ನವದೆಹಲಿ 05: ರಫೇಲ್ ಅದ್ಭುತ ಯುದ್ಧವಿಮಾನವಾಗಿದ್ದು, ಇದು, ಭಾರತಕ್ಕೆ ಅಭೂತಪೂರ್ವ ಯುದ್ಧ ಸಾಮಥ್ರ್ಯವನ್ನು ನೀಡುತ್ತದೆ ಎಂದು ಭಾರತೀಯ ವಾಯುಸೇನೆ ಬುಧವಾರ ಹೇಳಿದೆ.
ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ಸಾಕಷ್ಟು ವಿವಾದಗಳು ಎದ್ದಿದ್ದು, ವಿರೋಧ ಪಕ್ಷಗಳು ಆಡಳಿತಾರೂಢ ಎನ್ಡಿಎ ಸಕರ್ಾರದ ವಿರುದ್ಧ ತೀವ್ರವಾಗಿ ಕಿಡಿಕಾರುತ್ತಿವೆ.
ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಭಾರತೀಯ ವಾಯುಸೇನೆ ಉಪಾಧ್ಯಕ್ಷ ಮಾರ್ಷಲ್ ಎಸ್.ಬಿ.ಡಿಯೋ ಅವರು, ರಫೇಲ್ ವಿಮಾನ ಅದ್ಭುತ ಯುದ್ಧ ವಿಮಾನವಾಗಿದ್ದು, ಇದು ಭಾರತಕ್ಕೆ ಅಭೂತಪೂರ್ವ ಯುದ್ಧ ಸಾಮಥ್ರ್ಯವನ್ನು ನೀಡುತ್ತದೆ. ಪ್ರಸ್ತುತ ರಫೇಲ್ ಒಪ್ಪಂದ ಕುರಿತು ಟೀಕೆ ಮಾಡುತ್ತಿರುವವರು ಆಳದಲ್ಲಿ ನಿಂತು ಅದರ ನಿಮಯ ಹಾಗೂ ಸಂಗ್ರಹಣ ವಿಧಾನಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ರಫೇಲ್ ಅದ್ಭುತ ಯುದ್ಧವಿಮಾನವಾಗಿದ್ದು, ಸಾಕಷ್ಟು ಸಾಮಥ್ರ್ಯವನ್ನು ಹೊಂದಿದೆ. ವಿಮಾನದಲ್ಲಿ ಹಾರಾಟ ನಡೆಸಲು ಕಾಯುತ್ತಿದ್ದೇವೆಂದು ತಿಳಿಸಿದ್ದಾರೆ.
2018ರ ಸೆಪ್ಟೆಂಬರ್ ತಿಂಗಳಿನಲ್ಲಿ ವಿಮಾನ ಭಾರತಕ್ಕೆ ಬರಲಿದೆ ಎಂದು ಹೇಳಲಾಗುತ್ತಿತ್ತು. ಈ ನಡುವೆ ಕಾಂಗ್ರೆಸ್ ಒಪ್ಪಂದ ಕುರಿತಂತೆ ಕೇಂದ್ರ ಸಕರ್ಾರವನ್ನು ಪ್ರಶಅನೆ ಮಾಡುತ್ತಿದೆ. ವಿಮಾನ ಖರೀದಿಯಲ್ಲಿ ಕೇಂದ್ರ ಸಕರ್ಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದೆ. ಆದರೆ, ಈ ಆರೋಪವನ್ನು ಸಕರ್ಾರ ತಿರಸ್ಕರಿಸಿದೆ.