ಉರ್ದು ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಕಟ್ಟಡ ಕಾಮಗಾರಿಕೆಗೆ ಒತ್ತಾಯ
ಬ್ಯಾಡಗಿ 05: ತಾಲ್ಲೂಕಿನ ಕಾಗಿನೆಲೆ ಉರ್ದು ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಶಾಲೆಯ ಮಕ್ಕಳೊಂದಿಗೆ ಜಿಲ್ಲಾ ರೈತಸಂಘದ ಅಧ್ಯಕ್ಷ ಎಂ.ಎನ್. ನಾಯಕ ಪ್ರತಿಭಟನೆ ಮಾಡಿದರು.ಗುರುವಾರ ಕಾಗಿನೆಲೆಪ್ಲಾಟಿನಲ್ಲಿರುವ ಉರ್ದು ಶಾಲಾ ಮುಂಭಾಗದಲ್ಲಿ ಶೌಚಾಲಯ ಬೇಡಿಕೆ ಬೋರ್ಡ್ ಹಾಗೂ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ಮಾಡುವ ಮೂಲಕ ಗಮನ ಸೆಳೆದು ಮಾತನಾಡಿದರು.ಈ ಶಾಲೆಯ ಶೌಚಾಲಯವನ್ನು ಗುತ್ತಿಗೆದಾರರು ಅರ್ಧಂಬರ್ಧ ಕಟ್ಟಿ ಮಕ್ಕಳಿಗೆ ಬಹಿರ್ದೆಸೆಗೆ ಹೋಗಲು ಆಗದಂತೆ ಮಾಡಿದ್ದಾರೆ. ಗುತ್ತಿಗೆದರರ ನಿರ್ಲಕ್ಷ್ಯದಿಂದ ಬೇಸತ್ತ ಶಾಲಾ ಮಕ್ಕಳು ಹಾಗೂ ಪಾಲಕರು ಶಾಲಾ ಶೌಚಾಲಯ ಕಾಮಗಾರಿ ಪೂರ್ಣಗೊಳಿಸುವವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಮಕ್ಕಳಿಗೆ ಒತ್ತಡ ಹಾಕುತ್ತಿದ್ದಾರೆ. ಬಹಿರ್ದೆಸೆ ಮುಕ್ತ ಶಾಲೆಯನ್ನಾಗಿ ಮಾಡಬೇಕೆಂದು ಕಿಡಿ ಕಾರಿದರು.ಈ ಶಾಲೆಗೆ ಶೌಚಾಲಯದ ಕೊರತೆಯಿಂದಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ತೊಂದರೆ ಹೇಳತೀರದಾಗಿದೆಶೌಚಾಲಯವಿಲ್ಲದ ಶಾಲೆಯಲ್ಲಿ ಹೆಣ್ಣುಮಕ್ಕಳು ಹಾಗೂ ಮಹಿಳಾ ಶಿಕ್ಷಕಿಯರು ಅನುಭವಿಸುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಸಂಬಂಧಪಟ್ಟ ಅಧಿಕಾರಿಗಳಂತೂ ಶಾಲಾ ಎಸ್‌ಡಿಎಂಸಿಯತ್ತ ಬೆರಳು ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆಗೊಳಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ವಹಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕು. ತಕ್ಷಣವೇ ಶೌಚಾಲಯ ನಿರ್ಮಾಣ ಮಾಡದಿದ್ದರೆ. ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಂ.ಎನ್. ನಾಯಕ ಎಚ್ಚರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ ಅವರಿಗೆ ಮನವಿ ನೀಡಿ ಆಕ್ರೊಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಪಿಎಸ್‌ಐ ಸಾಗರ, ಉಪತಹಶೀಲ್ದಾರ ಎಸ್.ಎನ್. ಮಲ್ಲಾಡದ, ಪಿಡಿಓ ವಿಶ್ವನಾಥ ಕಟ್ಟೆಗೌಡ್ರ, ರೆಹಮತವುಲ್ಲಾ ಹಾವೇರಿ, ಇಷ್ಮಿಯಿಲ್ ಸಾಬ್ ಹಾವೇರಿ, ಅಬ್ದುಲ್ ಸತ್ತಾರ ಮುಲ್ಲಾ, ಅಲಿಮುರ್ತಾಜ ರೋಣ, ಅಜುಮುದ್ದಿನ ಮುಲ್ಲಾ ಸೇರಿದಂತೆ ಎಸ್ ಡಿಎಂಸಿ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು.