ಬಳ್ಳಾರಿ,ಮೇ09: ಲಾಕ್ ಡೌನ್ ನಂತರ ಅಂತರ್ ರಾಜ್ಯಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಆಗಮಿಸುವ ವಲಸೆ ಕಾಮರ್ಿಕರು, ಯಾತ್ರಿಕರು,ವಿದ್ಯಾಥರ್ಿಗಳು ಹಾಗೂ ಇತರೇ ಸಾರ್ವಜನಿಕರಿಗೆ ಬಳ್ಳಾರಿ ಜಿಲ್ಲೆಯ ಮೂಲಕ ಪ್ರವೇಶಿಸುವುದಕ್ಕೆ ತಾಲೂಕಿನ ಜೋಳದರಾಶಿ ಬಳಿ ಚೆಕ್ಪೋಸ್ಟ್ನ್ನು ಜಿಲ್ಲಾಡಳಿತ ಎರಡು ದಿನಗಳಿಂದ ಆರಂಭಿಸಿದ್ದು,ಅನ್ಯರಾಜ್ಯಗಳಿಂದ ಆಗಮಿಸುವ ವಲಸಿಗರಿಗೆ ತಪಾಸಣೆ ನಡೆಸಿ ಅವರ ಸಂಬಂಧಿಸಿದ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತಿದೆ ಮತ್ತು ಜಿಲ್ಲೆಯವರಾಗಿದ್ದರೇ ಅವರನ್ನು ಕ್ವಾರಂಟೈನ್ಗೆ ಕಳುಹಿಸಿಕೊಡಲಾಗುತ್ತಿದೆ.
ಅನ್ಯರಾಜ್ಯಗಳಿಂದ ವಾಹನಗಳು ನುಸುಳದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು,ಪ್ರತಿಯೊಂದು ವಾಹನವನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ.ಚೆಕ್ಪೋಸ್ಟ್ ಮೂಲಕ ಆಗಮಿಸುವ ಪ್ರತಿ ವಾಹನವನ್ನು ತಡೆದು ಪಾಸ್ ಪಡೆದುಕೊಂಡಿದ್ದಾರೇಯೇ ಎಂದು ಪರಿಶೀಲಿಸಲಾಗುತ್ತಿದೆ. ಪಾಸ್ ಪಡೆದವರನ್ನು ಪಕ್ಕದಲ್ಲಿಯೇ ಸ್ಥಾಪಿಸಲಾಗಿರುವ ಚೆಳಗುಕರ್ಿ ಮೊರಾಜರ್ಿ ದೇಸಾಯಿ ವಸತಿ ಶಾಲೆಯಲ್ಲಿನ ತಪಾಸಣೆ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಜ್ವರ ತಪಾಸಣೆ ಮಾಡಿಸಿ ಅವರಿಗೆ ಕೈಗೆ ಕ್ವಾರಂಟೈನ್ ಸೀಲ್ ಹಾಕಲಾಗುತ್ತಿದೆ. ತಪಾಸಣೆ ಮಾಡಿಸಿದ ನಂತರ ಅವರು ಬಳ್ಳಾರಿ ಜಿಲ್ಲೆಯವರಾಗಿದ್ದು,ಜಿಲ್ಲೆಯೊಳಗೆ ತೆರಳಬೇಕಿದ್ದಲ್ಲಿ ಜಿಲ್ಲಾಡಳಿತ ಸ್ಥಾಪಿಸಲಾಗಿರುವ ಕ್ವಾರಂಟೈನ್ಗೆ ಅವರನ್ನು ಕಳುಹಿಸಿಕೊಡಲಾಗುತ್ತಿದೆ.
ಅನ್ಯ ಜಿಲ್ಲೆಗಳಿಗೆ ತೆರಳಬೇಕಾದವರಿದ್ದಲ್ಲಿ ಸಂಬಂಧಿಸಿದ ಜಿಲ್ಲಾ ನೋಡಲ್ ಅಧಿಕಾರಿಗಳ ಎಸ್ಕಾಟರ್್ ವಾಹನದ ಮೂಲಕ ವಲಸಿಗರ ವಾಹನವನ್ನು ಕರೆದುಕೊಂಡು ಸಂಬಂಧಿಸಿದ ಜಿಲ್ಲೆಯ ಗಡಿಯ ಚೆಕ್ಪೋಸ್ಟ್ ಬಳಿ ಬಿಟ್ಟು ಬರಲಾಗುತ್ತಿದೆ.ಕಳೆದ 24 ಗಂಟೆಗಳಿಂದ ಗುಂಟೂರು,ಚಿತ್ತೂರು,ಅನಂತಪುರ ಜಿಲ್ಲೆಗಳಿಂದ 130 ಜನರು ಈ ಚೆಕ್ಪೋಸ್ಟ್ ಮೂಲಕ ಆಗಮಿಸಿದ್ದು, ಅವರನ್ನು ತಪಾಸಣೆ ಮಾಡಿ ಕ್ವಾರಂಟೈನ್ಗೆ ಕಳುಹಿಸಲಾಗಿದೆ.ಸ್ಕ್ರೀನಿಂಗ್ ಸೆಂಟರ್ನಲ್ಲಿ ಒಟ್ಟು 50 ಜನ ಸಿಬ್ಬಂದಿ ಮೂರು ಪಾಳಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸುವ ವಲಸಿಗರನ್ನು ತಪಾಸಣೆ ಮಾಡುತ್ತಿದ್ದು,ಉಳಿದ ಇಲಾಖೆಗಳ ಸಿಬ್ಬಂದಿ ವಲಸಿಗರು ಯಾವ ಜಿಲ್ಲೆಯವರು;ಎಲ್ಲಿಗೆ ತಲುಪಬೇಕು ಎಂಬುದನ್ನು ನಮೂದಿಸಿಕೊಂಡು ಅಲ್ಲಿಗೆ ಕಳುಹಿಸಿಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳದಲ್ಲಿದ್ದ ತಪಾಸಣೆ ಕೇಂದ್ರದ ನೋಡಲ್ ಅಧಿಕಾರಿ ಈರಪ್ಪ ತಿಳಿಸಿದರು.