ಲೋಕದರ್ಶನವರದಿ
ರಾಣೇಬೆನ್ನೂರು.16: ತಾಲೂಕಿನ ವ್ಯಾಪ್ತಿಯಲ್ಲಿನ ತುಂಗಭದ್ರ ನದಿ ತೀರದಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಮರಳನ್ನು ತೆಗೆಯುವುದು ಮತ್ತು ಸಂಗ್ರಹಿಸುವುದು ಹಾಗೂ ಸಾಗಾಣಿಕೆಯು ಅವ್ಯಾಹತವಾಗಿ ನಡೆದಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದಶರ್ಿ ರವೀಂದ್ರಗೌಡ ಪಾಟೀಲ ಆಗ್ರಹಿಸಿದರು.
ತಾಲೂಕಿನ ಮುದೇನೂರಿನ ತುಂಗಭದ್ರ ನದಿಯಲ್ಲಿ ಮರಳುಗುಂಡಿಗೆ ಸಿಲುಕಿ ಸಾವನ್ನಪ್ಪಿದ ವಿರೇಶ ಮಗ್ಗದರ ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಶವಗಾರದೆದುರು ಗುರುವಾರದಂದು ಪ್ರತಿಭಟಿಸಿ ಅವರು ಮಾತನಾಡಿದರು.
ಜೆಸಿಬಿ, ಹಿಟಾಚಿ ಮತ್ತಿತರ ಯಂತ್ರಗಳ ಮೂಲಕ ಕಾನೂನು ಬಾಹಿರವಾಗಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಮರಳನ್ನು ತೆಗೆಯುತ್ತಿದ್ದಾರೆ ಎಂದರು.
ಇಂತಹ ಮರಳುಗುಂಡಿಗಳಲ್ಲಿ ಈಗಾಗಲೇ ತಾಲೂಕಿನ ಕೆಲ ನದಿ ತೀರದ ಗ್ರಾಮಗಳಲ್ಲಿ ಸಾವಿನ ಪ್ರಕರಣಗಳು ಉಂಟಾಗಿವೆ.
ತಾಲೂಕಿನ ಕೋಟಿಹಾಳ ಗ್ರಾಮದ ನದಿಯಲ್ಲಿ ಎತ್ತುಗಳ ಮೂಲಕ ವ್ಯಕ್ತಿಯೋರ್ವನು ಕಾಣೆಯಾಗಿದ್ದಾನೆ. ಹೀಗೆ ತಾಲೂಕಿನ ಹಲವಾರು ಭಾಗಗಳಲ್ಲಿ ನದಿಯಲ್ಲಿ ಮರಳು ಗುಂಡಿಗೆ ಸಿಲುಕಿ ಕಾಣೆಯಾದವರನ್ನು ಹುಡುಕಿಕೊಡಬೇಕು ಹಾಗೂ ಶೀಘ್ರವೇ ಅಂತಹ ಎಲ್ಲ ಪ್ರಕರಣಗಳ ವಾರಸುದಾರರಿಗೆ ಪರಿಹಾರ ನೀಡಬೇಕು. ಇಲ್ಲವಾದರೆ ನದಿ ತೀರದಲ್ಲಿ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಮೃತ ವಿರೇಶನ ಕುಟುಂಬಕ್ಕೆ ತುತರ್ಾಗಿ ಪರಿಹಾರ ನೀಡಲು ಜಿಲ್ಲಾಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.
ರೈತಸಂಘದ ಮುಖಂಡರಾದ ಸುರೇಶಪ್ಪ ಗರಡಿಮನಿ, ಹನುಮಂತಪ್ಪ ಕಬ್ಬಾರ, ಹರಿಹರಗೌಡ ಪಾಟೀಲ, ನಿಂಗಪ್ಪ ಮಗ್ಗದ, ರವಿ ಮಲ್ಲಳ್ಳಿ, ಮಾಲತೇಶ ಮಗ್ಗದ, ಶಂಕರ ಪೂಜಾರ, ಚಂದ್ರಬಾಯಿ ಚಿತ್ರದುರ್ಗ, ಹೇಮಾವತಿ ಚಿತ್ರದುರ್ಗ ಸೇರಿದಂತೆ ರೈತ ಸಂಘದ ಮುಖಂಡರು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.