬೆಳಗಾವಿ 8:  ಶಾಸಕ ಅನಿಲ ಬೆನಕೆರವರು ಸೈನಿಕ ನಗರದ ಸಿದ್ಧಾರೂಢ ಮಠಕ್ಕೆ ಪೂಜೆ ಸಲ್ಲಿಸಿ ವಿನಾಯಕ ನಗರ, ಸೈನಿಕ ನಗರಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ದೂರುಗಳ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಭೇಟಿಯಾಗಿ ಅಲ್ಲಿಯ ನೀರಿನ ಸಮಸ್ಯೆ ರಸ್ತೆ, ಬೀದಿ ದೀಪ, ಗಟಾರು, ಚರಂಡು ಹೀಗೆ ಹಲವಾರು ಸಮಸ್ಯೆಗಳ ಮಾಹಿತಿಯನ್ನು ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಇಲ್ಲಿನ ಮೂಲಭೂತ ಸೌಲಭ್ಯಗಳಾದ ನೀರು, ರಸ್ತೆ, ಚರಂಡಿ, ಗಟಾರು ವ್ಯವಸ್ಥೆಯ ಕಾಮಗಾರಿಗಳನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು. ಮುಖ್ಯವಾಗಿ ರಸ್ತೆ ಹಾಗೂ ವಿದ್ಯೂತ ದೀಪಗಳಿಗೆ ಸಂಬಂಧಿಸಿದಂತೆ ಇಲಾಖೆಗೆ ಸೂಚಿಸಿದರು ಹಾಗೂ ಅನೇಕ ಗಲ್ಲಿಗಳಲ್ಲಿನ ನೀರಿನ ಸಮಸ್ಯೆಯನ್ನು ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಶೀಘ್ರದಲ್ಲಿಯೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ತದನಂತರ ವಿನಾಯಕ ನಗರ ಧೋಬಿಘಾಟ, ಬ್ಯಾಟಮಿಂಟನ ಕೋರ್ಟ, ಈಜುಕೊಳ, ಅನುಭವ ಮಂಟಪಕ್ಕೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು, ಜಲ ಮಂಡಳಿ ಅಧಿಕಾರಿಗಳು, ಹೆಸ್ಕಾಂ ಅಧಿಕಾರಿಗಳು, ಸ್ಥಳೀಯ ಮುಖಂಡರುಗಳು ಹಾಗೂ ರಹವಾಸಿಗಳು ಉಪಸ್ಥಿತರಿದ್ದರು.