ಬೆಳಗಾವಿ: ಪೌರತ್ವ ಕಾಯ್ದೆ ಕುರಿತು ದೇಶದಲ್ಲಿ ಸುಳ್ಳು ವದಂತಿ ಹಬ್ಬಿಸಲಾಗುತಿದ್ದು, ಈ ಕಾಯ್ದೆಯಿಂದ ಯಾರ ಪೌರತ್ವವೂ ಹೋಗುವುದಿಲ್ಲ. ಆನರು ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕು ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉದ್ಧೇಶಿಸಿ ಮಾತನಾಡಿ, ವಿಪಕ್ಷಿಯರು ಸಿಎಬಿ ಜಾರಿಗೆ ವಿರೋಧಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ಮತ್ತು ರೇಲ್ವೆ ಇಲಾಖೆಯ ಆಸ್ತಿಗೆ ಹಾನಿ ಮಾಡಬಾರದು. ಇದರ ವಿರುದ್ಧ ಆಯಾ ರಾಜ್ಯದ ಸಕರ್ಾರ ಕಠಿಣ ಕ್ರಮ ಕೈಗೊಳ್ಳಬೇಕೆಂದರು.
ಪಿಎಂ ಮೋದಿ ದೇಶದಲ್ಲಿ ಐತಿಹಾಸಿಕ ಕ್ರಮ ಕೈಗೊಂಡಿದ್ದಾರೆ. 370 ಕಾಯ್ದೆ, ತಲಾಖ್ ರಾಮಮಂದಿರ ಮತ್ತು ಸಿಎಬಿ ಜಾರಿಗೆ ತಂದಿದ್ದಾರೆ. ಅಪಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾ ರಾಷ್ಟ್ರಗಳನ್ನ ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸುತ್ತಿದ್ದಂತೆ ಅಲ್ಲಿನ ಜನ ಭಾರತಕ್ಕೆ ಬರಲು ಪ್ರಯತ್ನಿಸಿದರು. ಇದಕ್ಕಾಗಿ ಕೇಂದ್ರ ಗೃಹ ಸಚಿವರು ಸಿಎಬಿ ಜಾರಿಗೆ ತಂದಿದ್ದಾರೆ. ಆದರೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ ಎಂದು
ಗ್ರಾಮೀಣ ಜಿಲ್ಲಾಧ್ಯಕ್ಷ ಡಾ.ವಿಐ.ಪಾಟೀಲ, ನಗರಾಧ್ಯಕ್ಷ ರಾಜೇಂದ್ರ ಹರಕುಣಿ, ಶಾಸಕ ಅಭಯ ಪಾಟೀಲ, ಎಂ.ಬಿ.ಜಿಲರ್ಿ ಸೇರಿದಂತೆ ಉಪಸ್ಥಿತರಿದ್ಧರು.