ಮುಂಬೈ ಏಕದಿನ
ಪಂದ್ಯದಲ್ಲಿ ಟೀಂ ಇಂಡಿಯಾ ವೆಸ್ಟ್
ಇಂಡೀಸ್ ವಿರುದ್ಧ 224 ರನ್ಗಳ ಭರ್ಜರಿ ಗೆಲುವು
ದಾಖಲಿಸಿದೆ. ಇಲ್ಲಿನ ಬ್ರೇಬೋರ್ನ್ ಮೈದಾನದಲ್ಲಿ ನಡೆದ
ನಾಲ್ಕನೆ ಏಕದಿನ ಪಂದ್ಯದಲ್ಲಿ
ಟಾಸ್ ಗೆದ್ದು ಮೊದಲು
ಬ್ಯಾಟಿಂಗ್ ಮಾಡಿದ ಕೊಹ್ಲಿ
ಪಡೆ ಆರಂಭಿಕ ಬ್ಯಾಟ್ಸ್ ಮನ್
ರೋಹಿತ್ ಶರ್ಮಾ ಮತ್ತು ಅಂಬಾಟಿ
ರಾಯ್ಡು ಅವರ ಆಕರ್ಷಕ ಶತಕದ
ನೆರವಿನಿಂದ ನಿಗದಿತ ಓವರ್ನಲ್ಲಿ
5 ವಿಕೆಟ್ ನಷ್ಟಕ್ಕೆ 377 ರನ್ ಗಳಿಸಿತು. ಅಬ್ಬರದ
ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ 137 ಎಸೆತದಲ್ಲಿ 162 ರನ್ ಗಳಿಸಿದ್ರು. ಬಿಗ್ ಟಾರ್ಗೆಟ್ ಬೆನ್ನತ್ತಿದ
ವೆಸ್ಟ್ ಇಂಡೀಸ್ ಆಘಾತಗಳ ಮೇಲೆ
ಆಘಾತಗಳನ್ನ ಎದುರಿಸಿ 36.2 ಓವರ್ಗಳಲ್ಲಿ ಕೇವಲ 153 ರನ್ಗಳಿಗೆ ಆಲೌಟ್ ಆಯಿತು. ವಿಂಡೀಸ್ ನಾಯಕ ಜೆಸನ್
ಹೋಲ್ಡರ್ 54 ರನ್ ಗಳಿಸಿದ್ರು.