ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸೇವೆ ಶ್ಲಾಘನೀಯ: ಪ್ರೋ. ರಾಮಚಂದ್ರಗೌಡ

ಬೆಳಗಾವಿ, 15: ಯುವಜನತೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಹಾಗೂ ಪರಿಹಾರೋಪಾಯಗಳಲ್ಲಿ ತೊಡಗಿಸಿಕೊಂಡು ಸಮಾಜವನ್ನು ರಕ್ಷಿಸುವಲ್ಲಿ ತೊಡಗಿಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಎಂ.ರಾಮಚಂದ್ರಗೌಡ ಅವರು ಸಂಗೊಳ್ಳಿ ರಾಯಣ್ಣ ಪ್ರಥಮದಜರ್ೆ ಘಟಕ ಮಹಾವಿದ್ಯಾಲಯದಲ್ಲಿ ಜರುಗಿದ ಯುವ ರೆಡ್ಕ್ರಾಸ ಸಂಘ ಉದ್ಘಾಟಸಿ ಮಾತನಾಡಿದರು.

ವಿಪತ್ತುಗಳು ಅನಿರೀಕ್ಷಿತ ಆದರೆ ಆ ಸಂದರ್ಭದಲ್ಲಿ ಅವುಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು ಅವಶ್ಯವಾದುದರಿಂದ ರೆಡ್ ಕ್ರಾಸ್ನಂತಹ ಸಂಘಗಳು ವರ್ಷವಿಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವ ವಿದ್ಯಾಥರ್ಿಗಳಲ್ಲಿ ಅರಿವನ್ನು ಮೂಡಿಸಬೇಕು ಎಂದರು. ಈ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತವನ್ನು ನೀಡಿದುದನ್ನು ನೆನಪಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ವಿಜಯಲಕ್ಷ್ಮಿ ಶಿಗಿಹಳ್ಳಿ, ನೋಡೆಲ್ ಆಫೀಸರ್, ಯುವ ರೆಡ್ ಕ್ರಾಸ್ ವಿಭಾಗ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇವರು ಮಾತನಾಡುತ್ತಾ ವಿದ್ಯಾಥರ್ಿಗಳು ರೆಡ್ ಕ್ರಾಸ್ ಮುಖಾಂತರ ಸಮಾಜ ಸೇವೆಯನ್ನು ಮಾಡುವುದನ್ನು ಬೆಳೆಸಿಕೊಳ್ಳಬೇಕೆಂದು ಕರೆನೀಡಿದರು. ಅತಿಥಿಯಾಗಿ ಆಗಮಿಸಿದ ಡಾ.ಡಿ.ಎನ್. ಮಿಸಾಳೆ ಕಾರ್ಯದಶರ್ಿಗಳು, ರೆಡ್ ಕ್ರಾಸ ವಿಭಾಗ ಬೆಳಗಾವಿ ಇವರು ಮಾತನಾಡಿ "ಸೇವೆ ಮಾಡುವುದರಲ್ಲಿ ಜೀವನದ ಸಾರ್ಥಕತೆ ಇದೆ ಅದರಿಂದ ಮತ್ತೊಬ್ಬರ ಹೃದಯ ಗೆಲ್ಲಬಹುದು" ಎಂಬ ವಾಕ್ಯಗಳನ್ನು ಹೇಳುವ ಮೂಲಕ ನಿಸ್ವಾರ್ಥ ಸೇವೆಯ ಕುರಿತು ಎಲ್ಲಾ ವಿದ್ಯಾಥರ್ಿಗಳಿಗೆ ಮನ ಮುಟ್ಟುವಂತೆ ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದರು. ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಡಾ. ಸುಮಂತ ಹಿರೇಮಠ ಸಂಯೊಜಕರು, ಯುವ ರೆಡ್ ಕ್ರಾಸ ವಿಂಗ್ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇವರು ಮಾತನಾಡುತ್ತಾ ಯುವಕ ಯುವತಿಯರ ಕರ್ತವ್ಯ ಹಾಗೂ ನಿಯಮಗಳನ್ನು ವಿವರಿಸಿದರು.

ಅಶೋಕ ಬದಾಮಿ ಮುಖ್ಯಸ್ಥರು, ಇಂಡಿಯನ್ ರೆಡ್ ಕ್ರಾಸ ಸಂಸ್ಥೆಯ ಹುಟ್ಟು ಅವರು ಮಾತನಾಡಿ, ಯುವ ರೆಡ್ ಕ್ರಾಸ್ನ ಮಹತ್ವ ಹಾಗೂ ಉಪಯೋಗಗಳನ್ನು ಎಲ್ಲರಿಗೂ ಸವಿವರವಾಗಿ ತಿಳಿಸುತ್ತಾ ಇಂದಿನ ಜಗತ್ತಿನಲ್ಲಿ ಈ ಸಂಸ್ಥೆಗೆ ಸಹಕಾರ ಬೇಕಾಗಿದೆ ಅದಕ್ಕಾಗಿ ಎಲ್ಲ ವಿದ್ಯಾಥರ್ಿಗಳು ರೆಡ್ ಕ್ರಾಸ ಸಂಸ್ಥೆಯನ್ನು ಸೇರಿ ಸೇವೆ ಸಲ್ಲಿಸಬೇಕು ಎಂದರು.  

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಬಿ.ಎಸ್. ನಾವಿ ಅವರು ತತರ್ು ಸಂದರ್ಭದಲ್ಲಿ ನೆರವನ್ನು ನೀಡುವಲ್ಲಿ ಹಾಗೂ ರಕ್ತದಾನ ಮಾಡುವಲ್ಲಿ ರೆಡ್ ಕ್ರಾಸ್ ವಿಭಾಗವು ಪ್ರಮುಖವಾಗಿದೆ ಎಂದು ವಿವರಿಸಿದರು. ಸಮಾರಂಭದಲ್ಲಿ ಕಾಲೇಜಿನ ರೆಡ್ ಕ್ರಾಸ್ನ ಅಧಿಕಾರಿಗಳಾದ ಪ್ರೋ.ಬಾಲಾಜಿ ಆಳಂದೆರವರು ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾಶ್ರೀ ದೋಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾರಂಭದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕು.ಶಿಲ್ಪಾ ಹುಲಿಕಟ್ಟಿ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಗಿಸಿದರು.