ಯರಗಟ್ಟಿ 24: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸೊಸೈಟಿಯ ಯರಗಟ್ಟಿ ಶಾಖೆಯ ಠೇವಣಿದಾರರು ತಮ್ಮ ಠೇವಣಿ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿ ಸೋಮವಾರ ಕಚೇರಿಗೆ ಬೀಗ ಜಡಿದು ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಠೇವಣಿದಾರರಾದ ವಿಜಯ ಬಡಿಗೇರ, ವಿಠ್ಠಲ ಇಳಿಗೇರ, ಅಬ್ದುಲ್ ಅತ್ತಾರ, ಮೌಲಾಸಾಬ ಸುಂಕದ, ಆನಂದ ಇಂಚಲ, ಗಂಗವ್ವ ಇಳಿಗೇರ ಸೇರಿದಂತೆ ಅನೇಕ ಠೇವಣಿದಾರರು ಇದ್ದರು.