ಆಫ್ರಿಕಾಗೆ ಫಾಲೋ ಆನ್ ನೀಡಿದ ಭಾರತ

ಪುಣೆ, ಅ 13:     ಕಳೆದ 2008ರ ಬಳಿಕ ದಕ್ಷಿಣ ಆಫ್ರಿಕಾ ತಂಡವನ್ನು ಪಾಲೋ ಆನ್ಗೆ ತಳ್ಳಿದ ವಿಶ್ವದ ಮೊದಲನೇ ತಂಡ ಎಂಬ ಕೀರ್ತಿಗೆ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಭಾನುವಾರ ಭಾಜನವಾಯಿತು. 

 ಭಾರತ ತಂಡ, ಪ್ರವಾಸಿ ದಕ್ಷಿಣ ಆಫ್ರಿಕಾವನ್ನು ಫಾಲೋ ಆನ್ ನೀಡಿರುವುದು ಇತಿಹಾಸದಲ್ಲಿ ಇದೇ ಮೊದಲು. 

 ಪ್ರಥಮ ಇನಿಂಗ್ಸ್ ನಲ್ಲಿ ಭಾರತ 601 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಪ್ರಥಮ ಇನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ 275 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತ 326 ರನ್ ಮುನ್ನಡೆ ಪಡೆಯಿತು. ಇದರ ಫಲವಾಗಿ ಕೊಹ್ಲಿ ಫಾಲೋ ಆನ್ ಪಡೆಯುವ ಅವಕಾಶ ಪಡೆದು, ಪ್ರವಾಸಿ ತಂಡಕ್ಕೆ ದ್ವಿತೀಯ ಇನಿಂಗ್ಸ್ ಮಾಡುವಂತೆ ಹೇಳಿದರು. 

 ದಕ್ಷಿಣ ಆಫ್ರಿಕಾ ತಂಡಕ್ಕೆ ಫಾಲೋ ಆನ್ ನೀಡಿದ್ದ ಕೊನೆಯ ತಂಡ ಇಂಗ್ಲೆಂಡ್ ಆಗಿತ್ತು. ಇದರ ಪಟ್ಟಿಯಲ್ಲಿ ಈಗ ಭಾರತ ಸೇರ್ಪಡೆಯಾಗಿದೆ. ಪ್ರಥಮ ಇನಿಂಗ್ಸ್ ನಲ್ಲಿ ಆಫ್ರಿಕಾದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯುವಲ್ಲಿ ವಿಫಲರಾಗಿದ್ದರು. ಆದರೆ, ಕೆಳ ಕ್ರಮಾಂಕದಲ್ಲಿ ಕೇಶವ್ ಮಹರಾಜ್ ಹಾಗೂ ವೆರ್ನಾನ್ ಫಿಲೆಂಡರ್ ಜೋಡಿಯುಚ 109 ರನ್ ಜತೆಯಾಟವಾಡಿತ್ತು. ಆರ್. ಅಶ್ವಿನ್ ನಾಲ್ಕು ವಿಕೆಟ್ ಪಡೆದಿದ್ದರು. 

ದ್ವಿತೀಯ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲ 15 ಓವರ್ ಗಳಿಗೆ 5 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿದೆ.