ಜಿಲ್ಲೆಯಲ್ಲಿ 12 ತಾಲೂಕುಗಳು _ ಆರಂಭವಾದುದು ಮಾತ್ರ ಒಂದು ಕಡೆ ಮಾತ್ರ ; ಇದು ಇಂದಿರಾ ಕ್ಯಾಂಟೀನ್ ಕತೆ-ವ್ಯಥೆ

ಹಳಿಯಾಳದಲ್ಲಿ ಇಂದಿರಾ ಕ್ಯಾಂಟೀನ್ ಮತ್ತು ಅದು ಪ್ರಾರಂಭವಾದ ಕ್ಷಣದ ಚಿತ್ರ.

ನಾಗರಾಜ್ ಹರಪನಹಳ್ಳಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳ ಪೈಕಿ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿರುವುದು ಒಂದು ಕಡೆ ಮಾತ್ರ. ಅದು ಸಚಿವ ದೇಶಪಾಂಡೆ ಅವರ ಸ್ವಕ್ಷೇತ್ರ ಹಳಿಯಾಳದಲ್ಲಿ ಮಾತ್ರ. ಅಲ್ಲಿ 300 ಜನ ದಿನವೂ ಇಂದಿರಾ ಕ್ಯಾಂಟೀನ್ ಫಲಾನುಭವಿಗಳು. ವಿಧಾನಸಭಾ ಚುನಾವಣೆ ಘೋಷಣೆಗೆ ನಾಲ್ಕು ದಿನ ಮುಂಚೆ ಆರಂಭವಾದ ಇಂದಿರಾ ಕ್ಯಾಂಟೀನ್ ಆರಂಭದಲ್ಲಿ ಭರ್ಜರಿಯಾಗಿ , ರುಚಿಕಟ್ಟಾದ ತಿಂಡಿಗಳಾದ ಉಪ್ಪಿಟ್ಟು, ಇಡ್ಲಿ, ಅವಲಕ್ಕಿ, ಟೀ  ಹಾಗೂ ಊಟಕ್ಕೆ ಅನ್ನ ಸಂಬಾರು...ಹೀಗೆ ನಡೆಯಿತು. ಚುನಾವಣೆಯ ನಂತರ ಅದರ ಕ್ವಾಲಿಟಿ ಕಡಿಮೆಯಾಗುತ್ತಾ ಬಂತು ಎಂಬುದು ಅಲ್ಲಿಗೆ ಬರುವ ಗ್ರಾಹಕರ ಮಾತು.

ಇನ್ನು ಉಳಿದಂತೆ ಜಿಲ್ಲೆಯ 11 ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ಗೆ ಎರಡು ತಿಂಗಳ ಹಿಂದೆ  ಜಾಗವೇ ಸಿಕ್ಕಿರಲಿಲ್ಲ. ಈಗ ಜಾಗ ಸಿಕ್ಕಿದೆ. ಆದರೆ ಕ್ಯಾಂಟೀನ್ ರೂಪಗೊಂಡಿಲ್ಲ. ಕಾಯರ್ಾ ನಿರ್ವಹಣೆಯೂ ಆರಂಭವಾಗಿಲ್ಲ.  ಶಿರಸಿ, ಸಿದ್ದಾಪುರ, ಕಾರವಾರದಲ್ಲಿ ಇಂದಿರಾ ಕ್ಯಾಂಟೀನ್ಗೆ ಭೂಮಿಯನ್ನು ಗುರುತಿಸಿ ಇಂದಿರಾ ಕ್ಯಾಂಟೀನ್ ನಡೆಸುವವರಿಗೆ ಹಸ್ತಾಂತರಿಸಲು  ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತಗಳು ತಡಮಾಡಿದವು. ಮುಂಡಗೋಡದಲ್ಲಿ ಸಹ ಸ್ಥಳದ ಸಮಸ್ಯೆ. ಇಂದಿರಾ ಕ್ಯಾಂಟೀನ್ಗೆ ಕ್ಯಾಂಟೀನ್ ಮಾದರಿಯ ಶೆಡ್ ಹಾಗೂ ಅಡುಗೆ ಸಾಮಾಗ್ರಿ ಎಲ್ಲವೂ ರಾಜ್ಯದ ವಿವಿಧ ತಾಲೂಕಿಗೆ ಸರಬರಾಜು ಮಾಡಲು ಕಂಪನಿಯೊಂದು ಗುತ್ತಿಗೆ ಪಡೆದಿದ್ದು, ಮುಂಡಗೋಡಗೆ ಸಾಮಾಗ್ರಿ ಬಂದು, ಅಲ್ಲಿನ ಪಟ್ಟಣ ಪಂಚಾಂಯತ್ ಗೋಡಾನ್ನಲ್ಲಿ ಕೊಳೆಯುವಂತಾಗಿದೆ. ದಾಂಡೇಲಿಯಲ್ಲಿ ಸಹ ಕ್ಯಾಂಟೀನ್ ಆರಂಭವಾಗುವ ಹಂತಕ್ಕೆ ಬಂದಿದೆ. ಆದರೆ ಪ್ರಾರಂಭವಾಗಿಲ್ಲ. ಮುಂಡಗೋಡದಲ್ಲಿ ಮುನ್ಸಿಪಲ್ ಜಾಗ ಸಿಕ್ಕಿದೆ. ಯಲ್ಲಾಪುರದಲ್ಲಿ ತಾಲೂಕಾ ಪಂಚಾಯತ್ ಸವರ್ೆ ನಂಬರ್ 57 ರಲ್ಲಿ ಭೂಮಿ ನೀಡಿದೆ. ಕಾಮಗಾರಿ ಆರಂಭವಾಗಬೇಕಿದೆ.

