ಕಟಕ್, ಜ.10 : ಆರಂಭಿಕ ಶೈಫಾಲಿ ವರ್ಮಾ ಅವರ ಅಜೇಯ 89 ರನ್ ಬಿರುಗಾಳಿಯ ಇನ್ನಿಂಗ್ಸ್ ನೆರವಿನಿಂದ ಭಾರತ ಸಿ ತಂಡ ಎಂಟು ವಿಕೆಟ್ಗಳಿಂದ ಭಾರತ ಬಿ ತಂಡವನ್ನು ಮಣಿಸಿ, ಮಹಿಳಾ ಟಿ 20 ಚಾಲೆಂಜರ್ ಟ್ರೋಫಿ ಗೆದ್ದಿದೆ.
ಭಾರತ ಬಿ 20 ಓವರ್ಗಳಲ್ಲಿ ಆರು ವಿಕೆಟ್ಗೆ 131 ರನ್ ಗಳಿಸಿತು. ವೆಲಸ್ವಾಮಿ ವನಿತಾ ಅಜೇಯ 25 ಮತ್ತು ಪೂಜಾ ವಸ್ತ್ರಕರ್ 22 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ಗಳ ಸಹಾಯದಿಂದ ಅಜೇಯ 43 ರನ್ ಗಳಿಸಿದರು. ನಾಯಕಿ ಸ್ಮೃತಿ ಮಂಧನಾ ರನ್ ಕಲೆ ಹಾಕುವಲ್ಲಿ ವಿಫಲರಾದರು. ಸಿ ತಂಡದ ಪರ ಮನಾಲಿ ದಕ್ಷಿಣಿ 15 ರನ್ಗಳಿಗೆ ಮೂರು ವಿಕೆಟ್ ಪಡೆದರು.
ಗುರಿಯನ್ನು ಬೆನ್ನತ್ತಿದ ಭಾರತ ಸಿ 15.2 ಓವರ್ಗಳಲ್ಲಿ ಎರಡು ವಿಕೆಟ್ಗೆ 135 ರನ್ ಗಳಿಸಿ ಪಂದ್ಯ ಮತ್ತು ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕೇವಲ 48 ಎಸೆತಗಳಲ್ಲಿ ಅಜೇಯ 89 ರನ್ ಸಿಡಿಸಿದ ಶೆಫಾಲಿ ಗೆಲುವಿನಲ್ಲಿ ಮಿಂಚಿದರು. ಮಾಧುರಿ ಮೆಹ್ತಾ 20 ಮತ್ತು ನಾಯಕ ವೇದ ಕೃಷ್ಣಮೂರ್ತಿ 15 ರನ್ ಗಳಿಸಿದರು.