ಇಂದಿರಾ ನೂಯಿ ಜಾಗತಿಕವಾಗಿ ಅತ್ಯಂತ ಪ್ರಭಾವಿ ಮಹಿಳೆ: ಟ್ರಂಪ್

ಇಂದಿರಾ ನೂಯಿ ಜಾಗತಿಕವಾಗಿ ಅತ್ಯಂತ ಪ್ರಭಾವಿ ಮಹಿಳೆ: ಟ್ರಂಪ್ ನ್ಯೂಯಾರ್ಕ, ಅ.08 - ಪೆಪ್ಸಿಕೋ ಕಂಪನಿ ಸಿಇಒ ಸ್ಥಾನದಿಂ


ನ್ಯೂಯಾರ್ಕ, ಅ.08 - ಪೆಪ್ಸಿಕೋ ಕಂಪನಿ ಸಿಇಒ ಸ್ಥಾನದಿಂದ ಹೊರ ನಡಯುತ್ತಿರುವ ಇಂದಿರಾ ನೂಯಿ, ಮಾಸ್ಟರ್ ಕಾಡರ್್ ಚೀಫ್ ಅಜಯ್ ಬಂಗಾ ಸೇರಿದಂತೆ ಇನ್ನಿತರೆ ಕಾಪರ್ೊರೆಟ್ ಕಂಪನಿಗಳ ಬಾಸ್ಗಳೊಂದಿಗೆ ಅಮೆರಿಕ ಆಥರ್ಿಕತೆ ಕುರಿತಂತೆ ಚಚರ್ಿಸಿದರು.

ನ್ಯೂಜೆಸರ್ಿಯ ತಮ್ಮ ಖಾಸಗಿ ಗಾಲ್ಫ್ ಕ್ಲಬ್ ನಲ್ಲಿ ಔತಣಕೂಟ ಏರ್ಪಡಿಸಿದ್ದರು. ಈ ವೇಳೆ ದೇಶದ ಆಥರ್ಿಕತೆ ಬಲಪಡಿಸಲು ಅವರಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆದುಕೊಂಡರು. 

ಇಂದಿರಾನೂಯಿ ತಮ್ಮ ಪತಿ ರಾಜ್ ನೂಯಿ ಹಾಗು ರಿತು ಬಂಗಾ ಜತೆ ಔತಣಕೂಟದಲ್ಲಿ ಭಾಗಿಯಾಗಿದ್ದರು. ಇವರಲ್ಲದೇ, ಸುಮಾರು 15 ಉದ್ಯಮ ಐಕಾನ್ಗಳು ಪಾಲ್ಗೊಂಡಿದ್ದರು.

ಇದರಲ್ಲಿ ಫಿಯೆಟ್ ಸಿಇಒ ಮೈಕಲ್ ಮ್ಯಾನ್ಲೇ, ಫೆಡ್ ಎಕ್ಸ್ ಅಧ್ಯಕ್ಷ ಫ್ರೆಡ್ರಿಕ್ ಸ್ಮಿತ್, ಬೋಯಿಂಗ್ ಚೀಫ್ ಎಕ್ಸಕ್ಯೂಟಿವ್ ಡೆನ್ನಿಸ್ ಮೂಲೆನ್ಬರ್ಗ, ಟ್ರಂಪ್ ಪತ್ನಿ ಮೆಲೆನಿಯಾ, ಮಗಳು ಇವಾಂಕಾ ಅವರ ಪತಿ ಜರೇದ್ ಕುಸ್ನರ್ ಔತಣಕೂಟದಲ್ಲಿದ್ದರು. ಇಂದಿರಾ ನೂಯಿ ಅವರನ್ನ ಅಮೆರಿಕ ಅಧ್ಯಕ್ಷ ಡೂನಾಲ್ಡ್ ಟ್ರಂಪ್ ಜಾಗತಿಕವಾಗಿ ಅತ್ಯಂತ ಪ್ರಭಾವಿ ಮಹಿಳೆ ಎಂದು ಗುರುತಿಸಿದ್ದಾರೆ ಎಂದು ಹೇಳಲಾಗಿದೆ. 

ಇವರೆಲ್ಲರ ಸಲಹೆ ಮೇಲೆ ಅಮೆರಿಕ ಆಥರ್ಿಕತೆ ಮುಂಬರುವ ದಿನಗಳಲ್ಲಿ 5 ಅಂಕಿಗಳನ್ನು ದಾಟಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.