ಲೋಕದರ್ಶನವರದಿ
ಶಿಗ್ಗಾವಿ28 : ತಾಲೂಕಿನ ಬಂಕಾಪುರ ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜನ ಬಿಕಾಂ ದ್ವಿತೀಯ ವರ್ಷದ ವಿದ್ಯಾಥರ್ಿಯಾದ ಇಂದ್ರಯ್ಯ ಹಿರೇಮಠ ಅವರ ಹೆಸರು ಸಂಗೀತ ಕ್ಷೇತ್ರದಲ್ಲಿ ಹೈ ರೇಂಜ್ ಬುಕ್ ಆಫ್ ವಲ್ರ್ಡ ರೆಕಾರ್ಡನಲ್ಲಿ ದಾಖಲಾಗಿದೆ.
ಹಾನಗಲ್ ತಾಲೂಕ ಮಾರಂಬೀಡ ಗ್ರಾಮದ ನಿವಾಸಿಯಾಗಿರುವ ಇಂದ್ರಯ್ಯ ಹಿರೇಮಠರವರು ಹಣೆಯಿಂದ ಪಿಯಾನೋ ನುಡಿಸುತ್ತಾ ಹಾಡನ್ನು ಹೇಳುವುದರಲ್ಲಿ ಪರಿಣತಿಯನ್ನು ಪಡೆದುಕೋಂಡಿದ್ದಾರೆ. ಬೆಂಗಳೂರು, ಮಂಡ್ಯ, ಹಾವೇರಿ ಸೇರಿದಂತೆ ವಿವಿಧ ಕಡೆ ಇತನು ನೀಡಿದ ಸಂಗೀತ ಕಾರ್ಯಕ್ರಮ ಮತ್ತು ಇತನ ವಿಶೇಷ ಕಲೆಯನ್ನು ಗುರುತಿಸಿ 2019ರ ಎಪ್ರೀಲ್ ನಲ್ಲಿ ಕನರ್ಾಟಕ ಅಚಿವರ್ಸ್ ಬುಕ್ ಆಫ್ ರಿಕಾರ್ಡ ಮತ್ತು 2019 ರ ಜುಲೈ 16 ರಂದು ಹೈ ರೇಂಜ್ ಬುಕ್ ಆಫ್ ವಲ್ರ್ಡ ರೆಕಾರ್ಡನಲ್ಲಿ ಇತನ ಚಿಹೆಸರು ದಾಖಲಾಗಿದೆ.
ಗದಗ ವಿರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಅಭ್ಯಾಸ ಮಾಡಿರುವ ಈತ ಈಗ ಮಾರಂಬೀಡದ ಸಂಗೀತ ಶಿಕ್ಷಕ ಜಗದೀಶ ಮಡಿವಾಳರ ಬಳಿ ಸಂಗೀತ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಇಂತಹ ಪ್ರತಿಭಾವಂತ ವಿದ್ಯಾಥರ್ಿಯನ್ನು ಕಾಲೇಜನ ಸಿಬ್ಬಂದಿ ವರ್ಗ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಇಂತಹ ವಿದ್ಯಾಥರ್ಿ ನಮ್ಮ ಕಾಲೇಜಿನ ದೊಡ್ಡ ಆಸ್ತಿಯಾಗಿ ಕಾಲೇಜನ ಕೀತರ್ಿ ಹೆಚ್ಚಿಸಿದ್ದಾನೆ ಎಂದು ಪ್ರಾಚಾರ್ಯ ಯಮುನಾ ಕೋಣೆಸರ ತಿಳಿಸಿದ್ದಾರೆ.