ನವದೆಹಲಿ, ಫೆ 3, ಇತ್ತೀಚೆಗೆ ಚೀನಾದಲ್ಲಿ ವ್ಯಾಪಕವಾಗಿ ಕೊರೊನಾ ವೈರಾಣು ಸೋಂಕು ಹರಡುತ್ತಿದ್ದು ಈ ಸೋಂಕಿಗೆ ಬಲಿಯಾಗುತ್ತಿರುವವ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭಾರತ ತಾತ್ಕಾಲಿಕವಾಗಿ ಇ – ವೀಸಾ ರದ್ದುಗೊಳಿಸಿದೆ. ಚೀನಾದ ಪಾಸ್ ಪೋರ್ಟ್ ಹೊಂದಿದವರಿಗೆ ಮತ್ತು ಚೀನಾದಲ್ಲಿ ನೆಲೆಸಿರುವ ಇತರ ದೇಶದ ಪ್ರಜೆಗಳಿಗೆ ಈ ನಿಯಮ ಅನ್ವಯಿಸುತ್ತದೆ. ಈ ಹಿಂದೆ ನೀಡಲಾಗಿರುವ ಇ-ವೀಸಾ ಮಾನ್ಯವಾಗುವುದಿಲ್ಲ ಎಂದು ಈಗಾಗಲೇ ಇ- ವೀಸಾ ಪಡೆದಿರುವವರಿಗೆ ವಿದೇಶಾಂಗ ಸಚಿವಾಲಯ ತಿಳಿಸಿದೆ. ಭಾರತಕ್ಕೆ ಅನಿವಾರ್ಯ ಕಾರಣಗಳಿಂದ ಬರಲೇಬೇಕಾದ ಅಗತ್ಯವಿದ್ದಲ್ಲಿ ಅಂತಹವರು ಶಾಂಘೈ ಅಥವಾ ಗೌನ್ಜೋ ಗಳಲ್ಲಿನ ಭಾರತೀಯ ರಾಯಭಾರ ಕಚೇರಿ ಅಥವಾ ಭಾರತದ ವೀಸಾ ಅರ್ಜಿ ಸಲ್ಲಿಕೆ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ.