ಅರ್ಹ ಪಲಾನುಭವಿಗಳಿಗೆ ಅನ್ಯಾಯ: ಶರಣಮ್ಮ

ಬ್ಯಾಡಗಿ೧೭: ಅತೀವೃಷ್ಟಿ ಪರಿಹಾರ ವಿತರಣೆಯಲ್ಲಿ ಮನೆ ಕಳೆದುಕೊಂಡವರಿಗೆ ತಾರತಮ್ಯವಾಗಿದ್ದು ಅರ್ಹ ಫಲಾನುಭವಿಗಳ ಹೆಸರನ್ನು ಕೈಬಿಡಲಾಗಿದೆ ಕೂಡಲೇ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಂಡುವಂತೆ ತಾಲೂಕ ಪಂಚಾಯತ್ ಸದಸ್ಯರು ತಹಶೀಲ್ದಾರ ಶರಣಮ್ಮ ಅವರಿಗೆ ಬಿಗಿಪಟ್ಟು ಹಿಡಿದ ಘಟನೆ ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ನಡೆಯಿತು.

 ವಿಷಯದ ಕುರಿತು ಗಮನ ಸೆಳೆದ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎನ್.ಕರೇಗೌಡ್ರ, ಮನೆಗಳ ಹಾನಿಯನ್ನು 'ಎ' ಮತ್ತು ಬಿ ಹಾಗೂ 'ಸಿ' ಎಂಬುದಾಗಿ ವಿಭಾಗಿಸಲಾಗಿದ್ದು ಇದರಲ್ಲಿ 'ಸಿ'ವಿಭಾಗಕ್ಕೆ ರೂ.50 ಸಾವಿರ ಹಾಗೂ 'ಎ' ಮತ್ತು 'ಬಿ' ವಿಭಾಗದ ಹಾನಿಗೆ ತಲಾ 5 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ, ಬಹುತೇಕ ಮನೆಗಳ 'ಬಿ' ವಿಭಾಗಕ್ಕೆ ಸೇರ್ಪಡೆಯಾಗುವಂತಿದ್ದರೂ ಸಹ 'ಸಿ' ಎಂಬುದಾಗಿ ನಮೂದಿಸಲಾಗಿದ್ದು ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋ ಪಿಸಿದರು.

ತಿರಸ್ಕೃತ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ:ತಾಲೂಕಿನಾದ್ಯಂತ ಸುಮಾರು 150 ಹೆಚ್ಚು ಫಲಾನುಭವಿಗಳು ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳ ತಪ್ಪಿಗೆ ಸರ್ಕಾರದ  ಪರಿಹಾರದಿಂದ ಅರ್ಹರು ಹೊರಗುಳಿದ ಮಾಹಿತಿ ಲಭ್ಯವಾಗಿದೆ, ಕೂಡಲೇ, ತಿರಸ್ಕೃತಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ನಿಜವಾಗಿಯೂ ಮನೆಗಳು ಬಿದ್ದಿದ್ದರೆ ಅಂತಹವರ ಅರ್ಜಿ ಪರಿಗಣಿಸುವಂತೆ ಆಗ್ರಹಿಸಿದರು.

ನಾಳೆಯೊಳಗಾಗಿ ಕೊಡಿ: ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ಧಾರ ಶರಣಮ್ಮ, ಅಧಿಕಾರಿಗಳು ತಪ್ಪು ಪರಿಶೀಲನೆ ನಡೆಸಿದ್ದಾರೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ, ತಿರಸ್ಕೃತ ಅರ್ಜಿಗಳಲ್ಲಿ ಅರ್ಹರೆಂದು ಪರಿಗಣಿಸುವುದು ಅಸಾಧ್ಯ, ಈಗಾ ಗಲೇ ಅಂತಹ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಆದಾಗ್ಯೂ ನಿಜವಾದ ಫಲಾನುಭವಿಗಳ ಹೆಸರನ್ನು ನಾಳೆಯೊಳಗಾಗಿ ನೀಡಿದಲ್ಲಿ ಮರು ಪರಿಶೀಲನೆಗೆ ಸೂಚಿಸುವುದಾಗಿ ಸಭೆಗೆ ತಿಳಿಸಿದರು.

ಹಿರೆಕೇರೂರಿಗೆ ಬೇರೆ ಕಾನೂನು ಇದೆ ಏನ್ರೀ: ಕೃಷಿ ಇಲಾಖೆ ಮೇಲಿನ  ಚರ್ಚೆ ಸಂದರ್ಭದಲ್ಲಿ ಸದಸ್ಯ ಶಾಂತಪ್ಪ ದೊಡ್ಮನಿ ಮಾತನಾಡಿ, ಕನಿಷ್ಟ 1 ಹೆಕ್ಟರ್ ಭೂಮಿ ಹೊಂದಿರುವವರಿಗೆ ಮಾತ್ರಹನಿ ನೀರಾವರಿ ಉಪಕರಣಗಳನ್ನು (ಸ್ಪಿಂಕ್ಲರ್ ಸೆಟ್) ಇಲಾಖೆಯಿಂದ ನೀಡಲಾಗುತ್ತಿದೆ, ಅದಕ್ಕಿಂತ ಕಡಿಮೆ ಭೂಮಿಯಿರುವ ರೈತರ ಅರ್ಜಿ ಪಡೆಯುತ್ತಿಲ್ಲ, ಆದರೆ ಪಕ್ಕದ ಹಿರೇಕೆರೂರು ತಾಲೂಕಿನಲ್ಲಿ ಕೇವಲ 20 ಗುಂಟೆ ಹೊಂದಿದ ರೈತರಿಗೂ ಸಹ ಉಪಕರಣಗಳನ್ನು ನೀಡಲಾಗುತ್ತಿದ್ದು ಅಲ್ಲಿಗೆ ಕಾನೂನು ಬೇರೆ ಇದೆಯೇ..? ನಿಮ್ಮ ನಿಯಮದಿಂದ ತಾಲೂಕಿನ ಸುಮಾರು 22 ಸಾವಿರಕ್ಕೂ ಅಧಿಕ ಸಣ್ಣ ಹಿಡುವಳಿದಾರ ರೈತರು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕೃಷಿ ಅಧಿಕಾರಿ ಗೌಡಪ್ಪಳವರ ನಿಯಮದಂತೆ ಒಂದು ಹೆಕ್ಟೆರ್ ಮೇಲಿದ್ದರಿಗೆ ಸ್ಪಿಂಕ್ಲರ್ ಸೆಟ್ ನೀಡಬೇಕಾಗುತ್ತದೆ, ಒಂದು ವೇಳೆ ಭೂಮಿ ಕಡಿಮೆಯಿದ್ದಲ್ಲಿ ಉಪಕರಣಗಳನ್ನು ಗುಂಟೆವಾರು ವಿಭಾಗಿಸಿ ನೀಡಲಾಗುತ್ತಿದ್ದು ಮತ್ತೊಮ್ಮೆ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಕಂಪ್ಯೂಟರ್ ಮುಂದೆ ಕುಳಿತು ಹೋದರಾಯ್ತಾ..?:ಸದಸ್ಯೆ ಪೂರ್ಣಿಮಾ  ಆನ್ವೇರಿ ಮಾತನಾಡಿ, ವಿವಿಧ ಯೋಜನೆಗಳಡಿ ಆಶ್ರಯ ಮನೆಗಳನ್ನು ನಿರ್ಮಿಸಿಕೊಂಡು  112 ಜನ ಫಲಾನುಭವಿಗಳು ಹಣ ಸಿಗದೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ, ಮನೆಗಳನ್ನು ನಿರ್ಮಿಸಿಕೊಂಡು ಜಿಪಿಎಸ್ ಸೇರಿದಂತೆ ಅಗತ್ಯ ಎಲ್ಲ ದಾಖಲೆಗಳನ್ನು ನೀಡಿದ ಬಳಿಕವೂ ಪಿಡಿಓಗಳು ಮಾಡಿದ ತಪ್ಪಿಗೆ ಅವರುಗಳ ಅಕೌಂಟ್ ಸ್ಥಗಿತಗೊಂಡಿದ್ದು ಹಣ ಸಿಗದೇ ಒದ್ದಾಡುತ್ತಿದ್ದಾರೆ, ಏನೊಂದು ಕೆಲಸ ಮಾಡದೇ ಕೇವಲ ಕಂಪ್ಯೂ ಟರ್ ಮುಂದೆ ಕುಳಿತು ಎದ್ದು ಹೋಗುವ ಮೂಲಕ ನಿರ್ಲಕ್ಷ್ಯ ತೋರಿದ ರಾಠೋಡ್ ಸೇರಿದಂತೆ ಎಲ್ಲಾ ಪಿಡಿಓಗಳ

ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಲೈನ್ಮನ್ಗಾಗಿ ಕೈಮುಗಿದ ಸದಸ್ಯೆ:ಹೆಸ್ಕಾಂ ಇಲಾಖೆ ಮೇಲಿನ ಚರ್ಚೆಯ ಸಂದರ್ಭದಲ್ಲಿ ನಾಮ ನಿದರ್ೇಶಿತ ಸದಸ್ಯೆ ಹಾಗೂ ಕೆರೂಡಿ ಗ್ರಾಪಂ ಅಧ್ಯಕ್ಷೆ ಲಲಿತಾ ಪಾಟೀಲ ಮಾತನಾಡಿ, ಗ್ರಾಮದ ಅಂಗನವಾಡಿ ಬಳಿ ತಂತಿಗಳನ್ನು ಬದಲಾಯಿ ಸಬೇಕಾಗಿದ್ದು ಭಯದ ವಾತಾವರಣದಲ್ಲಿ ಅಂಗನವಾಡಿ ನಡೆಯುತ್ತಿದೆ, ಅಧಿಕಾರಿಗಳನ್ನು ಕೇಳಿದರೇ ಲೈನ್ಮನ್ಗಳಿಲ್ಲ ಎಂಬ ಸಬೂಬು ನೀಡುತ್ತಿದ್ದಾರೆ ಈ ಕುರಿತು ಕಳೆದಾರು ತಿಂಗಳಿಂದ ಕೆರೂಡಿ ವಿಭಾಗಕ್ಕೆ ಲೈನ್ಮನ್ ನೀಡುವಂತೆ ಪರಿಪರಿ ಯಾಗಿ ಬೇಡಿಕೊಂಡರು ಸಾಧ್ಯವಾಗಿಲ್ಲ ನಿಮ್ಮ ಕೈಮುಗಿತೀನಿ ಅನಾಹುತ ನಡೆಯುವ ಮುಂಚೆಯೇ ಲೈನ್ಮನ್ ಕಳುಹಿಸಿ ಕೊಡುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಧಿಕಾರಿ ಮಾಲತೇಶ ಹುಣಶೀಮರದ ವಿವಿಧ ಕಾರಣಗಳಿಂದ ಬ್ಯಾಡಗಿ ವಿಭಾಗದಲ್ಲಿ ಲೈನಮನ್ಗಳ ಕೊರತೆಯಿದೆ, ಹೊಸದಾಗಿ ನೇಮಕಗೊಂಡವರು ಇನ್ನೂ 15 ದಿನಗಳಲ್ಲಿ ಇಲಾಖೆಗೆ ಸೇರ್ಪಡೆಗೊಳ್ಳಲಿದ್ದಾರೆ ಅಲ್ಲಿಯವರೆಗೂ ನಾಳೆಯಿಂದಲೇ ಒಬ್ಬ ಲೈನ್ಮನ್ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ಒಂದು ತಾಸು ಮುಂದೂಡಿದ ಸಭೆ: ನಿಗದಿಯಂತೆ ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಾಗಿದ್ದ ಸಭೆಯು ಮಧ್ಯಾಹ್ನ 12 ಗಂಟೆಗೆ ಆರಂಭವಾಯಿತು, ಎಲ್ಲಾ ಇಲಾಖೆಗಳ ಮುಖ್ಯಸ್ಥರು ಹಾಜರಾದ ಬಳಿಕವೇ ಸಭೆಯನ್ನು ಆರಂಭಿಸಬೇಕು ಇಲ್ಲವೇ ನಾಳೆಗೆ ಮುಂದೂಡುವಂತೆ ಸದಸ್ಯರಾದ ಪ್ರಭುಗೌಡ ಪಾಟೀಲ ಹಾಗೂ ಮಹೇಶಗೌಡ ಪಾಟೀಲ ಬಿಗಿಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷೆ ಸವಿತಾ ಸುತ್ತಕೋಟಿ ಹಾಗೂ ಟಿಇಓ ಅಬಿದ್ ಗದ್ಯಾಳ ಇನ್ನೊಂದು ಬಾರಿ ಹೀಗಾಗದಂತೆ 

ಸದಸ್ಯರಿಗೆ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಲಿಲ್ಲ ಅಧ್ಯಕ್ಷೆ ಸವಿತಾ ಸುತ್ತಕೋಟಿ ಅನಿವಾರ್ಯವಾಗಿ ಸಭೆ ಯನ್ನು ಒಂದು ತಾಸು ಮುಂದೂಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಸದಸ್ಯರಾದ ಸುಶೀಲಾ ಹಲಗೇರಿ, ಸಾವಿತ್ರಾ ಕೋಡದ, ಗುಡ್ಡಪ್ಪ ಕೋಳೂರ, ಪಾರ್ವತಮ್ಮ ಮುದುಕಮ್ಮನವರ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.