ಕೊಪ್ಪಳ ಬಂದ್ ಗೆ ಬೆಂಬಲಿಸಿ ಇನ್ನರ್ ವೀಲ್ ಕ್ಲಬ್ ಪ್ರತಿಭಟನೆ

Inner Wheel Club protests in support of Koppala bandh

ಕೊಪ್ಪಳ ಬಂದ್ ಗೆ ಬೆಂಬಲಿಸಿ ಇನ್ನರ್ ವೀಲ್ ಕ್ಲಬ್ ಪ್ರತಿಭಟನೆ  

ಕೊಪ್ಪಳ 24 :  ನಗರಕ್ಕೆ ಸಮೀಪ ಎಂ ಎಸ್ ಪಿ ಎಲ್ ಬಲದೋಟ ದಿಂದ ನಿರ್ಮಾಣವಾಗುತ್ತಿರುವ ಬೃಹತ್ ಉಕ್ಕಿನ ಕಾರ್ಖಾನೆ ಇಂದ ನಗರದಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗಬಹುದಾದ ಭವಿಷ್ಯದ ಪರಿಣಾಮಗಳ ಬಗ್ಗೆ ಆಲೋಚಿಸಿ ಸದರಿ ಕಾರ್ಖಾನೆ ನಿರ್ಮಾಣ ಸ್ಥಗಿತಗೊಳಿಸಬೇಕು, ಇದರಿಂದ ಕಲುಷಿತ ವಾತಾವರಣ ನಿರ್ಮಾಣವಾಗುತ್ತದೆ ಕೂಡಲೇ ಇದು ರದ್ದುಪಡಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆ ಸೋಮವಾರದಂದು ಕೊಪ್ಪಳ ಬಂದ್ ಗೆ ಕರೆ ನೀಡಿದ್ದು ಸದರಿ ಬಂದ್ ಗೆ ಬೆಂಬಲಿಸಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಅವರ ನೇತೃತ್ವದಲ್ಲಿ ಕ್ಲಬ್ಬಿನ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿದರು.ಕೂಡಲೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಉಕ್ಕಿನ ಕಾರ್ಖಾನೆಗೆ ನೀಡಿರುವ ಅನುಮತಿ ರದ್ದು ಪಡಿಸಬೇಕು ಕೊಪ್ಪಳಕ್ಕೆ ಇಂತಹ ಬೃಹತ್ ಉಕ್ಕಿನ ಕಾರ್ಖಾನೆ ಬೇಡ ಇದರಿಂದ ಜನರ ಜೀವನಕ್ಕೆ ದುಷ್ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಾಗಿದ್ದು ಜನರ ಹಿತದೃಷ್ಟಿಯನ್ನು ಗಮನದಲ್ಲಿ ಇದ್ದುಕೊಂಡು ಕಾರ್ಖಾನೆ ಸ್ಥಾಪನೆ ರದ್ದುಪಡಿಸುವಂತೆ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಸೋಮವಾರದಂದು ಅಶೋಕ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆದರು,ಪ್ರತಿಭಟನೆಯ ನೇತೃತ್ವ ವನ್ನು ಕೊಪ್ಪಳ ಇನ್ನರ್ವಿಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ವಹಿಸಿದ್ದರು, ಈ ಸಂದರ್ಭದಲ್ಲಿ ಕ್ಲಬ್ಬಿನ ಉಪಾಧ್ಯಕ್ಷರಾದ ಮಧು ಶೆಟ್ಟರ್ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ ಖಜಾಂಚಿ ಆಶಾ ಐಎಸ್‌ಓ ಮಧು ನಿಲೋಗಲ್ ಎಡಿಟರ್ ನಾಗವೇಣಿ ಹೀರೀಯ ಸದಸ್ಯರಾದ ಡಾ, ರಾಧಾ ಕುಲಕರ್ಣಿ ಕಾರ್ಯಕಾರಣಿ ಸಮಿತಿ ಸದಸ್ಯರು ಇತರ ಸದಸ್ಯರು ಮಹಿಳೆಯರು ಪಾಲ್ಗೊಂಡಿದ್ದರು.