ಕನಿಷ್ಠ ವೇತನ ರೂ 18000 ಕ್ಕೆ ಒತ್ತಾಯ

ಲೋಕದರ್ಶನ ವರದಿ

ರಾಮದುರ್ಗ 03: ಬೆಲೆ ಏರಿಕೆಗೆ ಅನುಗುಣವಾಗಿ ದುಡಿಯುವ ಜನರಿಗೆ ಕನಿಷ್ಠ ಕೂಲಿ ನಿಗದಿ ಮಾಡಲು ಅನೇಕ ಹೋರಾಟಗಳನ್ನು ಮಾಡಿ ಕೇಂದ್ರ ಸರಕಾರದ ಗಮನ ಸೆಳೆದರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿಗದಿ ಮಾಡಿದ್ದು, ಕೇವಲ ರೂ.178 ಒಂದು ದಿನಕ್ಕೆ. ಕಾರ್ಮಿಕ ಕಾನೂಗಳನ್ನು ತಿದ್ದುಪಡಿ ಮಾಡಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಕಸಿದುಕೊಳ್ಳುವ ಸರಕಾರ ನೀತಿ ಖಂಡನೀಯ ಎಂದು ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಸಿಐಟಿಯು ಬೆಳಗಾವಿ ಜಿಲ್ಲಾ 6 ನೇ ಸಮ್ಮೇಳನ ಉದ್ಘಾಟಿಸಿ ರಾಜ್ಯ ಕಾರ್ಯದರ್ಶಿ ಕಾಂ|| ಮಹಾಂತೇಶ ಸರಕಾರದ ನೀತಿಯನ್ನು ಖಂಡಿಸಿದರು.

ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಕನಿಷ್ಠ ವೇತನ ಕೇಳಿದರೆ ದುಡಿಯುವ ಜನರ ಕಡೆ ಕಣ್ಣೇತ್ತಿ ನೋಡವುದಿಲ್ಲ. ಕಡಿಮೆ ವೇತನದಲ್ಲಿ ದುಡಿಯುವ ಅಂಗನವಾಡಿ, ಪಂಚಾಯತ ನೌಕರರು ಪಡೆದಿರುವ ಬಿಪಿಎಲ್ ಕಾರ್ಡ ರದ್ದು ಪಡಿಸಲು ಹೊರಟಿರುವದು ನಾಚಿಗೇಡು ಈ ನೀತಿ ವಿರುದ್ದ ಬರುವ 12 ನೇ ತಾರೀಖಿಗೆ "ಬೆಳಗಾವಿ ಚಲೋ" ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಅಧ್ಯಕ್ಷತೆ ವಹಿಸಿದ ಹಿರಿಯರಾದ, ಸಿಐಟಿಯುನ ಜಿಲ್ಲಾ ಅಧ್ಯಕ್ಷರಾದ ಕಾಂ|| ವ್ಹಿ.ಪಿ. ಕುಲಕರ್ಣಿ  ಮಾಡತನಾಡಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ  ಸಮ್ಮೇಳನಕ್ಕೆ ಆಗಮಿಸಿದ ಎಲ್ಲ ಪ್ರತಿನಿಧಿಗಳಿಗೆ ಸ್ವಾಗತಿಸಿ, ವಂದಿಸಿದರು.

ಎಲ್.ಎಸ್. ನಾಯ್ಕ, ಜಿ.ವಿ. ಕುಲಕರ್ಣಿ, ಸಿ.ಎ.ಖರಾಡೆ, ನಾಗಪ್ಪ ಸಂಗೊಳ್ಳಿ, ಸರಸ್ವತಿ ಮಾಳಶೆಟ್ಟಿ, ಟಿ.ಎ. ಬಬಗೌಡ ಸೇರಿದಂತೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.