ನವದೆಹಲಿ, ಮೇ ೨೨, ಸಾವಿರಾರು ಕೋಟಿರೂಪಾಯಿ ಬ್ಯಾಂಕ್ ಸಾಲಗಳ ಮರುಪಾವತಿ ಮಾಡದೆ ದೇಶದಿಂದ ಪರಾರಿಯಾಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರನ್ನು ದೇಶಕ್ಕೆ ಹಸ್ತಾಂತರಿಸಿಕೊಳ್ಳುವ ಸಂಬಂಧ ಬ್ರಿಟನ್ ಸರ್ಕಾರದೊಂದಿಗೆ, ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ೧೧ ಸಾವಿರ ಕೋಟಿ ರೂ ಗು ಹೆಚ್ಚು ಸಾಲಗಳನ್ನು ವಿವಿಧ ಬ್ಯಾಂಕುಗಳಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪವನ್ನು ವಿಜಯ್ ಮಲ್ಯ ಎದುರಿಸುತ್ತಿದ್ದಾರೆ.ವಿಜಯ್ ಮಲ್ಯ ಅವರನ್ನು ಬ್ರಿಟನ್ ನಿಂದ ಗಡೀಪಾರು ಮಾಡಬೇಕು ಎಂದು ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಲು ಅವರಿಗೆ ಅನುಮತಿ ಲಭಿಸಿಲ್ಲ. ಈ ಹಿನ್ನಲೆಯಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಬ್ರಿಟನ್ ಸರ್ಕಾರವನ್ನು ಭಾರತ ಸರ್ಕಾರ ಕೋರಿದೆ.ವಿಜಯ್ ಮಲ್ಯ, ಬ್ರಿಟನ್ ನ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕಾರವಾಗಿರುವ ಕಾರಣ, ಅವರನ್ನು ಭಾರತಕ್ಕೆ ಹಸ್ತಾಂತರಿಸಿಕೊಳ್ಳಲು ಮುಂದಿನ ಕ್ರಮಗಳ ಬಗ್ಗೆ ಬ್ರಿಟನ್ ಸರ್ಕಾರದೊಂದಿಗೆ ಭಾರತ ಚರ್ಚೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ ಭಾರತದ ಬ್ಯಾಂಕುಗಳಿಗೆ ಮಲ್ಯ ವಂಚನೆ ನಡೆಸಿದ ಆರೋಪಗಳ ಬಗ್ಗೆ ತನಿಖೆ ನಡೆಸಲು ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಕೆಳಗಿನ ನ್ಯಾಯಾಲಯ ತೀರ್ಪು ನೀಡಿತ್ತು. ಇದರ ವಿರುದ್ದ ಅವರು ಬ್ರಿಟನ್ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದದರು, ಹೈಕೋರ್ಟ್ ಅವರ ಆರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೊರ್ಟ್ ಮೇಲ್ಮನವಿ ಸಲ್ಲಿಸಲು ಅವರಿಗೆ ಅವಕಾಶ ಲಭಿಸದಿರುವುದು ಸಕಾರಾತ್ಮಕ ಸಂಕೇತ ಎಂದು ಭಾವಿಸಲಾಗಿದೆ.
ಈ ನಡುವೆ ವಿಜಯ್ ಮಲ್ಯ, ತಾನು ಪಡೆದುಕೊಂಡಿರುವ ಶೇ. ೧೦೦ ಸಾಲಗಳನ್ನು ಮರು ಪಾವತಿಸಲು ಸಿದ್ದವಾಗಿದ್ದು, ತನ್ನ ಮೇಲಿನ ಪ್ರಕರಣಗಳನ್ನು ಅಂತ್ಯಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.