ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ.ಪಂ ಕಚೇರಿ ಮುಂದೆ ಧರಣಿ

ಕೊಪ್ಪಳ 20;ತಾಲೂಕಿನಲ್ಲಿ ಮಳೆ ಬೆಳೆ ಇಲ್ಲದೇ ತೀವ್ರ ಬರಗಾಲ ಆವರಿಸಿದೆ ಗ್ರಾಮಸ್ಥರು ಸಂಕಟಷ್ಟಕ್ಕೆ ಇಡಾಗಿದ್ದಾರೆ. ಬಹಳಷ್ಟು ಜನರು ತಮ್ಮ ಗ್ರಾಮಗಳನ್ನು ತೊರೆದು ಗುಳೆ ಹೊರಟಿದ್ದಾರೆ ಇದನ್ನು ತಡೆಗಟ್ಟುಲು ಸಕರ್ಾರ ಮುಂದಾಗಬೇಕು ಮತ್ತು ಗುಳೆ ತಡೆಯಲು ಮಹಾತ್ವ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಪ್ರಾರಂಭಸಿ ಜನರಿಗೆ ಅನುಕೂಲ ದೊರಕಿಸಿಕೊಡಬೇಕೆಂದು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿನ ತಾ.ಪಂ.ಕಚೇರಿ ಮುಂದು ಗುರುವಾರ ಕನರ್ಾಟಕ ಪ್ರಾಂತ ರೈತ ಸಂಘ ಪ್ರತಿಭಟನಾ ಧರಣಿ ನಡೆಸಿದರು.

ಕೂಡಲೇ ಗ್ರಾಮ ಪಂಚಾಯತಗಳಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಫಾರಂ ನಂ 6 ಕೊಡಲು ಹೋದರೆ ಅದಕ್ಕೆ ಪಂಚಾಯತಿ ಅಧಿಕಾರಿಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಾಡುತ್ತಾರೆ, ಅಲೆದಾಟಿಸುತ್ತಾರೆ. ಅಲ್ಲದೇ ಬೆದರಿಕೆ ಹಾಕಿ ಅಮಾಯಕ ಜನರನ್ನು ವಾಪಿಸ ಕಳುಹಿಸುತ್ತಾರೆ. ಉದ್ಯೋಗ ಖಾತ್ರಿ ಯೋಜನೆ ಮೊಟಕುಗೊಳಿಸುವ ಹುನ್ನಾರ ಇದರಲ್ಲ ಅಡಗಿದೆ. ಸರಿಪಡಿಸಬೇಕು ಮತ್ತು ಜನತೆಗೆ ಉದ್ಯೋಗ ಕಲ್ಪಸಿಕೊಡಬೇಕು ಮೂಲ ನ್ಯಾಯಯುತ ಬೇಡಿಕೆ ಈಡೇರಿಸಬೇಕು. ಎನ್.ಎಂ.ಆರ್.ನಲ್ಲಿ ಜನರ ಹೆಸರು ಕೈಬಿಡಬೇಕು, ಮಧ್ಯವತರ್ಿಗಳ ಹಾವಳಿ ತಡೆಯಬೇಕು, ತೊರಿತವಾಗಿ ಜನತೆಗೆ ಕೆಲಸ ನೀಡಿ ಕೂಲಿ ಹಣ ಪಾವತಿಸಬೇಕು. ಎಂದು ಸಂಘದ ತಾಲೂಕ ಕಾರ್ಯದಶರ್ಿ ಜಿ.ಬಸವರಾಜ್ ಸುಂಕಪ್ಪ ಗದಗ, ಹುಲಗಪ್ಪ ಪರಮಟ್ಟೆ, ಬಸಮ್ಮ ಭೋವಿ, ಗಂಗಮ್ಮ ಭೋವಿ, ಮಿಕ್ಷಾಮ್ಮ, ವೆಂಕಟೇಶ್ ಸೇರಿದಂತ ಅನೇಕರು ಉಪಸ್ಥಿತರಿದ್ದರು.