ಬೆಳಗಾವಿ: ಭಾರತೀಯ ಸನ್ನೆಭಾಷೆ ತರಬೇತಿ ಕಾರ್ಯಗಾರ

ಲೋಕದರ್ಶನ ವರದಿ

ಬೆಳಗಾವಿ 26:  ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ.ಪಿ.ಡಿ) ಬೆಳಗಾವಿ ಸಂಸ್ಥೆಯ ಕಛೇರಿ ರಾಮತೀರ್ಥ ನಗರದಲ್ಲಿ ಇಂದು ಭಾರತೀಯ ಸನ್ನೆಭಾಷೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ವಿಕಲಚೇತನ ಸಮುದಾಯಕ್ಕೆ ಸೇವೆ ಸಲ್ಲಿಸಲು ನುರಿತ ಕೌಶಲ್ಯವುಳ್ಳ ಜನರನ್ನು ತಯಾರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಮೂರು ದಿನಗಳಕಾಲ ನಡೆಯಲಿರುವ ಈ ಕಾಯರ್ಾಗಾರವನ್ನು ಉದ್ಘಾಟಿಸಿದ ಸರಕಾರಿ ಕಿವುಡ ಹೆಣ್ಣುಮಕ್ಕಳ ಶಾಲೆಯ ಅಧೀಕ್ಷಕ ಆರ್.ಬಿ. ಬನಶಂಕರಿ ಮಾತನಾಡುತ್ತ ವಾಕ್ ಮತ್ತು ಶ್ರವಣ ನ್ಯೂನ್ಯತೆಯುಳ್ಳ ಸಮುದಾಯದ ಬೆಳವಣಿಗೆಗೆ ನಮ್ಮೆಲ್ಲರ ಸಹಕಾರ ಬಹಳ ಮುಖ್ಯವಾದದ್ದು. ಸನ್ನೆಭಾಷೆ ಕೂಡ ಎಲ್ಲ ಭಾಷೆಗಳಂತೆ ಒಂದು ಸುಂದರವಾದ ಭಾಷೆಯಾಗಿದೆ. ಹವ್ಯಾಸಕ್ಕಾದರೂ ಸಮುದಾಯದ ಎಲ್ಲ ಜನರು ಈ ಭಾಷೆಯನ್ನು ಕಲಿಯಿರಿ ತನ್ಮೂಲಕ ಸಂವಹನ ಮಾಡಿ ವಾಕ್ ಮತ್ತು ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳು ಮತ್ತು ಜನರು ಮುಖ್ಯವಾಹಿನಿಯಲ್ಲಿ ಬದುಕಲು ಹೆಚ್ಚಿನ ವಾತಾವರಣ ನಿಮರ್ಾಣಮಾಡಿ ಎಂದು ಕರೆನೀಡಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಂದಿ ಟಾಯಸ್ರ್ನ ಮಾಲೀಕರದ ವಿಜಯಕುಮಾರ ಮಾತನಾಡುತ್ತ ವಿಕಲಚೇತನ ಸಮುದಾಯದ ಅಭಿವೃದ್ದಿ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾದದ್ದು ಈ ನಿಟ್ಟಿನಲ್ಲಿ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮಗಳು ಬಹಳ ಮಹತ್ವವಾದ ಪಾತ್ರವಹಿಸುತ್ತವೆ, ಸದರಿ ಪ್ರಯತ್ನಕ್ಕೆ ಸಂಸ್ಥೆಗೆ ಧನ್ಯವಾದಗಳನ್ನು ಹೇಳಿದರು. 

ಇನ್ನೋರ್ವ ಅತಿಥಿಗಳಾಗಿ ಭಾಗವಹಿಸಿದ ಸಮಾಜಸೇವಕರಾದ ಸಂಜೋತಾ ವಿಜಯಕುಮಾರ ಮತ್ತು ಲತಾ ಕೆರೂರ ಮಾತನಾಡಿ ಸನ್ನೆಭಾಷೆ ನಮ್ಮ ದಿನನಿತ್ಯದ ಜೀವನದಲ್ಲಿ ಬಳಸುತ್ತೇವೆ ಆದರೆ ಅದರ ಶಾಸ್ತ್ರೋಕ್ತ ಕಲಿಕೆ ಸಂಹನವನ್ನು ಉತ್ತಮಗೊಳಿಸುತ್ತದೆ. ಅದಕ್ಕೆ ಇಂತದ ತರಬೇತಿ ಕಾರ್ಯಕ್ರಮಗಳು ಪ್ರಮುಖವಾದ ಪಾತ್ರವಹಿಸುವುದರಿಂದ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು. 

ರಮೇಶ ಗೊಂಗಡಿ ಸಹಾಯಕ ನಿದರ್ೆಶಕರು ಎ.ಪಿ.ಡಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಸನ್ನೆಭಾಷೆ ವಾಕ್ ಮತ್ತು ಶ್ರವಣ ನ್ಯೂನ್ಯತೆಯುಳ್ಳ ಸಮುದಾಯದ ಜೀವಾಳವಾಗಿದೆ. ನಾವೆಲ್ಲ ಈ ಭಾಷೆಯನ್ನು ಕಲಿತು ಸದರಿ ಸಮುದಾಯಕ್ಕೆ ನೆರವಾಗೋಣ, ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ಹಾರೈಸಿದರು. 

ಬಾಬು ನೇಜಕರ ವಿಭಾಗೀಯ ವ್ಯವಸ್ಥಾಪಕರು ಎ.ಪಿ.ಡಿ ಇವರು ಪ್ರಸ್ತಾವಿಕವಾಗಿ ಮಾತನಡಿ ಸದರೈ ತರಬೇತಿ ಕಾಯರ್ಾಗಾರದ ಉದ್ದೇಶ, ಎ.ಪಿ.ಡಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಪರಿಚಯ ಮಾಡುವುದರೊಂದಿಗೆ ಎಲ್ಲರಿಗೂ ಶುಭಕೋರಿದರು.  

ಸಚೇತಾ.ಜಿ.ಎಂ-ಕಾರ್ಯಕ್ರಮ ನಿರೂಪಿಸಿದರು, ಚನ್ನಪ್ಪ.ಕೆ-ಪ್ರಾಥರ್ಿಸಿದರು, ಕು.ಸುಪ್ರಿತ ರೇವಣಕರ-ಸ್ವಾಗತಿಸಿದರು, ಬಸವರಾಜು.ಎಂ.ಕೆ-ವಂದಿಸಿದರು. ಜೆ.ಎಸ್.ಒಡೆಯರ, ಸಂತೋಷ ಹಳಮನಿ, ಸುಜಾತಾ ಅರಗಂಜಿ, ಹರೀಶ ಶೆಟ್ಟಿ ಮತ್ತು ಸರಕಾರ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

****