ಲೋಕದರ್ಶನವರದಿ
ಮಹಾಲಿಂಗಪುರ : ರಾಜ್ಯದಲ್ಲಿ 35 ರಿಂದ 40 ಲಕ್ಷ ಜನಸಂಖ್ಯೆಯನ್ನೊಂದಿದ ಉಪ್ಪಾರ ಸಮಾಜವನ್ನು ಎಲ್ಲಾ ರಾಜಕೀಯ ಪಕ್ಷಗಳೂ ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವುದು ದೊಡ್ಡ ದುರಂತ ಎಂದು ರಾಜ್ಯ ನೌಕರ ಸಂಘ ಮತ್ತು ರಾಜ್ಯ ಉಪ್ಪಾರ ಸಂಘದ ಉಪಾಧ್ಯಕ್ಷ ವಿಷ್ಣು ಲಾತೂರ ಹೇಳಿದರು.
ಅಖಿಲ ಕನರ್ಾಟಕ ಉಪ್ಪಾರ ಮಹಾಸಭಾದ, ಬೆಂಗಳೂರು ವತಿಯಿಂದ ಸ್ಥಳೀಯ ಜಿಎಲ್ ಬಿಸಿ ಅತಿಥಿ ಗೃಹದ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಪ್ಪಾರ ಸಮಾಜ ಆಥರ್ಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದೆ. ಉಪ್ಪಾರ ಸಮಾಜದ ಮಹಿಳೆಯರು ಸಹ ಯಾವ ರಂಗದಲ್ಲೂ ಸೂಕ್ತ ಸ್ಥಾನಮಾನ ದೊರೆತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳೂ ಉಪ್ಪಾರ ಸಮಾಜವನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡು ಅಧಿಕಾರಕ್ಕೆ ಬಂದ ನಂತರ ಈ ಸಮಾಜವನ್ನು ನಿರಂತರವಾಗಿ ತಿರಸ್ಕರಿಸುತ್ತಾ ಬರಲಾಗಿದೆ.
ಇದುವರೆಗೂ ಯಾವುದೇ ರಾಜಕೀಯ ಪಕ್ಷಗಳು ಈ ಸಮಾಜಕ್ಕೆ ಉನ್ನತ ಮಟ್ಟದ ಅಧಿಕಾರ ನೀಡದೇ ಇಡೀ ಸಮಾಜವನ್ನು ಶೋಷಣೆ ಮಾಡುತ್ತಾ ಬಂದಿವೆ. ಸಮಾಜದ ಸರಕಾರಿ ಅಧಿಕಾರಿಗಳು, ನೌಕರರ ಮೇಲೆ ಇಲಾಖೆಗಳಲ್ಲಿ ನಿರಂತರವಾಗಿ ಅನ್ಯಾಯ, ದೌರ್ಜನ್ಯ ನಡೆಯುತ್ತಾ ಬಂದಿದೆ.
ಪ್ರತಿಭಟಿಸುವ ಸಂಘಟನಾ ಶಕ್ತಿ ಮತ್ತು ರಾಜಕೀಯ ಹಿತಾಸಕ್ತಿಯ ಕೊರತೆಯಿಂದ ಅವನ್ನೆಲ್ಲಾ ಸುಮ್ಮನೆ ಸಹಿಸಿಕೊಂಡು ಹೋಗಬೇಕಾಗಿದೆ.
ನೌಕರರ ಮತ್ತು ಮಹಿಳೆಯರ ಮೇಲೆ ಆಗುತ್ತಿರುವ ಅನ್ಯಾಯ, ದೌರ್ಜನ್ಯ ಹಾಗೂ ಇತರೆ ಸಮಸ್ಯೆಗಳನ್ನು ಸಕರ್ಾರಕ್ಕೆ ತೋರ್ಪಡಿಸಿ ಸೂಕ್ತ ಪರಿಹಾರ ದೊರಕಿಸಿಕೊಳ್ಳುವ ಹಾಗೂ ಉಪ್ಪಾರ ಜನಾಂಗವನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸುವುದು ಮತ್ತು ಉಪ್ಪಾರ ಕ್ಷೇಮಾಭಿವೃದ್ಧಿ ಮಂಡಳಿಗೆ 300 ಕೋಟಿ ರೂ. ಮಂಜೂರಿಗಾಗಿ ಒತ್ತಾಯ ನಿಟ್ಟಿನಲ್ಲಿ ಅಖಿಲ ಕನರ್ಾಟಕ ಉಪ್ಪಾರ ಮಹಾಸಭಾ , ಬೆಂಗಳೂರು ಇವರ ನೇತೃತ್ವದಲ್ಲಿ ಡಿ. 15 ರ ಭಾನುವಾರ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಉಪ್ಪಾರ ನೌಕರರ, ವೃತ್ತಿಪರರ ಮತ್ತು ಮಹಿಳೆಯರ ಬೃಹತ್ ಸಮಾವೇಶ, ಪ್ರತಿಭಾ ಪುರಸ್ಕಾರ, ಸಾಧಕರು ಮತ್ತು ಹಿರಿಯರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಉಪ್ಪಾರ ಸಮಾಜದ ಶಕ್ತಿ ಪ್ರದರ್ಶನದ ಈ ಸಮಾವೇಶವನ್ನು ಯಶಸ್ವಿಗಳಿಸಬೇಕೆಂದರು.
ಮಹಾಲಿಂಗಪುರ ನಗರ ಘಟಕದ ಅಧ್ಯಕ್ಷ ಮಹಾಲಿಂಗಪ್ಪ ಲಾತೂರ ಮಾತನಾಡಿದರು. ಮುತ್ತಪ್ಪ ಲಾತೂರ, ನಂದು ಲಾತೂರ, ಪರಶುರಾಮ ಲಾತೂರ, ಮಹಾದೇವ ಬೆಳವಣಕಿ, ರಮೇಶ ಲಾತೂರ, ಚನ್ನಪ್ಪ ಲಾತೂರ, ನಿಂಗಪ್ಪ ಉಸಳಿ, ಲಕ್ಷ್ಮಣ ಮುಗಳಖೋಡ ಇತರರು ಇದ್ದರು.