ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಒತ್ತಾಯ

ಲೋಕದರ್ಶನವರದಿ

ಶಿಗ್ಗಾವಿ ಃ ವಾಲ್ಮೀಕಿ ಸಮಾಜ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೂ ರಾಜ್ಯ  ಸರ್ಕಾರ ಮಾತ್ರ ಕಣ್ಣೆತ್ತಿ ನೊಡುತ್ತಿಲ್ಲ, ಕೇಂದ್ರ ಸರ್ಕಾರ ಶೇ 7ರಷ್ಟು ಮೀಸಲಾತಿ ನೀಡಿದರೂ ರಾಜ್ಯ ಸಕರ್ಾರ ಮಾತ್ರ ಶೇ. 3 ರಷ್ಟು ಮಾತ್ರ ನೀಡಿದೆ, ಈ ನೀತಿಯ ವಿರುದ್ಧ ಸಮಾಜದ ಶ್ರೀಗಳು ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ಮಹರ್ಷಿ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಹೇಳಿದರು.

ಪಟ್ಟಣದ ಜಕ್ಕನಕಟ್ಟಿ ರೋಡ್ ನಲ್ಲಿರುವ ಮಹರ್ಷಿ  ವಾಲ್ಮೀಕಿ ಸಮುದಾಯ ಭವನದಲ್ಲಿ ಮಹರ್ಷಿ ವಾಲ್ಮೀಕಿ ಯುವ ಸೇನೆ ವತಿಯಿಂದ ಹಮ್ಮಿಕೊಂಡ ನೂತನವಾಗಿ ಆಯ್ಕೆಯಾದ ಪುರಸಭೆ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಾಲ್ಮೀಕಿ ಸಮೂದಾಯ 4 ನೇ ಸ್ಥಾನದಲ್ಲಿದೆ.

         ಈ ಅಂಶವನ್ನು ಅರಿತಾದರು ರಾಜ್ಯ ಸರಕಾರ ರ ನಮಗೆ ಮಿಸಲಾತಿಯಲ್ಲಿ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ಇದೇ 21 ರಂದು ರಾಜ್ಯಾಧ್ಯಾಂತ ಜಿಲ್ಲಾವಾರು ಬಂದ್ಗೆ ಕರೆ ನೀಡಲಾಗುವದು ಎಂದ ಅವರು ಅವರ ಈ ಹೋರಾಟಕ್ಕೆ ನೂತನವಾಗಿ ಆಯ್ಕೆಯಾದ ಪುರಸಭೆ ಸದಸ್ಯರು ಸಹಕಾರ ನೀಡಲು ಮನವಿ ಮಾಡಿದರು.

ರಂಭಾಪೂರಿ ಕಾಲೇಜಿನ ಉಪನ್ಯಾಸಕ ಪ್ರೋ ಎಸ್ ವಿ ಬಳಿಗಾರ ಮಾತನಾಡಿ ನಾಡಿಗೆ ಭಾತೃತ್ವ ಸಾರುವ ಕಥೆಯನ್ನು ನೀಡಿದವರು ವಾಲ್ಕೀಕಿ ಮಹರ್ಷಿಯವರು ಇಂದು ಈ ಸಮೂದಾಯದ ಯುವ ಸೇನೆಯವರು ಎಲ್ಲ ಪುರಸಭೆಯ ಚುನಾಯಿತ ಪ್ರತಿನಿದಿಗಳನ್ನು ಒಟ್ಟುಗೂಡಿಸಿ ಸನ್ಮಾನಿಸಿರುವದು ಶ್ಲಾಘನಿಯ ಕಾರ್ಯ ಎಂದರು.

ಸಮಾಜದ ಮುಖಂಡ ತಿಪ್ಪಣ್ಣ ಕ್ಯಾಲಕೊಂಡ ಮಾತನಾಡಿ ಶಿಗ್ಗಾವಿ ಪುರಸಭೆಯಿಂದ ನಮ್ಮ ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.

       ನಮಗೆ ಜಾಗ ನೀಡಿ ಅಲ್ಲಿ ಸುಂದರವಾದ ಸಭಾ ಭವನವನ್ನು ನಿರ್ಮಿನಿಸಲಾಗಿದೆ ಅದೇ ರೀತಿ ಈ ಸಭಾ ಭವನಕ್ಕೆ ಮೂಲಭೂತ ಸೌಲ್ಯಭಗಳನ್ನು ನೀಡಬೇಕು ಮತ್ತು ರಸ್ತೆಯನ್ನು ನಿಮರ್ಿಸಿ ಕೊಡಬೇಕು ಎಂದರು.

ಪುರಸಭೆ ಸದಸ್ಯರಾದ ಸುಭಾಷ ಚೌವಾಣ ಶ್ರೀಕಾಂತ ಬುಳ್ಳಕ್ಕನವರ, ಪರಶುರಾಮ ಸೋನ್ನದ, ವಸಂತಾ ಬಾಗೂರ ಮಾತನಾಡಿದರು.

ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲ ಪುಸಭೆಯ ಸದಸ್ಯರನ್ನು ಸನ್ಮಾನಿಸಲಾಯಿತು.

ಸಮಾಜದ ಮುಖಂಡರಾದ ಮಾರುತಿ ಚೋಟಪ್ಪನವರ, ಮಂಜುನಾಥ ಮಲ್ಲಾಡದ, ಬಸಬನಗೌಡ ಪಾಟೀಲ್, ಪ್ರಕಾಶ ಕ್ಯಾಲಕೊಂಡ, ನಾಗರಾಜ ದೊಡ್ಡಮನಿ, ಮಂಜುನಾಥ ಪಾಟೀಲ್, ಬಸವರಾಜ ವಾಲ್ಮೀಕಿ, ಚಂದ್ರು ವಾಲ್ಮೀಕಿ, ಮಹೇಶ ಮಲ್ಲೂರ, ರಮೇಶ ಸೊಮಕ್ಕನವರ, ಬಸನಗೌಡ ಪಾಟೀಲ್, ಅಣ್ಣಪ್ಪ  ನೂತನ ಪರಸಭೆಯ ಸದಸ್ಯರಾದ ರೂಪಾ ಬನ್ನಿಕೊಪ್ಪ, ಮಂಜುನಾಥ ಬ್ಯಾಹಟ್ಟಿ, ಅನುರಾದಾ ಮಾಳವದೆ, ಸಿದ್ದಾರ್ಥಗೌಡ ಪಾಟೀಲ್, ದಯಾನಂದ ಅಕ್ಕಿ, ರಮೇಶ ವನಹಳ್ಳಿ, ಸಂಗೀತಾ ವಾಲ್ಮೀಕಿ, ಸುಲೆಮಾನ ತರ್ಲಗಟ್ಟ, ಮುಸ್ತಾಕಅಮ್ಮದ ತಹಶೀಲ್ದಾರ, ಗೌಸಖಾನ ಮುನಸಿ, ಸೇರಿದಂತೆ ಸಂಘದ ಪದಾಧಿಕಾರಿಗಳು ಸಮಾಜದ ಭಾಂದವರು ಉಪಸ್ಥಿತರಿದ್ದರು.