ಕೋಲ್ಕತಾ, 10 ,ಇಂಡಿಯನ್ ಕಾಫಿ ಹೌಸ್ ಸರಬರಾಜು ಮಾಡುವ ಕಾಫಿ ಗುಟುಕರಿಸುತ್ತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಡನೆ ಎಲ್ಲಿ ಬೇಕಾದರೂ ಸಭೆ ನಡೆಸಲು ಸಿದ್ಧ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಸಭೆ ಹೇಳಿಕೊಂಡಿದ್ದಾರೆ ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಪಾಲರು “ಕೋಲ್ಕತಾದ ಪ್ರಖ್ಯಾತ ಇಂಡಿಯನ್ ಕಾಫಿ ಹೌಸ್ನಲ್ಲಿ ರಕ್ತದಾನಿ ಸಂಘಟಕರು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದೆ. ಅಲ್ಲಿ ಕಾಫಿ ಕುಡಿದ ಕ್ಷಣಗಳನ್ನು ಮರೆಯುವಂತಿಲ್ಲ” ಎಂದಿದ್ದಾರೆ. ಅಲ್ಲದೆ, “ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಡನೆ ಯಾವುದೇ ಸ್ಥಳದಲ್ಲಾದರೂ ಸಭೆ ಆಯೋಜಿಸಿ. ಇಂಡಿಯನ್ ಕಾಫಿ ಹೌಸ್ ಪೂರೈಸಿದ ಕಾಫಿಯೊಂದಿಗೆ ಮಾತುಕತೆ ನಡೆಸಲು ಸಿದ್ಧ” ಎಂದು ಹೇಳಿದ್ದಾರೆ. “ನಾನು ಪತ್ನಿಯೊಡನೆ ಇಂಡಿಯನ್ ಕಾಫಿ ಹೌಸ್ನ ಮೊದಲ ಮಹಡಿಯಲ್ಲಿ ಸ್ವಾಧಭರಿತ ಕಾಫಿ ಗುಟುಕರಿಸಿದ್ದೇನೆ. ಇಲ್ಲಿಗೆ ಕಾಫಿ ಪ್ರಿಯರು ಆಗಮಿಸಿ ಆನಂದಿಸಬಹುದು” ಎಂದೂ ಸಹ ರಾಜ್ಯಪಾಲ ಜಗದೀಪ್ ದಂಖರ್ ಟ್ವೀಟ್ ಮಾಡಿದ್ದಾರೆ.
-