ನವದೆಹಲಿ, ಆ.22 ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಮತ್ತು ಇಡಿ ತನಿಖಾ ಅಧಿಕಾರಿಗಳ ಮುಂದೆ ಇಂದ್ರಾಣಿ ಮುಖರ್ಜಿ ನೀಡಿದ್ದ ಹೇಳಿಕೆಯೇ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಬಂಧನಕ್ಕೆ ಪ್ರಮುಖ ಅಸ್ತ್ರ , ಆಧಾರ, ಸಾಕ್ಷಿಯಾಯಿತು ಎನ್ನಲಾಗಿದೆ.
ಇಂದ್ರಾಣಿ ಮುಖರ್ಜಿಮತ್ತು ಅವರ ಪತಿ ಪೀಟರ್ ಮುಖರ್ಜಿ ಅವರು ಸಿಬಿಐ ಮತ್ತು ಜಾರಿ ನಿರ್ದೇ ಶನಾಲಯಕ್ಕೆ ನೀಡಿದ್ದ ಹೇಳಿಕೆಯಲ್ಲಿ ಆಗಿನ ಹಣಕಾಸು ಸಚಿವ ಚಿದಂಬರಂ ಅವರನ್ನು ತಮ್ಮ ಉತ್ತರ ಬ್ಲಾಕ್ ಕಚೇರಿಯಲ್ಲಿ ಭೇಟಿಯಾಗಿದ್ದಾಗಿಯೂ ನಂತರ ಅವರ ಪುತ್ರ ಕಾತರ್ಿ ಅವರನ್ನು ಭೇಟಿಯಾಗಿ ವ್ಯವಹಾರದಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದ ವಿಷಯ ತಿಳಿಸಿದ್ದರು.
ಇದು ಚಿದು ಬಂಧನಕ್ಕೆ ಪುಷ್ಟಿ ಕೊಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ರ ಕಾರ್ತಿಯವರನ್ನು ಬಂಧಿಸಿ ನಂತರ ಬಿಡಗಡೆ ಮಾಡಲಾಗಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರವೂ ಕಳದೆ ಫೆಬ್ರವರಿ 17, 2018 ರಂದು ಅವರು ತಮ್ಮ ಹೇಳಿಕೆಯಲ್ಲಿ ಕಾರ್ತಿ ಯವರನ್ನು ದೆಹಲಿಯ ಹಯಾತ್ ಹೊಟೆಲ್ನಲ್ಲಿ ಭೇಟಿಯಾದಾಗ ಲಂಚ ಕೇಳಿದ್ದರು ಎಂದು ದಾಖಲಿಸಿದ್ದರು ಎನ್ನಲಾಗಿದೆ.
ಒಟ್ಟಾರೆ ಚಿದು ಬಂಧನಕ್ಕೆ ರಾಣಿ ಮುಖರ್ಜಿ ಹೇಳಿಕೆಯೇ ಪ್ರಮಖ ಆಧಾರಸ್ತಂಭವಾಗಿದೆ ಎನ್ನಲಾಗಿದೆ. ಇಂದು ಚಿದು ಅವರನ್ನು ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಮೇಲಾಗಿ ಸುಪ್ರೀಂ ಕೋರ್ಟ್ ಚಿದು ಅವರ ಜಾಮೀನು ಮನವಿಯ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.