ಲೋಕದರ್ಶನ ವರದಿ
ಶಿರಹಟ್ಟಿ 14: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪೋಲಿಸ್ ಇಲಾಖೆಯ ಕಲಾ ತಂಡದಿಂದ ಬೀದಿ ನಾಟಕ ಮಾಡುವ ಮುಖಾಂತರ ಅಪರಾಧ ತಡೆಯ ಜನಜಾಗೃತಿ ಮೂಡಿಸಲಾಯಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸೇರಿದ್ದ ನೂರಾರು ಜನರ ಮಧ್ಯ ಬೀದಿ ನಾಟಕ ಪ್ರದಶರ್ಿಸಿದ ಕಲಾ ತಂಡ ಹೇಗೆಲ್ಲ ನಮ್ಮ ತಪ್ಪಿನಿಂದ ಮತ್ತು ಅವಸರದಿಂದ ಅಪರಾಧ ಮತ್ತು ಕಳವುಗಳು ನಡೆಯುತ್ತವೆ ಎಂಬುವದನ್ನು ತೋರಿಸಿದರು. ಬೈಕ್ ನಿಲ್ಲಿಸಿ ಅವಸರದಲ್ಲಿ ಲಾಕ್ ಮಾಡದೆ ಹೋಗುವದು, ನಿರ್ಜನ ಪ್ರದೇಶದಲ್ಲಿ ರಾತ್ರಿ ಹೊತ್ತು ಒಂಟಿಯಾಗಿ ಓಡಾಡುವದು, ಅಪರಿಚಿತರ ಕರೆಗೆ ಓಗೊಡುವದು ಇನ್ನೂ ಅನೇಕ ರೀತಿಯಲ್ಲಿ ಅಪರಾಧಿಗಳು ನಮ್ಮನ್ನು ಯಾವರೀತಿ ಯಾಮಾರಿಸುತ್ತಾರೆ ಎಂಬುವದನ್ನು ಎಳೆ ಎಳೆಯಾಗಿ ನಾಟಕ ಮಾಡುವ ಮುಖಾಂತರ ತೋರಿಸಿಕೊಟ್ಟರು.
ಈ ವೇಳೆ ಸಿಪಿಐ ರೇವಪ್ಪ. ಕಟ್ಟಿಮನಿ ಮಾತನಾಡಿ ದಿನೆ ದಿನೇ ಅಪರಾಧಗಳು ಹೆಚ್ಚುತ್ತಿದ್ದು ಅವುಗಳನ್ನು ತಡೆಗಟ್ಟಲು ಜನರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವದು ಅವಶ್ಯವಿದೆ. ಇಂದು ಕಲಾ ತಂಡ ಸಾರ್ವಜನಿಕರಿಗೆ ತಿಳಿಸಿಕೊಟ್ಟಿದ್ದು, ಸಾಧ್ಯವಾದಷ್ಟು ನೀವು ಅವುಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಇಂದು ಇದನ್ನು ನೋಡಿದರು ಉಳಿದವರಿಗೆ ಈ ಕುರಿತು ತಿಳಿಸಿ ಹೇಳಬೇಕು. ನೀವು ಬಹು ದಿನಗಳ ಕಾಲ ಬೇರೆ ಊರಿಗೆ ಹೋಗುವದಾದರೆ ಪೋಲಿಸ್ ಇಲಾಖೆಗೆ ಈ ಕುರಿತು ಮಾಹಿತಿ ನೀಡುವದು ಅಗತ್ಯವಾಗಿದೆ. ಇದೆ ರೀತಿ ನೀವು ನಿಮ್ಮ ಜೀವನದಲ್ಲಿ ಮುಂಜಾಗೃತಾ ಕ್ರಮಗಳನ್ನು ಅಳವಡಿಸಿಕೊಳ್ಳುವದರಿಂದ ಆಗಬಹುದಾದ ಅನೇಕ ಅಪರಾಧಗಳನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿದರು. ಪೋಲಿಸ ಕಲಾ ತಂಡ ಮತ್ತು ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.