ಎಲ್ಲೆಲ್ಲಿ ಇಂದಿರಾ ಕ್ಯಾಂಟೀನ್ಗೆ ಭೂಮಿ :

ದಾಂಡೇಲಿ, ಹಳಿಯಾಳ, ಕಾರವಾರ, ಕುಮಟಾಗಳಲ್ಲಿ ಮುನ್ಸಿಪಲ್ ಭೂಮಿ ಇಂದಿರಾ ಕ್ಯಾಂಟೀನ್ಗೆ ದೊರೆತಿದೆ. ಆದರೆ ಕಾಮಗಾರಿ ಇನ್ನು ಆರಂಭವಾಗಿಲ್ಲ.ಭಟ್ಕಳದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಭೂಮಿ ಸಿಕ್ಕಿದೆ. ಅಂಕೋಲಾದಲ್ಲಿ ಸಕರ್ಾರಿ ಆಸ್ಪತ್ರೆಯ ಭೂಮಿ ದೊರೆತಿದೆ. ಹೊನ್ನಾವರದಲ್ಲಿ ಲೋಕೋಪಯೋಗಿ ಇಲಾಖೆಯ ಒಡೆತನದ ಭೂಮಿ ಸಿಕ್ಕಿದೆ. ಶಿರಸಿಯಲ್ಲಿ ಮುನ್ಸಿಪಲ್ ಪೆಸಿಡೆಂಟ್ ಭೂಮಿ ಒದಗಿಸಿದ್ದಾರೆ.  ಸಿಟಿಎಸ್ ನಂ.281 ಭೂಮಿ ಅಲಾಟ್ ಮಾಡಲಾಗಿದೆ. ಸಿದ್ದಾಪುರದಲ್ಲಿ ಸಕರ್ಾರಿ ಜಾಗೆ ನೀಡಲಾಗಿದೆ. ಕಾರವಾರ,ಮುಂಡಗೋಡ,ಕುಮಟಾ, ಕಾರವಾರ, ದಾಂಡೇಲಿ, ಹಳಿಯಾಳದಲ್ಲಿ ಮುನ್ಸಿಪಲ್ ಒಡೆತನದ ಭೂಮಿಗಳನ್ನು ಇಂದಿರಾ ಕ್ಯಾಂಟೀನ್ಗೆ ನೀಡಲಾಗಿದೆ.

ಕಾರವಾರದಲ್ಲಿ ಆರಂಭದಲ್ಲಿ ವಿವಾದ:

ಕಾರವಾರದಲ್ಲಿ ಇಂದಿರಾ ಕ್ಯಾಂಟೀನ್ಗೆ ಬಾಯಿ ಕುವರಬಾಯಿ ಶಾಲೆಯ ಆವರಣದಲ್ಲಿ ಭೂಮಿ ನೀಡಲಾಗಿತ್ತು. ಆದರೆ ಅಲ್ಲಿನ ವಾಣಿಜ್ಯ ಲಾಬಿ ಇಂದಿರಾ ಕ್ಯಾಂಟೀನ್ ಬರಲು ಬಿಡಲಿಲ್ಲ. ಶಿಕ್ಷಣದ ಹೆಸರಿನ ಪಟ್ಟಭದ್ರ ಹಿತಾಸಕ್ತಿಗಳು ಇಂದಿರಾ ಕ್ಯಾಂಟೀನ್ ಬರದಂತೆ ನೋಡಿಕೊಂಡವು. ನಂತರ ಸ್ವಿಮ್ಮಿಂಗ್ ಫೂಲ್ ಪಕ್ಕದ ಭೂಮಿ ನೀಡಲಾಗಿತ್ತು. ಅದು ಸಹ ಆಯಕಟ್ಟಿನ ಸ್ಥಳವಾಗಿತ್ತು. ಆ ಜಾಗದಲ್ಲಿ ಸಹ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಅಡ್ಡಿಪಡಿಸಲಾಯಿತು. ಕೊನೆಗ ಕೆಇಬಿ ರಸ್ತೆಯಲ್ಲಿನ ಹೆಸ್ಕಾಂ ಎದುರಿನ ನಗರಸಭೆಯ ಭೂಮಿಯನ್ನು ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸ್ಥಳ ನಿಗದಿ ಮಾಡಲಾಗಿದೆ.

ಎಲ್ಲೆಲ್ಲಿ ಎಷ್ಟು ಜನರಿಗೆ ಊಟಕ್ಕೆ ಅವಕಾಶ:

ಇಂದಿರಾ ಕ್ಯಾಂಟೀನ್ನಲ್ಲಿ ಕಾರವಾರ, ದಾಂಡೇಲಿ, ಶಿರಸಿ ನಗರಗಳಲ್ಲಿ ತಲಾ 500 ಜನರಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಲು ಗುತ್ತಿಗೆದಾರರಿಗೆ ಆರ್ಡರ್ ನೀಡಲಾಗಿದೆ. ಭಟ್ಕಳ,ಕುಮಟಾ,ಹಳಿಯಾಳದಲ್ಲಿ ತಲಾ 300 ಜನರಿಗೆ ಕಡಿಮೆ ವೆಚ್ಚದಲ್ಲಿ ಬಡವರಿಗೆ ಇಂದಿರಾ ಕ್ಯಾಂಟೀನ್ ಊಟ ತಿಂಡಿ ನೀಡಲು ಸಕರ್ಾರ ವ್ಯವಸ್ಥೆ ಮಾಡಿದೆ. ಅಂಕೋಲಾ,ಹೊನ್ನಾವರ, ಸಿದ್ದಾಪುರ, ಯಲ್ಲಾಪುರ, ಮೂಂಡಗೋಡಗಳಲ್ಲಿ ತಲಾ 200 ಜನರಿಗೆ ಊಟ ತಿಂಡಿ ವ್ಯವಸ್ಥೆಗೆ ಆದೇಶವಾಗಿದೆ.

ಕ್ಯಾಂಟೀನ್ ನಿಮರ್ಾಣವಾಗಬೇಕಿದೆ :

ಇಂದಿರಾ ಕ್ಯಾಂಟೀನ್ಗೆ ನಿದರ್ಿಷ್ಟ ಮಾದರಿಯ ರೂಪವನ್ನು ಗುತ್ತಿಗೆ ಸಂಸ್ಥೆ ಬೆಂಗಳೂರಿನ ಕೆಇಎಫ್ ಇನ್ಪ್ರಾಸ್ಟ್ರಕ್ಚರ್ ಇಂಡಿಯಾ ಪ್ರವೇಟ್ ಲಿ. ಸಿದ್ಧಮಾಡಿಕೊಂಡಿದೆ. ಆದರೆ ಈ ಸಂಸ್ಥೆ ಈಗ ಹಾವೇರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ ರೂಪಿಸುತ್ತಿದೆ. ಅದು ಮುಗಿದು ಉತ್ತರ ಕನ್ನಡ ಜಿಲ್ಲೆಗೆ ಬರುವಾಗ ಎರಡು ತಿಂಗಳು ಆಗಬಹುದು. ಅಂದರೆ ಅಗಸ್ಟಗೆ ಒಂದೆರಡು ಕಡೆ ಇಂದಿರಾ ಕ್ಯಾಂಟೀನ್ ಆರಂಭವಾಗಬಹುದು. ಸೆಪ್ಟಂಬರ್, ಅಕ್ಟೋಬರ್ ವೇಳೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಬಹುದು ಎಂದು ನಗರಾಭಿವೃದ್ಧಿಕೋಶದ ಅಧಿಕಾರಿಗಳ ಅಂಬೋಣ.