ಇಂದಿರಾ ಗಾಂಧಿ 102 ಜಯಂತಿ: ರಾಹುಲ್ ಶ್ರದ್ಧಾಂಜಲಿ

ನವದೆಹಲಿ, ನ.19 :      ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ತಮ್ಮ ಅಜ್ಜಿ ಹಾಗೂ ದೇಶದ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 102ನೇ ಜಯಂತಿ ಅಂಗವಾಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿ ಸಮರ್ಥ ನಾಯಕತ್ವ ಹಾಗೂ ವಿಶಿಷ್ಟ ಆಡಳಿತ ಮತ್ತು ವ್ಯವಸ್ಥಾಪಕ ಕೌಶಲ್ಯಗಳನ್ನು ಹೊಂದಿದ್ದರು, ಅವರು ಭಾರತವನ್ನು ಬಲಪಡಿಸುವ ಮತ್ತು ಪ್ರಬಲ ರಾಷ್ಟ್ರವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.   ಪ್ರಬಲ ಮತ್ತು ಸಮರ್ಥ ನಾಯಕತ್ವ, ಅತ್ಯುತ್ತಮ ವ್ಯವಸ್ಥಾಪಕ ಮತ್ತು ಆಡಳಿತಾತ್ಮಕ ಕೌಶಲ್ಯ ಹೊಂದಿದ್ದ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರನ್ನು ನೆನಪಿಸಿಕೊಳ್ಳುತ್ತೇನೆ ಮತ್ತು ನನ್ನ ಪ್ರೀತಿಯ ಅಜ್ಜಿ ಇಂದಿರಾಗಾಂಧಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.