ಪ್ರತಿಯೊಬ್ಬ ರೈತರನ್ನು ಭೂ ಒಡೆಯನನ್ನಾಗಿ ಮಾಡಿದವರು ಇಂದಿರಾಜಿ: ಮಲಕಾರಿ

ಧಾರವಾಡ 19: ದೇಶದ ಪ್ರಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿಯವರು ಅನೇಕ ಜನಪ್ರೀಯ ಯೋಜನೆಗಳನ್ನು ಜಾರಿಗೆ ತಂದರು. ಬಡತನ ನಿಮೂರ್ಲನೆಗಾಗಿ, ಆಹಾರ ಭದ್ರತೆಗಾಗಿ, ರೋಟಿ, ಕಪಡಾ, ಔರ ಮಕಾನ, ಗರೀಬಿ ಹಟಾವೊ ನಂತಹ ಐತಿಹಾಸಿಕ ಯೋಜನೆಗಳನ್ನು ಬಡವರಿಗಾಗಿ ರೂಪಿಸಿದರು. ದೇಶದ ಸಮಗ್ರ ಅಭಿವೃದ್ಧಿಗೆ 20 ಅಂಶಗಳ ಕಾರ್ಯಕ್ರಮಗಳನ್ನು ರೂಪಿಸಿದ್ದು. ಅಷ್ಟೇ ಅಲ್ಲದೇ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿ ಕೆಲವೇ ಜನರಿಗೆ ಮೀಸಲಾಗಿದ್ದ ಬ್ಯಾಂಕುಗಳನ್ನು ದೇಶದ ಜನ ಸಾಮಾನ್ಯರು ಬಳಸುವುದರ ಜೊತೆಗೆ ಬ್ಯಾಂಕಗಳಲ್ಲಿ ಎಲ್ಲ ವರ್ಗಗಳಿಗೂ ಉದ್ಯೋಗ ದೊರೆಯುವ ಹಾಗೆ ಮಾಡಿದರು ಎಂದು ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಕಾರಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ರಾಣಿ ಚನ್ನಮ್ಮ ಬ್ಲಾಕ ಕಾಂಗ್ರೆಸ್ ವತಿಯಿಂದ ಆಚರಿಸಲಾದ ಇಂದಿರಾಗಾಂಧಿ 102ನೇ ಜಯಂತಿ ನಿಮಿತ್ತ ಬಡ ಮಹಿಳೆಯರಿಗೆ 100 ಕ್ಕೂ ಅಧಿಕ ಸೀರೆಗಳನ್ನು ಹಾಗೂ ಬಡ ವಿದ್ಯಾಥರ್ಿಗಳಿಗೆ ನೋಟ್ ಬುಕ್ ಹಾಗೂ ಪೆನ್ನುಗಳನ್ನು ಹಾಗೂ ಇಂದಿರಾ ಗಾಂಧಿಯವರ ಭಾವಚಿತ್ರವಿರುವ ಕ್ಯಾಲೆಂಡರ್ ಹಂಚಿ ಅವರು ಮಾತನಾಡಿದರು.

ಇನ್ನೊಂದು ಐತಿಹಾಸಿಕ ಯೋಜನೆ ಉಳುವವನೆ ಒಡೆಯ ಕಾನೂನನ್ನು ಜಾರಿಗೆ ತರುವ ಮೂಲಕ ದೇಶದ ಅಷ್ಟೂ ಜಮೀನುಗಳನ್ನು ಹೊಂದಿದ್ದ ಕೆಲವೇ ಕೆಲವು ಶ್ರೀಮಂತರು, ಬಂಡವಾಳಶಾಹಿಗಳು ಜಮೀನುದಾರರಿಂದ ಜಮೀನುಗಳನ್ನು ಪಡೆದು ದೇಶದ ಎಲ್ಲ ಬಡ ರೈತರಿಗೆ ಉಚಿತವಾಗಿ ಹಂಚಿದ ಕೀತರ್ಿ ದಿವಂಗತ ಇಂದಿರಾಗಾಂಧಿಯವರಿಗೆ ಸಲ್ಲುತ್ತದೆ. ಇಡೀ ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ಬಿತ್ತಿ ಬೆಳೆಯಲು ಭೂಮಿಯನ್ನು ಕೊಟ್ಟ ಮಹಾತಾಯಿ, ಅನ್ನದಾತೆ ಇದೇ ಇಂದಿರಾಗಾಂಧಿಯವರು ಹಾಗಾಗೀ ಈ ದೇಶವನ್ನು ಕಟ್ಟಿದ ಕಾಂಗ್ರೆಸ್ ಪಕ್ಷವನ್ನು ಜನತೆ ಎಂದೂ ಮರೆಯುವದಿಲ್ಲಾ.  ಇವತ್ತು ಕಾಂಗ್ರೆಸ್ 60 ವರ್ಷಗಳಿಂದ ಏನು ಮಾಡಿದೆ ಎಂದು ಬಾಯಿ ಬಡೆದುಕೊಳ್ಳುವ ಬಿಜೆಪಿಗರೇ ಇವತ್ತು ದೇಶದ ಸಾರ್ವಜನಿಕ ಸ್ವತ್ತುಗಳನ್ನು ಪ್ರಧಾನಿ ಮೋದಿಯವರು ಖಾಸಗಿಯವರಿಗೆ ಮಾರುತ್ತಿರುವರಲ್ಲಾ ಅವೆಲ್ಲಾ ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಕೊಟ್ಟ ಕೊಡುಗೆಗಳು ಎನ್ನುವುದನ್ನು ಅರಿತುಕೊಳ್ಳಿ ಎಂದು ಮಲಕಾರಿಯವರು ಹೇಳಿದರು.

    ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷ ನಾಯಕ ಸುಭಾಸ ಶಿಂಧೆ, ಜಿಲ್ಲಾ ಒಬಿಸಿ ಅಧ್ಯಕ್ಷ ಹೇಮಂತ ಗುರ್ಲಹೊಸೂರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶಾಂತವ್ವ ಗುಜ್ಜಳ, ಪ್ರಭಾವತಿ ವಡ್ಡಿನ, ಜಿಲ್ಲಾ ಯುವ ಕುರುಬರ ಅಧ್ಯಕ್ಷ ರಮೇಶ ನೆಲವಡಿ, ವಸಂತ ಅಕರ್ಾಚಾರಿ, ಸುನೀಲ ಹೊಂಗಲ, ಪ್ರಕಾಶ ಹಳಿಯಾಳ, ಭೀಮಣ್ಣ ಹೊನಕೇರಿ, ಪರಶುರಾಮ ಚುರುಮರಿ, ಹಾಗೂ ಅನೇಕ ಮುಖ್ಯ ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು.